ನವದೆಹಲಿ: ಭಾರತ ಕ್ರಿಕೆಟ್ ತಂಡದ ಎಡಗೈ ಬ್ಯಾಟ್ಸ್ಮನ್ ಹಾಗೂ 2011ರ ವಿಶ್ವಕಪ್ ವಿಜೇತ ತಂಡದ ಟೂರ್ನಿಯ ಆಟಗಾರ ಯುವರಾಜ್ ಸಿಂಗ್ ಅವರ ಜನ್ಮದಿನ ಇಂದು. ಅದಲ್ಲದೆ ರಕ ಕ್ಯಾನ್ಸರ್ ನಡುವೆಯೂ ದೇಶಕ್ಕಾಗಿ ವಿಶ್ವಕಪ್ ಗೆಲ್ಲುವಲ್ಲಿ ಏಕಾಂಗಿ ಹೋರಾಟ ನಡೆಸಿದ ಯುವಿಗೆ ಇಂದು 43 ವರ್ಷದ ಸಂಭ್ರಮ.
Chanakya Niti: ಅಪ್ಪಿ ತಪ್ಪಿಯೂ ಯಾರ ಮುಂದೆ ಹೇಳಬಾರದ ವಿಷಯಗಳು ಯಾವುವು ಗೊತ್ತಾ..?
ಈ ಎಡಗೈ ದಾಂಡಿಗ ಅಂತರರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತರಾಗಿ ಬಹಳ ವರ್ಷಗಳಾಗಿದ್ದರೂ, ಇಂದಿಗೂ ಅವರ ಕೆಲವು ಇನ್ನಿಂಗ್ಸ್ಗಳು ಅಭಿಮಾನಿಗಳ ಮನಸ್ಸಲ್ಲಿ ಅಚ್ಚಳಿಯದ ಸ್ಥಾನ ಪಡೆದಿವೆ. ಭಾರತೀಯ ಕ್ರಿಕೆಟ್ ಆಟಗಾರ ಯುವರಾಜ್ ಸಿಂಗ್ ಕೇವಲ ಕ್ರಕೆಟ್ ಪ್ರಿಯ ಮಾತ್ರವಲ್ಲದೇ ಕಾರು ಪ್ರಿಯ ಕೂಡ ಹೌದು. ಇವರಿಗೆ ಕಾರುಗಳನ್ನು ಕಲೆಹಾಕುವುದರಲ್ಲಿ ಎಲ್ಲಿಲ್ಲದ ಆಸಕ್ತಿ.
ಭಾರತೀಯ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್
ಜಗತ್ತು ಕಂಡ ಅತ್ಯದ್ಭುತ ಆಟಗಾರರಲ್ಲಿ ಯುವಿ ಎಂದೇ ಖ್ಯಾತರಾದ ಭಾರತೀಯ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಕೂಡ ಒಬ್ಬರು. ಭಾರತ ಕ್ರಿಕೆಟ್ ಟೀಮ್ನಲ್ಲಿ ಆಲ್ರೌಂಡರ್ ಆಟಗಾರರಾಗಿದ್ದ ಯುವಿ, ಡಿಸೆಂಬರ್ 12, 1981 ರಲ್ಲಿ ಖ್ಯಾತ ನಟರು ಹಾಗೂ ಫಾಸ್ಟ್ ಬೌಲರ್ ಆದ ಯೋಗ್ರಾಜ್ ಸಿಂಗ್ ಇವರ ಮಗನಾಗಿ ಚಂಡಿಗಡದ ಸಿಖ್ ಕುಟುಂಬದಲ್ಲಿ ಜನಿಸಿದರು.
ಕಾರು ಪ್ರಿಯ ಕ್ರಿಕೆಟ್ ಆಟಗಾರ ಯುವಿ
ಸಮಾಜಮುಖಿಯಾದ ಯುವಿ ಕ್ರಿಕೆಟ್ನ್ನು ಪ್ರೀತಿಸುವಷ್ಟೇ ಕಾರು, ಬೈಕ್ಗಳನ್ನೂ ಕೂಡ ಪ್ರೀತಿಸುತ್ತಾರೆ. ಸಾಮಾನ್ಯ ಕಾರುಗಳಿಂದ ಹಿಡಿದು ಬ್ರ್ಯಾಂಡೆಡ್ ಕಾರುಗಳವರೆಗೂ ಇವರು ಕಾರುಗಳನ್ನು ಕಲೆಹಾಕಿದ್ದಾರೆ. ವಾಹನ ಮಾರುಕಟ್ಟೆಯಲ್ಲಿ ಹೊಸ ಮಾದರಿಯ ಕಾರುಗಳು ಕಾಲಿಡುತ್ತಿದ್ದಂತೆ ಯುವಿ ಆ ಕಾರುಗಳ ಬಗ್ಗೆ ಮಾಹಿತಿಯನ್ನು ಕಲೆಹಾಕಲು ಆರಂಭಿಸುತ್ತಾರೆ.
ಯುವಿ ಮೊದಲು ಖರೀದಿಸಿದ್ದು ಹೋಂಡಾ ಸಿಟಿ ಕಾರು
ಯುವಿ ತನ್ನ ಕಾರು ಕಲೆಹಾಕುವ ಹವ್ಯಾಸವನ್ನು ಆರಂಭಿಸಿದ್ದು ಹೋಂಡಾ ಸಿಟಿ ಕಾರಿನಿಂದ. ಹೋಂಡಾ ಸಿಟಿ ಕಾರು ಮೊದಲು ಮಾರುಕಟ್ಟೆಗೆ ಆಗಮಿಸುತ್ತಿದ್ದಂತೆ ಯುವಿ ಅದನ್ನು ಖರೀದಿಸಿದ್ದರು. ಯುವಿ ಹೋಂಡಾ ಸಿಟಿಯನ್ನು 2001ರ ಸುಮಾರಿಗೆ ಖರೀದಿಸಿದ್ದಾರೆ. ಹೋಂಡಾ ಸಿಟಿಯನ್ನು ನೋಡಿದಾಕ್ಷಣ ಯಾವ ಕಾರು ಪ್ರಿಯರಿಗಾದರೂ ಇಷ್ಟವಾಗುವಂತಹ ಕಾರು. ಇದರ ಕಾರ್ಯದಕ್ಷತೆ ಎಂತಹ ರೈಡರ್ನ್ನು ಕೂಡ ಚಾಲನೆಯ ಮೂಲಕ ಮರಳು ಮಾಡುವ ಸಾಮರ್ಥ್ಯವನ್ನು ಹೊಂದಿದೆ.
ಯುವಿಯ ಕಾರು ಕ್ರೇಝ್ ಆರಂಭವಾಗಿದ್ದು ಸಿಟಿಯಿಂದ.
ಸಬ್ ಕಾಂಪ್ಯಾಕ್ಟ್ ಮಾದರಿಯ ಹೋಂಡಾ ಸಿಟಿಯು ಮೂಲತಃ ಜಪಾನಿನ ಉತ್ಪಾದಕ ವಾಹನವಾಗಿದ್ದು, 1981 ರಿಂದ ಇಲ್ಲಿಯವರೆಗೂ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ. ಸಿಟಿ ಕಾರು ಹೋಂಡಾದ ಉತ್ತಮ ಗುಣಮಟ್ಟದ ಕಾರಾಗಿದ್ದು, ಇದು ಬಿಎಸ್6 ನಿಬಂಧನೆಯೊಂದಿಗೆ 9.91 ಲಕ್ಷ ರೂಪಾಯಿಗಳಿಂದ ಮಾರಾಟವಾಗಲಿದೆ.
ಯುವಿಯ ಬಳಿ ಪೋರ್ಷ್ ಸ್ಪೋರ್ಟ್ಸ್ ಕಾರು ಕೂಡ ಇದೆ
ಯುವರಾಜ್ ಸಿಂಗ್ ಕೇವಲ ಹ್ಯಾಚ್ಬ್ಯಾಕ್ ಕಾರು ಪ್ರಿಯರು ಮಾತ್ರವಲ್ಲ ಅವರಿಗೆ ಸ್ಪೋರ್ಟ್ಸ್ ಕಾರುಗಳೆಂದರೂ ಕೂಡ ಅಷ್ಟೇ ಆಸಕ್ತಿ. ಸ್ಪೋರ್ಟ್ಸ್ ಕಾರುಗಳಲ್ಲೇ ಐಕೋನಿಕ್ ಕಾರೆಂಬ ಹೆಗ್ಗಳಿಕೆಯನ್ನು ಪಡೆದಿರುವ ಪೋರ್ಷ್ 991ಕಾರನ್ನು ಯುವಿ ಬಹಳ ಪ್ರೀತಿಯಿಂದ ಖರೀದಿಸಿದ್ದರು. ಯುವಿಗೆ ಕ್ರಿಕೆಟ್ನಲ್ಲಿ ಮಾತ್ರವಲ್ಲದೇ ಕಾರ್ ರೇಸ್, ಬೈಕ್ ರೇಸ್ಗಳು ಆಸಕ್ತದಾಯಕರಾಗಿದ್ದರು. ಪೋರ್ಷ್ ಈಗಲೂ ಕೂಡ ಮಾರುಕಟ್ಟೆಯಲ್ಲಿ ಲಕ್ಸೂರಿಯಸ್ ಕಾರೆಂಬ ಪಟ್ಟವನ್ನೇ ಪಡೆದುಕೊಂಡಿದೆ.
ಯುವಿ ಐಷಾರಾಮಿ ಕಾರುಗಳಲ್ಲಿ ಒಂದಾದ ಬಿಎಂಡಬ್ಲ್ಯೂ ಎಂ3 ಯನ್ನೂ ಕೂಡ ಹೊಂದಿದ್ದಾರೆ
ಐಷಾರಾಮಿ ಕಾರೆಂದೇ ಪ್ರಸಿದ್ದಿಯನ್ನು ಪಡೆದ ಬಿಎಂಡಬ್ಲ್ಯೂ ಬ್ರ್ಯಾಂಡ್ನ ಕಾರನ್ನೂ ಕೂಡ ಯುವಿ ಹೊಂದಿದ್ದಾರೆ. ಬಿಎಂಡಬ್ಲ್ಯೂ ಬ್ರ್ಯಾಂಡ್ನ ಬಿಎಂಡಬ್ಲ್ಯೂ ಎಂ3, ಬಿಎಂಡಬ್ಲ್ಯೂ ಎಕ್ಸ್6 ಎಂ ಹಾಗೂ ಬಿಎಂಡಬ್ಲ್ಯೂ ಎಂ5 ಈ ಎರಡು ಕಾರುಗಳನ್ನು ನಾವು ಯುವಿಯ ಬಳಿ ನೋಡಬಹುದು. ಸುಮಾರು ಒಂದು ಕೋಟಿಗಿಂತಲೂ ಹೆಚ್ಚು ಮೌಲ್ಯವರ್ಧಿತವಾದ ಬಿಎಂಡಬ್ಲ್ಯೂ ಎಂ3 ಆವೃತ್ತಿಯನ್ನು ಮತ್ತು 1.54 ಕೋಟಿ ರೂ. ಬೆಲೆಬಾಳುವ ಬಿಎಂಡಬ್ಲ್ಯೂ ಎಂ5 ಆವೃತ್ತಿಯ ಕಾರುಗಳು ಕ್ರಿಕೆಟ್ನ ಕಿಂಗ್ ಯುವಿ ಹೊಂದಿದ್ದಾರೆ.
ಬೀಚ್ ನೀಲಿ ಶೇಡ್ನಿಂದ ಆಕರ್ಷಿತವಾದ ಬಿಎಂಡಬ್ಲ್ಯೂ ಎಕ್ಸ್6 ಕಾರು ಯುವಿಯ ಬಳಿಯಿದೆ
ಭಾರತದಲ್ಲಿ ಕಾಣಸಿಗುವ ಅತಿ ವಿರಳವಾದ ಕಾರೆಂದರೆ ಅದು ಬಿಎಂಡಬ್ಲ್ಯೂ ಎಕ್ಸ್6 ಎಂ ಐಷಾರಾಮಿ ಕಾರು. ಯುವಿಯ ಈಕಾರು ಬೀಚ್ ನೀಲಿ ಶೇಡ್ನಿಂದ ಆಕರ್ಷಿತವಾಗಿದೆ. ಯುವಿಯ ಈ ಕಾರು 4.4 ಲೀಟರ್ ಟರ್ಬೋಚಾರ್ಜಡ್ ವಿ8 ಪೆಟ್ರೊಲ್ ಎಂಜಿನ್ನ್ನು ಹೊಂದಿದೆ. ಈ ಎಂಜಿನ್ಗಳು 567 ಬಿಹೆಚ್ಪಿ ಶಕ್ತಿಯನ್ನು ಮತ್ತು 750 ಎನ್ಎಂ ಟಾರ್ಕ್ನ್ನು ಉತ್ಪಾದಿಸುತ್ತದೆ.
ಲ್ಯಾಂಬರ್ಗಿನಿ ಗಲ್ಲ್ಯಾರ್ಡೋದಲ್ಲಿ ಯುವಿ
ವೇಗವಾಗಿ ಚಲಿಸುವ ಕಾರನ್ನು ಖರೀದಿಸಬೇಕೆಂಬ ಹಂಬಲ ಹೊತ್ತವರು ಯಾವಾಗಲೂ ಲ್ಯಾಂಬರ್ಗಿನಿಯನ್ನು ಇಷ್ಟ ಪಡುತ್ತಾರೆ. ಕಾರಿನ ವೇಗವನ್ನು ಇಷ್ಟಪಟ್ಟು ಕಾರು ಖರೀದಿಸುವವರಲ್ಲಿ ಯುವರಾಜ್ ಸಿಂಗ್ ಕೂಡ ಒಬ್ಬರು. ಇವರು ಕಾರಿನ ವೇಗಕ್ಕೆ ಮರುಳಾಗಿ ಲ್ಯಾಂಬರ್ಗಿನಿ ಗಲ್ಲ್ಯಾರ್ಡೋವನ್ನು ಖರೀದಿಸಿದ್ದಾರೆ. ರೇಸ್ ನೋಡಲು ಇಷ್ಟವಾದಗಲೆಲ್ಲಾ ಯುವಿ ತಮ್ಮ ಲ್ಯಾಂಬರ್ಗಿನಿ ಗಲ್ಯಾರ್ಡೋದಲ್ಲಿ ಒಂದು ರೌಂಡ್ ಹೋಗುತ್ತಾರೆ.
ಲ್ಯಾಂಬರ್ಗಿನಿ ಗಲ್ಯಾರ್ಡೋವನ್ನು ಕಲೆಹಾಕಿದ್ದಾರೆ ಯುವಿ
ಯುವಿ ತುಂಭಾ ಇಷ್ಟ ಪಟ್ಟು ರೈಡ್ ಮಾಡುವ ಕಾರೆಂದರೆ ಅದು ಅವರ ಲ್ಯಾಂಬರ್ಗಿನಿ ಕಾರು. ಲ್ಯಾಂಬರ್ಗಿನಿ ಗಲ್ಯಾರ್ಡೋ ಸುಮಾರು 3 ಕೋಟಿ ರೂಪಾಯಿಗಳಿಂದ ಆರಂಭವಾಗುವ ಕಾರಾಗಿದೆ. ಈ ಲ್ಯಾಂಬರ್ಗಿನಿ ಕಾರು 6.5 ಲೀಟರ್ ವಿ12 ಎಂಜಿನ್ನ್ನು ಒಳಗೊಂಡಿದ್ದು, ಇದು 631 ಬಿಹೆಚ್ಪಿ ಶಕ್ತಿಯನ್ನು ಮತ್ತು 660 ಎನ್ಎಂ ಟಾರ್ಕ್ನ್ನು ನೀಡುತ್ತದೆ.
ಯುವಿ ಪ್ರೀತಿಯ Bentley flying spur
ಯುವಿ ಯಾವಾಗಲೂ ಒಬ್ಬರೇ ಓಡಾಡುವ ಕಾರೆಂದರೆ ಅದು ಅವರ ಪ್ರೀತಿಯ ಬೆಂಟ್ಲಿ ಕಾಂಟಿನೆಂಟಲ್ ಫ್ಲೈಯಿಂಗ್ ಸ್ಪರ್ ಬ್ರ್ಯಾಂಡೆಡ್ ಕಾರು. ಇವರ ಈ ಕಾರಿನ ಒಳಾಂಗಣವು ಕಡು ಕೆಂಪು ಬಣ್ಣದಿಂದ ಕೂಡಿದ್ದು, ಕಾರಿಗೆ ಸ್ಟೈಲೀ ಲುಕ್ನ್ನು ನೀಡಿದೆ. 4.0 ಲೀಟರ್ ವಿ8 ಎಂಜಿನ್ 6.0 ಲೀಟರ್ ಡಬ್ಲ್ಯೂ12 ಎಂಜಿನ್ನಲ್ಲಿ ಈ ಕಾರನ್ನು ಖರೀದಿಸಬಹುದಾಗಿದ್ದು, ಯುವಿಯ ಬಳಿ ಇರುವ ಕಾರು ಡಬ್ಲ್ಯೂ12 ಎಂಜಿನ್ನ 616 ಬಿಹೆಚ್ಪಿ ಶಕ್ತಿಯನ್ನು ಮತ್ತು 800 ಎನ್ಎಂ ಟಾಕ್ನ್ನು ಉತ್ಪಾದಿಸುವ ಕಾರು.
ಬೆಂಜ್ ಎಸ್ ಕ್ಲಾಸ್ ಎಸ್ಯುವಿಯನ್ನೇ ಬಳಸುತ್ತಾರೆ.
ಯುವರಾಜ್ ಸಿಂಗ್ ತನ್ನ ಕುಟುಂಬದೊಂದಿಗೆ ಹೆಚ್ಚಾಗಿ ಒಡಾಡಲು ಬಳಸುವ ಕಾರೆಂದರೆ ಅದು 2013ರ ಮರ್ಸಿಡಿಸ್ ಬೆಂಜ್ ಎಸ್ ಕ್ಲಾಸ್ ಎಸ್ಯುವಿ ಕಾರು. ಇದರ ಬೆಲೆಯು ಸುಮಾರು1.36 ಕೋಟಿ ರೂಪಾಯಿಗಳಿಂದ ಆರಂಭವಾಗುತ್ತದೆ. ಅಷ್ಟೇ ಅಲ್ಲದೇ ಇವರ ಬಳಿ ನಾವು ಫಾರ್ಚುನರ್ ಕಾರನ್ನು ಕೂಡ ನೋಡಬಹುದಾಗಿದೆ.