ತೆರೆದ ಲಸಿಕಾ ಬಾಟಲಿ ನೀತಿಯನ್ನು ಅನುಸರಿಸದಂತೆ ಖಾಸಗಿ ಆಸ್ಪತ್ರೆಗಳಿಗೆ ಆರೋಗ್ಯ ಇಲಾಖೆ ಸುತ್ತೋಲೆಯನ್ನು ಹೊರಡಿಸಿದೆ. ಖಾಸಗಿ ಆಸ್ಪತ್ರೆಗಳು ಒಮ್ಮೆ ತೆರೆದ ಲಸಿಕಾ ಬಾಟಲಿಗಳನ್ನು ಮರು ಬಳಕೆ ಮಾಡುವಂತಿಲ್ಲ. ಹಾಗೂ ಒಮ್ಮೆ ತೆರೆದ ಲಸಿಕಾ ಬಾಟಲ್ ತೆರೆದ ಬಾಟಲಿಯನ್ನು 4 ಗಂಟೆಗಳ ಒಳಗೆ ಬಳಸಬೇಕು. ಕೋವ್ಯಾಕ್ಸಿನ್ ಲಸಿಕೆಗೆ ಓಪನ್ – ವಯಲ್ ನೀತಿಯನ್ನು ಅನುಮತಿಸಲಾಗುವುದಿಲ್ಲ ಅಂತ ಕೇಂದ್ರದಿಂದ ರಾಜ್ಯ ಸರ್ಕಾರಕ್ಕೆ ಸ್ಪಷ್ಟನೆ ನೀಡಿದ್ದು, ಹೀಗಾಗಿ ತೆರೆದ ಬಾಟಲಿ ನೀತಿಯನ್ನು ಅನುಸರಿಸದಂತೆ ಖಾಸಗಿ ಆಸ್ಪತ್ರೆಗಳಿಗೆ ರಾಜ್ಯ ಸರ್ಕಾರ ನಿರ್ಬಂಧ ವಿಧಿಸಿದೆ.
