IPL 2025 ಆರಂಭಕ್ಕೂ ಮುನ್ನ ಆಟಗಾರರ ಹರಾಜು ಪ್ರಕ್ರಿಯೆ ನಡೆಯಸುದ್ದು, ಈಗಾಗಲೇ ಎಲ್ಲಾ ತಂಡಗಳು ತಯಾರಿಯಲ್ಲಿ ಮುಳುಗಿದೆ.
ಬಾಬರ್ ಆಝಂ IPL ಬಂದ್ರೆ 130 ರೂ.ಗೂ ಹರಾಜ್ ಆಗಲ್ಲ: ಟೀಕೆಗೆ ಗುರಿಯಾದ ಪಾಕ್ ನಾಯಕ!
ಲಕ್ನೋ ಸೂಪರ್ ಜೈಂಟ್ಸ್ ಐಪಿಎಲ್ ಮೆಗಾ ಹರಾಜಿಗಾಗಿ ಭಾರೀ ತಯಾರಿ ನಡೆಸಿಕೊಂಡಿದೆ. ಸದ್ಯಕ್ಕೆ ಸಿಕ್ಕಿರೋ ಮಾಹಿತಿ ಪ್ರಕಾರ ಕನ್ನಡಿಗ ಕೆಎಲ್ ರಾಹುಲ್ ಅವರನ್ನು ಕೈ ಬಿಟ್ಟು ತಮಗೆ ಬೇಕಾದ ಬ್ಯಾಟರ್ ಖರೀದಿಗೆ ಲಕ್ನೋ ಪ್ಲಾನ್ ಮಾಡಿಕೊಂಡಿದೆ. ಹೀಗಾಗಿ ಲಕ್ನೋ ತಂಡವು ಹೊಸ ನಾಯಕನಿಗಾಗಿ ಹುಡುಕಾಟದಲ್ಲಿದೆ. ಹಾಗಾಗಿ ಕೆ.ಎಲ್ ರಾಹುಲ್ ಆರ್ಸಿಬಿಗೆ ಬರೋದು ಪಕ್ಕಾ ಆಗಿದೆ.
ಲಕ್ನೋ ತಂಡವು ಈ ಬಾರಿ ಐಪಿಎಲ್ ಮೆಗಾ ಹರಾಜಿಗೆ ಕ್ವಿಂಟನ್ ಡಿ ಕಾಕ್ ಮತ್ತು ದೀಪಕ್ ಹೂಡಾ ಅವರನ್ನು ಕೈಬಿಡಬಹುದು ಎಂದು ಹೇಳಲಾಗುತ್ತದೆ. ಈ ಪಟ್ಟಿಯಲ್ಲಿ ನವೀನ್ ಉಲ್ ಹಕ್ ಹೆಸರು ಕೂಡ ಇದೆ. ಹೀಗಾಗಿ ಈ ಆಟಗಾರರನ್ನು ರಿಲೀಸ್ ಮಾಡಿ ಭರವಸೆ ಹುಟ್ಟಿಸಿರುವ ಆಟಗಾರರಿಗೆ ಮಣೆ ಹಾಕುವ ಸಾಧ್ಯತೆ ಇದೆ.
ಇನ್ನು, ಈ ಬಗ್ಗೆ ಲಕ್ನೋ ತಂಡದ ಮಾಲೀಕರು ಅಧಿಕೃತ ಮಾಹಿತಿ ನೀಡಿಲ್ಲ. ಯಾರನ್ನು ರಿಲೀಸ್ ಮಾಡಲಿದ್ದಾರೆ ಎಂಬ ಕುತೂಹಲ ಮಾತ್ರ ಮನೆ ಮಾಡಿರುವುದು ನಿಜ. ಆದರೆ, ಕೆ.ಎಲ್ ರಾಹುಲ್ ಅವರನ್ನು ಲಕ್ನೋ ಕೈ ಬಿಡುವುದು ಪಕ್ಕಾ ಆಗಿದೆ. ಇತ್ತೀಚೆಗಷ್ಟೇ ಲಕ್ನೋ ತಂಡದ ಮಾಲೀಕ ಸಂಜೀವ್ ಗೋಯೆಂಕಾ ಕೆ.ಎಲ್ ರಾಹುಲ್ ನಮ್ಮ ಫ್ಯಾಮಿಲಿ ಎಂದಿದ್ದರು. ಇದರ ಬೆನ್ನಲ್ಲೇ ಈ ರೀತಿ ಒಂದು ಹರಿದಾಡುತ್ತಿದೆ.
ಇಷ್ಟು ದಿನ ಲಕ್ನೋ ತಂಡದಲ್ಲೇ ಕೆ.ಎಲ್ ರಾಹುಲ್ ಉಳಿಯಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೀಗ, ಲಕ್ನೋ ತಂಡವು ಕೆ.ಎಲ್ ರಾಹುಲ್ ಅವರನ್ನು ಕೈ ಬಿಡುವುದು ಬಹುತೇಕ ಖಚಿತವಾಗಿದೆ.