ಕಲಬುರಗಿ: ಕಲಬುರಗಿಯ ಬರ ಪೀಡಿತ ಪ್ರದೇಶಗಳಿಗೆ ಇವತ್ತು ಬಿಜೆಪಿ ತಂಡ ಭೇಟಿ ನೀಡಿ ಪರಿಶೀಲಿಸಿತು.ಶಾಸಕ ಬಿವೈ ವಿಜಯೇಂದ್ರ ನೇತ್ರತ್ವದ ತಂಡ ಕಲಬುರಗಿ ಪ್ರವಾಸದಲ್ಲಿ ಮೊದಲು ಪಟ್ನಾ ಗ್ರಾಮಕ್ಕೆ ನಂತ್ರ ಜೋಗೂರು ಸೇರಿದಂತೆ ಹಲವು ಗ್ರಾಮಗಳಲ್ಲಿನ ಬರ ವೀಕ್ಷಣೆ ಮಾಡಿ ರೈತರ ಸಂಕಷ್ಟವನ್ನ ಆಲಿಸಿತು..
ನಂತ್ರ ಮಾತನಾಡಿದ ವಿಜಯೇಂದ್ರ ಉಸ್ತುವಾರಿ ಸಚಿವರು ನಿಮ್ಮ ಊರಿಗೆ ಬಂದಿದ್ರಾ ಅಂತ ಕೇಳಿದ್ರು. ಒಟ್ಟಾರೆ ರಾಜ್ಯ ಸರ್ಕಾರ ಎಕರೆಗೆ 25 ಸಾವಿರ ರೂಪಾಯಿ ಮಧ್ಯಂತರ ಪರಿಹಾರ ನೀಡಬೇಕೆಂದು ವಿಜಯೇಂದ್ರ ಆಗ್ರಹಿಸಿದ್ರು.