ಟೆಲ್ ಅವಿವ್: ಇಸ್ರೇಲ್ ಮತ್ತು ಹಮಾಸ್ ನಡುವಿನ ಸಂಘರ್ಷದಲ್ಲಿ ಹಮಾಸ್ಗ ಬೆಂಬಲ ಸೂಚಿಸಿರುವ ಯೆಮನ್ನ ಹೌಥೀ ಉಗ್ರರು ಇಸ್ರೇಲ್ ಮೇಲೆ ಡ್ರೋನ್ ಮತ್ತು ಶಸ್ತ್ರಾಸ್ತ್ರಗಳನ್ನು ಬಳಸಿ ದಾಳಿ ನಡೆಸಿದ್ದಾರೆ. ಸುಮಾರು 1 ಸಾವಿರ ಮೈಲಿಗೂ ಹೆಚ್ಚು ದೂರದಲ್ಲಿದ್ದುಕೊಂಡೇ ಹೌಥೀಸ್ ಉಗ್ರರು ಡ್ರೋನ್ಗಳ ಮೂಲಕ ದಾಳಿ ನಡೆಸಿದ್ದಾರೆ. ಹಮಾಸ್ ಉಗ್ರರು ಇಸ್ರೇಲ್ ಮೇಲೆ ದಾಳಿ ಆರಂಭಿಸಿದಾಗಿನಿಂದಲೂ ಹೌಥಿ ಉಗ್ರರು ಹಮಾಸ್ಗೆ ಬೆಂಬಲ ಸೂಚಿಸುತ್ತಲೇ ಇದ್ದಾರೆ. ಇಸ್ರೇಲ್ ಮೇಲೆ ಬ್ಯಾಲೆಸ್ಟಿಕ್ ಕ್ಷಿಪಣಿಗಳು (ballistic missiles) ಮತ್ತು ಡ್ರೋನ್ಗಳ ಮೂಲಕ ದಾಳಿ ನಡೆಸಲಾಗಿದೆ.
ಇನ್ನು ಮುಂದೆ ಸಹ ಹಲವು ದಾಳಿ ನಡೆಸಿ, ಪ್ಯಾಲೆಸ್ತೀನಿಯನ್ನರ ಗೆಲುವಿಗೆ ಸಹಕಾರ ನೀಡಲಾಗುತ್ತದೆ ಎಂದು ಹೌಥಿ ಉಗ್ರ ಸಂಘಟನೆಯ ವಕ್ತಾರ ಯಹ್ಯ ಸಾರಿ ಹೇಳಿದ್ದಾನೆ. ಸಂಘರ್ಷ ಆರಂಭವಾದ ಬಳಿಕ ಇದು 3ನೇ ಬಾರಿ ಹೌಥಿಗಳು ದಾಳಿ ನಡೆಸುತ್ತಿದ್ದಾರೆ. ಅ.28ರಂದು ಹೌಥಿ ಉಗ್ರರು ಕ್ಷಿಪಣಿ ದಾಳಿ ನಡೆಸಿದ್ದರು, ಇದು ಈಜಿಪ್ಟ್ನಲ್ಲಿ ಸ್ಫೋಟಗೊಂಡಿತ್ತು. ನಡೆಸಿದ ದಾಳಿಯನ್ನು ಅಮೆರಿಕ ನೌಕಾಪಡೆ ಪ್ರತಿ ಬಂಧಿಸಿತ್ತು ಎಂದು ಅವನು ಹೇಳಿದ್ದಾನೆ