ಬೆಂಗಳೂರು: ಮುಂದಿನ ಎರಡು ವಾರಗಳ ಕಾಲ ಕರ್ನಾಟಕದ ಹಲವೆಡೆ ಮಳೆ ಮುಂದುವರಿಯಲಿದೆ ಎಂದು ಭಾರತೀಯ ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು, ಶಿಮವೊಗ್ಗ, ಚಿಕ್ಕಮಗಳೂರು, ಕೊಡಗು, ಚಿತ್ರದುರ್ಗ, ದಾವಣಗೆರೆ, ವಿಜಯನಗರ ಜಿಲ್ಲೆಗಳಲ್ಲಿ ಮುಂದಿನ ಮೂರು ದಿನ ಜೋರು ಮಳೆ ಬರುವ ನಿರೀಕ್ಷೆಗಳು ಇವೆ.
ಇನ್ನೂ ಕರಾವಳಿ ಭಾಗದ ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸಹ ಶುಕ್ರವಾರದಿಂದ ಮೂರು ದಿನ ಮಳೆ ಅಬ್ಬರಿಲಿದೆ. ಮೂರು ದಿನಗಳ ನಂತರವು ಈ ಮಳೆ ತುಸು ದುರ್ಬಲಗೊಂಡರು ಸಹಿತ ಮತ್ತೆ ಡಿಸೆಂಬರ 1ರವರೆಗೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಉತ್ತರ ಒಳನಾಡಿನಲ್ಲಿ ಯಾವುದೇ ಮಳೆ ಮುನ್ಸೂಚನೆಗಳು ಇಲ್ಲ. ಆಗಾಗ ಬಿಸಿಲು ಕಡಿಮೆಯಾಗಿ ಮೋಡ ಕವಿದ ವಾತಾವರಣ ಅಲ್ಲಲ್ಲಿ ಕಂಡು ಬಂದರೂ ಸಹಿತ ತುಂತುರು ಮಳೆ ನಿರೀಕ್ಷೆ ಇದೆ ಹೊರತು ಜೋರು ಮಳೆ ಸಂಭವ ಇಲ್ಲ. ಅಲ್ಲದೇ ಇಲ್ಲಿನ ಹವಾಮಾನದಲ್ಲಿ ಯಾವುದೇ ಗಂಭೀರ ಸ್ವರೂಪದ ಲಕ್ಷಣಗಳು ಇಲ್ಲ ಎಂದು ತಿಳಿಸಲಾಗಿದೆ.