ಬೆಂಗಳೂರು: ಲವ್ ಯೂ ರಚ್ಚು ಸಿನಿಮಾವನ್ನು ನಾನು ವೈಯುಕ್ತಿಕವಾಗಿ ಪ್ರಚಾರ ಮಾಡುತ್ತೇನೆ ಎಂಬ ಅಜಯ್ ರಾವ್ ಹೇಳಿಕೆಗೆ ನಿರ್ಮಾಪಕ ಗುರು ದೇಶಪಾಂಡೆ ಗರಂ ಆಗಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಕೋಟಿಕೋಟಿ ಹಾಕಿ ಸಿನಿಮಾ ಮಾಡಿದ್ದೇನೆ. ಅಜಯ್ ರಾವ್ ವೈಯಕ್ತಿಕವಾಗಿ ಪ್ರಚಾರ ಮಾಡುತ್ತೇನೆ ಎಂದಿದ್ದಾರೆ. ಆದರೆ, ಇಲ್ಲಿವರೆಗೆ ಸಿನಿಮಾ ಬಗ್ಗೆ ಒಂದೇ ಒಂದು ಪೋಸ್ಟ್ ಹಾಕಿಲ್ಲ.
ಹಾಕಿದ ದುಡ್ಡು ಬರದಿದ್ದರೆ ಮನೆ ಮುಂದೆ ಹೋಗಿ ಕೂರುತ್ತೇನೆ. ನಾನು ಯಾವ ಹಂತಕ್ಕೆ ಹೋಗೋಕೂ ರೆಡಿ’ ಎಂದು ಅಜಯ್ ರಾವ್ ವಿರುದ್ಧ ಫುಲ್ ಗರಂ ಆಗಿ ಹೇಳಿಕೆ ನೀಡಿದ್ದರು. ಇನ್ನೂ ನನಗೆ ನಿರ್ಮಾಪಕರಿಂದ ಅವಮಾನ ಆಗಿದೆ. ನಾನು ಯಾವುದೇ ಕಾರಣಕ್ಕೂ ಸಿನಿಮಾ ಪ್ರಚಾರಕ್ಕೆ ತಂಡದ ಜತೆ ತೆರಳುವುದಿಲ್ಲ. ವೈಯಕ್ತಿಕವಾಗಿ ಪ್ರಚಾರ ಮಾಡುತ್ತೇನೆ’ ಎಂಬ ಹೇಳಿಕೆ ನೀಡಿದ್ದ ಅಜಯ್ ರಾವ್ ವಿರುದ್ಧ ನಿರ್ಮಾಪಕರು ಇದೀಗ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
