ಕನ್ನಡ ಸಿನಿಮಾ ರಂಗದ ಹೆಸರಾಂತ ತಾರೆ ಹರ್ಷಿಕಾ ಪೂಣಚ್ಚ (Harshika Poonacha) ಮತ್ತು ನಟ ಭುವನ್ (Bhuvan) ನಾಳೆ ಬೆಳಗ್ಗೆ 10.30ಕ್ಕೆ ಕೊಡಗಿನ (Kodagu) ಅಮ್ಮತ್ತಿ ಕೊಡವ ಸಮಾಜದಲ್ಲಿ ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ.

ಭಾವಿ ಪತಿಯ ಹೊಸ ಮನೆ ಗೃಹ ಪ್ರವೇಶ ಮಾಡಿದ್ದಾರೆ ಹರ್ಷಿಕಾ ಪೂಣಚ್ಚ.
ಭುವನ್ ಹರ್ಷಿಕಾಗಾಗಿಯೇ ತೋಟದ ಮನೆ ಕಟ್ಟಿಸಿದ್ದಾರೆ. ಈ ಮನೆಯ ಗೃಹ ಪ್ರವೇಶ ಸಂಪ್ರದಾಯದಂತೆ ದೀಪ ಹಿಡಿದು ಹೊಸ ಮನೆಗೆ ಬಾವಿ ಪತ್ನಿ ಹರ್ಷಿಕಾ ಪೂಣಚ್ಚ ಎಂಟ್ರಿಕೊಟ್ಟಿದ್ದಾರೆ.
ಭುವನ್ ಕೊಡವ ಶೈಲಿಯಲ್ಲಿ ಗನ್ ಹಿಡಿದು ಗುಂಡು ಹಾರಿಸಿ ಶುಭಕಾರ್ಯ ಶುರು ಮಾಡಿದ್ದಾರೆ. ಈ ಸಂಭ್ರಮದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಇಂದು ಮತ್ತು ನಾಳೆ ಸ್ಯಾಂಡಲ್ ವುಡ್ ನ ಅನೇಕ ತಾರೆಯರು ಭಾಗಿಯಾಗಲಿದ್ದಾರೆ. ಕೊಡವ ಪದ್ಧತಿಯಂತೆಯೇ ಈ ಮದುವೆ ನಡೆಯಲಿದೆ.
