ಚಿಕ್ಕಮಗಳೂರು: ಇವತ್ತಿನ ದಿನ ಭಾರತದ ದೇಶಕ್ಕೆ ವಿಶೇಷ ದಿನ. ಪ್ರತಿಯೊಂದು ಕುಟುಂಬಗಳು ಕ್ರೀಡಾ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ನಮ್ಮ ದೇಶದ ಕ್ರಿಕೆಟ್ ಆಟಗಾರರಿಗೆ ವಿಶ್ವಕಪ್ನಲ್ಲಿ ಗೆಲ್ಲುವ ಮೂಲಕ ದೇಶದ ಹಿರಿಮೆಯನ್ನು ಎತ್ತಿ ಹಿಡಿಯಲು ಶುಭ ಹಾರೈಕೆಗಳು ಬರುತ್ತಿವೆ.
ಪ್ರತಿ ಕುಟುಂಬ, ಪ್ರತಿ ನಾಗರಿಕರ ಕ್ರೀಡಾಪಟುಗಳಿಗೆ ವಿಶೇಷ ಹಾರೈಕೆಗಳನ್ನು ನಾನು ಎಂದು ನೋಡಿಲ್ಲ. ನಮ್ಮ ಟೀಂಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ.
ಮೊದಲ ಬಾರಿಗೆ 10 ಪಂದ್ಯಗಳನ್ನು ಭಾರತ ಗೆದ್ದಿದೆ. 12 ವರ್ಷಗಳಿಂದ ಭಾರತ ಕಾಯುತ್ತಿದ್ದ ಗುರಿಯನ್ನ ಇವತ್ತು ತಲುಪಲಿ ಎಂದು ಶುಭ ಹಾರೈಕೆಯನ್ನು ಮಾಡುತ್ತೇನೆ ಎಂದು ಮಾಜಿ ಸಿ.ಎಂ ಕುಮಾರಸ್ವಾಮಿ ಹೇಳಿದರು.