ಮುಂಬೈ: ನನಗೆ ಡೇಟಿಂಗ್ ಮಾಡಲು ವಯಸ್ಸಾದ ಶ್ರೀಮಂತ ಬೇಡ. ಕಷ್ಟದಲ್ಲಿರುವವನ ಜೊತೆ ನಾನು ಡೇಟಿಂಗ್ ಮಾಡಲು ಇಷ್ಟಪಡುತ್ತೇನೆ ಎಂದು ಭುವನ ಸುಂದರಿ ಕಿರೀಟವನ್ನು ಮುಡಿಗೇರಿಸಿಕೊಂಡ ಹರ್ನಾಜ್ ಸಂಧು ತಮ್ಮ ಬಾಯ್‍ಫ್ರೆಂಡ್ ಬಗ್ಗೆ ಹೇಳಿಕೊಂಡಿದ್ದಾರೆ.ಸಂದರ್ಶನವೊಂದರಲ್ಲಿ ತಮ್ಮ ಮುಂದಿನ ಬಾಲಿವುಡ್ ಪ್ರಾಜೆಕ್ಟ್ ಮತ್ತು ಡೇಟಿಂಗ್ ವಿಚಾರವಾಗಿ ಮಾತನಾಡಿದ ಹರ್ನಾಜ್,
ಸಖತ್ ಬೋಲ್ಡ್ ಆಗಿ ಉತ್ತರವನ್ನು ಕೊಟ್ಟಿದ್ದಾರೆ. ನಾನು ಕಷ್ಟದಲ್ಲಿರುವ ಯುವಕನೊಂದಿಗೆ ಡೇಟಿಂಗ್ ಮಾಡಲು ಬಯಸುತ್ತೇನೆ. ವಯಸ್ಸಾದ ಶ್ರೀಮಂತ ವ್ಯಕ್ತಿಯ ಜೊತೆಯಲ್ಲ. ಏಕೆಂದರೆ ನಾನು ಕಷ್ಟಪಟ್ಟಿದ್ದೇನೆ ಮತ್ತು ಕಷ್ಟಪಡುತ್ತೇನೆ. ಒಬ್ಬ ಮನುಷ್ಯ ಹೋರಾಟ ಮಾಡುವುದು ಮುಖ್ಯ ಎಂದು ನಾನು ನಂಬುತ್ತೇನೆ. ಆಗ ಮಾತ್ರ ನಾವು ನಮ್ಮ ಸಾಧನೆಗಳಿಗೆ ಬೆಲೆ ನೀಡಬಹುದು ಎಂದು ಹೇಳಿದರು.

ಗೆಲುವಿನ ಕುರಿತು ಮಾತನಾಡಿದ ಅವರು, ನಾನು ತುಂಬಾ ಅದೃಷ್ಟಶಾಲಿಯಾಗಿದ್ದೇನೆ. ಏಕೆಂದರೆ ದಿ ಮಿಸ್ ಯೂನಿವರ್ಸ್ ಈಸ್… ಎಂಬ ಸಾಲಿನೊಂದಿಗೆ ಭಾರತ ಎಂಬ ಪದ ಮೊಳಗಿದಾಗ ನಾನು ಅಳಲು ಪ್ರಾರಂಭಿಸಿದ್ದೆ. ನನ್ನ ಪ್ರಾಮಾಣಿಕತೆ ಮತ್ತು ಪರಿಶ್ರಮಕ್ಕೆ ಬೆಲೆ ಸಿಕ್ಕಿದೆ ಎಂದರು. ನಾನು ನಟಿಯಾಗಬೇಕು ಎಂದು ನಿರ್ಧರಿಸಿದ್ದೇನೆ. ಬಹಳಷ್ಟು ನಟ-ನಟಿಯರಿಂದ ನಾನು ಸ್ಫೂರ್ತಿಯನ್ನು ಪಡೆದಿದ್ದೇನೆ. ನಟನೆ ಮಾಡುವುದರಿಂದ ನನಗೆ ಖುಷಿ ಸಿಗುತ್ತೆ ಎಂದು ತಮಗಿರುವ ನಟನೆಯ ಮೇಲಿನ ಪ್ರೀತಿಯನ್ನು ಹೇಳಿಕೊಂಡರು.