ವಿಜಯಪುರ:- ಆರು ತೊಲಿ ಚಿನ್ನಕ್ಕಾಗಿ ಹೆಂಡತಿಯನ್ನೇ ಪಾಪಿ ಪತಿ ಹತ್ಯೆಗೈದ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಆಳೂರ ತಾಂಡಾ ಎಲ್ಟಿ 2 ರಲ್ಲಿ ಜರುಗಿದೆ.
ಆಘಾತಕಾರಿ ಸಂಗತಿ: ಕಾಂಡೋಮ್, ಲೂಬ್ರಿಕೆಂಟ್ ಬಳಸಿದರೂ ಬರುತ್ತಂತೆ ಕ್ಯಾನ್ಸರ್!
ರೇಷ್ಮಾ ವಿಕ್ರಮ ಚವ್ಹಾಣ ಹತ್ಯೆಯಾಗಿರುವ ಪತ್ನಿ ಎನ್ನಲಾಗಿದ್ದು, ಪತಿ ವಿಕ್ರಮ ಚವ್ಹಾಣ್ ನಿಂದ ಕೃತ್ಯ ನಡೆದಿದೆ. ಮಾವ ಪ್ರಕಾಶ ಚವ್ಹಾಣ, ಅತ್ತೆ ಮೀನಾಕ್ಷಿ ಚವ್ಹಾಣ್ ಹತ್ಯೆಗೆ ಆರೋಪಿಗೆ ಸಾಥ್ ಕೊಟ್ಟಿದ್ದಾರೆ.
ಅಲ್ಲದೇ, ಐದು ಲಕ್ಷ ವರದಕ್ಷಿಣೆ ತರುವಂತೆ ಪತಿ ಕುಟುಂಬಸ್ಥರಿಂದ ಮಾನಸಿಕ, ದೈಹಿಕ ಕಿರುಕುಳ ಆರೋಪವೂ ಕೇಳಿ ಬಂದಿದೆ. ರೇಷ್ಮಾ ಕುತ್ತಿಗೆ ಭಾಗದಲ್ಲಿ ಹಲ್ಲೆಯ ಗುರುತುಗಳು ಪತ್ತೆ ಆಗಿದೆ ಎಂದು ಮೃತ ಮಹಿಳೆ ರೇಷ್ಮಾ ಕುಟುಂಬಸ್ಥರು ಆರೋಪ ಮಾಡಿದ್ದಾರೆ.
ಘಟನೆ ಸಂಬಂಧ ಇಂಡಿ ಗ್ರಾಮೀಣ ಠಾಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.