ನಿಮ್ಮ ತಲೆಕೂದಲು ಪಳ ಪಳ ಹೊಳೆಯಬೇಕೇ ,ಹೇನು ,ಡಾನ್ಡ್ರಾಫ್ ಸಮಸ್ಯೆಗಳಿಂದ ಮುಕ್ತಿಪಡೆಯಲು ,ವಾರಕ್ಕೆ 2ದಿನ ತಲೆಗೆ ಹಚ್ಚಿ ಸ್ನಾನ ಮಾಡಬಹುದು ಮತ್ತು ಈ ಚಿಕ್ಕ ಕಾಯಿಯಿಂದ ಏನೆಲ್ಲಾ ಉಪಯೋಗ ಓದಿ; ಈ ಲೇಖನ :.
ನಾವು ಅಂಟುವಾಳದ ಬಗ್ಗೆ ಕೇಳಿರಬಹುದು ,ನೀವು ಇದನ್ನು ಬಳಸಲು ಪ್ರಾರಂಭಿಸಿದರೆ ಇದಕ್ಕೆ ನೀವೇ ಅಂಟಿಕೊಂಡುಬಿಡುವಿರಿ .
ದಿನಂ ಪ್ರತಿ ಬಿಸಿನೀರಿನಲ್ಲಿ ಈ ಬೀಜವನ್ನು ನೆನಸಿ ಸೋಪಿನ ಬದಲು ಇದನ್ನು ಉಪಯೋಗಿಸಿದರೆ ಚರ್ಮವ್ಯಾದಿಗಳು ಗುಣವಾಗುತ್ತದೆ .
ಒಣಗಿದ ಬೀಜಗಳನ್ನು ಜಜ್ಜಿ ಬೀಜವನ್ನು ತೆಗೆದು ಅದನ್ನು ಬಿಸಿನೀರಿನಲ್ಲಿ ನೆನೆಹಾಕಿ ಇಟ್ಟುಕೊಳ್ಳಿ .ಆ ನೀರಿಗೆ ಸೀಗೆಕಾಯಿ ,ಸೇರಿಸಿ ಕಲಸಿ ಅದನ್ನು ತಲೆಗೆ ಹಚ್ಚಿ ಶಂಪೂವಿನಂತೆ ಬಳಸಿದರೆ ನಿಮ್ಮ ಕೂದಲು ಪಳಪಳ ಎಂದು ಹೊಳೆಯುತ್ತದೆ ಮತ್ತು ಕೂದಲು ಉದುರುವುದುಇಲ್ಲ .
ಈ ಅಂಟುವಾಳದ ಕಾಯಿಯಬೇರೆ ಉಪಯೋಗಗಳು .
ಬೆಳ್ಳಿ ಪಾತ್ರೆಗಳನ್ನು ,ಆಭರಣ ತೊಳೆಯಲು ,ರೇಷ್ಮೆ ಬಟ್ಟೆ ಒಗೆಯಲು ,ಸೀರೆ ಜರಿಗೆಗಳನ್ನು ತೊಳೆಯಲುಉಪಯೋಗಿಸಿ ನೋಡಿ,, ಪಾತ್ರೆ ಫಳಫಳ ಎನ್ನುತ್ತದೆ .
ಮನೆಯಲ್ಲಿ ಸ್ನಾನಕ್ಕೆ ಈಗಾಗಲೇ ಉಪಯೋಗಿಸುತ್ತಿರುವ ಬೇರೆ ಪುಡಿಗಳನ್ನು ಅಂದರೆ ಕಡಲೆಹಿಟ್ಟು ,ಹೆಸರುಹಿಟ್ಟು ಮೆಂತ್ಯ ಇವುಗಳಜೊತೆ ಇದರ ಪುಡಿಯನ್ನು ಸೇರಿಸಿಕೊಂಡರೆ ಚರ್ಮ
ಆರೋಗ್ಯಯುತವಾಗುತ್ತದೆ .
ಅಂಟುವಾಳವನ್ನು ಲೇಸಾಗಿ ಹುರಿದು ಬೀಜವನ್ನು ತೆಗೆದು ,ಮಿಕ್ಸಿಯಲ್ಲಿ ಪುಡಿಮಾಡಿ ಕೊಂಡು ಇಟ್ಟುಕೊಳ್ಳಿ .ವಾರಕ್ಕೆ 2ದಿನ ಅಥವಾ 3ದಿನ ಅನ್ನ ಬಸಿದ ಗಂಜಿಗೆ ಯೊಂದಿಗೆ ಮಿಕ್ಸ್ ಮಾಡಿ ತಲೆಗೆ ಹಚ್ಚಿ 15ನಿಮಿಷ ಬಿಟ್ಟುತಲೆಗೆ ಸ್ನಾನ ಮಾಡಿದರೆ ಹೇನು ,dandruff ನಿಂದ ಮುಕ್ತಿ ಸಿಗುತ್ತದೆ .
ಅಥವಾ ಸೀಗೇಪುಡಿಯೊಂದಿಗೂ ಬೆರಸಿಟ್ಟು ಉಪಯೋಗಿಸಬಹುದು .
ನಾವು ಉಪಯೋಗಿಸುವ ಹಲವು ವಿಧದ ಸೋಪುಗಳಲ್ಲಿ ಸುಣ್ಣ ,ಕೆಮಿಕಲ್ಸ್ ಗಳು ನಮಗೆ ಚರ್ಮದ ಸಮಸ್ಯೆಗಳನ್ನು ಉಂಟುಮಾಡುತ್ತದೆ .ನಮ್ಮ ದೇಹದಿಂದ ಕೆಟ್ಟನೀರುಗಳು ಬೆವರಿನಮೂಲಕ ಹೊರಹೋಗುವ ರೋಮರಂಧ್ರಗಳನ್ನು ಮುಚ್ಚಿ ,ಮೃದುವಾದ ಚರ್ಮಗಳ ಪದರವನ್ನು ಹಾನಿಗೊಳಿಸುತ್ತದೆ .ಈ ಕೆಮಿಕಲ್ಸ್ ಗಳು ,ವರಿಕೋಸ್ ವೈನ್ ಬದಲಾವಣೆ ,ಚರ್ಮದ ಬಣ್ಣದಲ್ಲಿ ಬದಲಾವಣೆ ,ಉಗುರು ಮತ್ತು ಚರ್ಮಗಳು ಬೆಸೆಯುವ ಜಾಗದಲ್ಲಿ ಬಿರುಕು ಉಂಟುಮಾಡುತ್ತದೆ .ಅಲ್ಲಿ fungus ಮತ್ತು ಬ್ಯಾಕ್ಟೀರಿಯಾ ಕ್ರಿಮಿಗಳು ಬೆಳೆಯುವ ಸಮಸ್ಯೆಗಳಿಗೆ ಕಾರಣವಾಗುತ್ತದೆ .
ಇಂದಿಗೂ ಹಳ್ಳಿಗಳಲ್ಲಿ ಇದರ ಉಪಯೋಗವನ್ನು ಮಾಡಿಕೊಳ್ಳುತ್ತಿರುವ ಎಷ್ಟೋ ಹಿರಿಯರು ಇದ್ದಾರೆ .ಮನೆಯಲ್ಲೇ ಸಿಗುವ ನಾವೇ ಮಾಡಿಕೊಳ್ಳಬಹುದಾದಚಿಕ್ಕ ಚಿಕ್ಕ ಔಷಧಗಳಿಂದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳೋಣ .
ಯಶುಪ್ರಸಾದ್
