ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಪೊಲೀಸರು ಚಾರ್ಜ್ಶೀಟ್ ಸಲ್ಲಿಕೆ ಮಾಡಿದ್ದಾರೆ. ದರ್ಶನ್ ಸೇರಿ ಅನೇಕರ ವಿರುದ್ಧ ಪ್ರಬಲ ಸಾಕ್ಷಿಗಳು ಸಿಕ್ಕಿದ್ದು, ದೋಷಾರೋಪ ಪಟ್ಟಿಯಲ್ಲಿ ವಿವರಣೆ ನೀಡಲಾಗಿದೆ. ಈ ಮಧ್ಯೆ ರೇಣುಕಾ ಸ್ವಾಮಿ ಕೈ ಮುಗಿದು ಅಂಗಲಾಚುತ್ತಿರುವ ಫೋಟೋ ರಿವೀಲ್ ಆಗಿದ್ದು. ಈ ಫೋಟೋ ನೋಡಿದವರ ಕರುಳು ಚುರಕ್ ಎಂದಿದೆ. ಪಟ್ಟಣಗೆರೆ ಶೆಡ್ನಲ್ಲಿ ಕೊಲೆ ಮಾಡುವ ಸಂದರ್ಭದಲ್ಲಿ ತೆಗೆದ ಫೋಟೋ ಇದಾಗಿದೆ.
ಆದರೆ ತನಗೇನು ಗೊತ್ತಿಲ್ಲ, ಎಲ್ಲ ನಮ್ಮ ಹುಡುಗರೇ ಮಾಡಿದ್ದು ಎಂದ ದರ್ಶನ್ ನೇ ಪ್ರಮುಖ ಸೂತ್ರದಾರಿ.ಕಿಡ್ನಾಪ್ ಇಂದ ಹಿಡಿದು, ಕೊಲೆ ಸಾಕ್ಷಿನಾಶ, ಪಿತೂರಿ ಎಲ್ಲದ್ರಲ್ಲೂ ದರ್ಶನ್ ಮೈನ್ ರೋಲ್.ಮಾಡೋದೆಲ್ಲಾ ಮಾಡಿ ಏನು ಗೊತ್ತಿಲ್ಲದಂತೆ ಮೈಸೂರಿಗೆ ತೆರಳಿದ್ದ ಶೂಟಿಂಗ್ ನಲ್ಲಿದ್ದ ದರ್ಶನ್.ಆರೋಪಿಗಳ ತಪ್ಪೋಪ್ಪಿಗೆ ಹೇಳಿಕೆಯಲ್ಲಿ ಎಲ್ಲರು ದರ್ಶನ್ ನತ್ತ ಬೆಟ್ಟು ಮಾಡಿ ಹೇಳಿಕೆ ನೀಡಿರೋ ಆರೋಪಿಗಳ .ಹೀಗಾಗಿ ದರ್ಶನ್ ವಿರುದ್ಧ ಗಂಭೀರವಾದ ಆರೋಪಗಳು,
ಆರೋಪಗಳಿಗೆ ಸಂಬಂಧಿಸಿದಂತೆ ಪೂರಕ ದಾಖಲೆಗಳ ಕಲೆ ಹಾಕಿರೋ ತನಿಖಾ ತಂಡ. ಬಾಕಿ ಉಳಿದಿರೋ ಸಿಎಫ್ಎಸ್ಎಲ್ ವರದಿಯನ್ನು ಬೇಗ ನೀಡುವಂತೆ ಮನವಿ ಮಾಡಲಾಗಿದ್ದು ಪವಿತ್ರಗೌಡ ವಿರುದ್ಧವೂ ಕೇವಲ ಎರಡು ಆರೋಪಗಳ ಮೇಲೆ ಚಾರ್ಜ್ ಶೀಟ್. ಕಿಡ್ನಾಪ್ ಹಾಗೂ ಕೊಲೆಗೆ ಪ್ರಚೋದನೆ ಆರೋಪದ ಮೇಲೆ ಚಾರ್ಜ್ ಶೀಟ್ ಸಲ್ಲಿಸಲಾಗಿದೆ.