ಚಾಮರಾಜನಗರದಲ್ಲಿ ಜೋರು ಮಳೆ.. ಜನಜೀವನ ಅಸ್ತವ್ಯಸ್ತ!

ಚಾಮರಾಜನಗರ:- ಜಿಲ್ಲಾದ್ಯಂತ ಭಾರೀ ಮಳೆ ಸುರಿದಿದೆ. ಕಳೆದ ಒಂದು ವಾರದಿಂದ ಹಲವೆಡೆ ಭಾರೀ ಮಳೆ ಸುರಿದಿದ್ದು, ಭಾನುವಾರ ಇಡೀ‌ ದಿನ ಜಿಲ್ಲೆಯ ಹಲವೆಡೆ ಸತತ ಮಳೆ ಆಗಿದೆ. Chamarajanagar: ಭಾರೀ ಮಳೆಗೆ ಹುಕ್ಕಿ ಹರಿದ ಹಳ್ಳಕೊಳ್ಳಗಳು…! ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದ್ದು, ಚಾಮರಾಜನಗರ, ಹನೂರು, ಗುಂಡ್ಲುಪೇಟೆ, ಕೊಳ್ಳೇಗಾಲ, ಯಳಂದೂರು ಐದು ತಾಲೂಕಿನಲ್ಲೂ ಮಳೆ ಸುರಿದಿದೆ. ಭಾರೀ ಮಳೆಗೆ ಹಲವು ಕಡೆ ಮನೆಗಳ ಕುಸಿತವಾಗಿದೆ. ಭಾನುವಾರ ರಾತ್ರಿ 7 ಗಂಟೆಯಲ್ಲಿ ಶುರುವಾದ ಮಳೆ ಮುಂಜಾನೆ 2 ಗಂಟೆವರೆಗೆ ಜಿಟಿಜಿಟಿ ಮಳೆಯಾಗಿದೆ.