ಚಾಮರಾಜನಗರ: ಗುಂಡ್ಲುಪೇಟೆ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿ ಸದಸ್ಯರಾದ ರಮೇಶ್, ವೀಣಾ ಮಂಜುನಾಥ್, ರಾಣಿ ಲಕ್ಷ್ಮೀದೇವಿ ಕಾಂಗ್ರೆಸ್ ಸೇರಿದ ಬಳಿಕವೂ ಚುನಾವಣೆ ಯಲ್ಲಿ ಗೈರಾಗುವ ಮೂಲಕ ಕಾಂಗ್ರೆಸ್ಗೆ ಅಧಿಕಾರ ತಂದು ಕೊಟ್ಟಿದ್ದಾರೆ.
ಪುರಸಭೆ ಬಿಜೆಪಿ ಸದಸ್ಯರಾದ ಕಿರಣ್ ಗೌಡ, ಹೀನಾ ಕೌಸರ್ ಕಾಂಗ್ರೆಸ್ ಪಕ್ಷ ಸೇರಿದ ಬಳಿಕ ಅಧ್ಯಕ್ಷ ಸ್ಥಾನಕ್ಕೆ ಕಿರಣ್ ಗೌಡ, ಉಪಾಧ್ಯಕ್ಷ ಸ್ಥಾನಕ್ಕೆ ಹೀನಾ ಕೌಸರ್ ಸ್ಪರ್ಧಿಸಿದರು. ಆದರೂ ಪುರಸಭೆ ಸದಸ್ಯರಾದ ರಮೇಶ್, ವೀಣಾ ಮಂಜುನಾಥ್, ರಾಣಿ ಲಕ್ಷ್ಮೀದೇವಿ ಚುನಾವಣೆಯಲ್ಲಿ ಭಾಗವಹಿಸಲಿಲ್ಲ,
Teachers Day 2024: ಶಿಕ್ಷಕರ ದಿನಾಚರಣೆಯ ಹಿನ್ನೆಲೆ, ಇತಿಹಾಸ, ಪ್ರಾಮುಖ್ಯತೆ ಗೊತ್ತೇ? ಇಲ್ಲಿದೆ ವಿವರ
ಪುರಸಭೆಯ ಒಟ್ಟು 23 ಸದಸ್ಯರು ಹಾಗೂ ಸಂಸದ, ಶಾಸಕರ ಓಟು ಸೇರಿ 25 ಆದರೂ ಪುರಸಭೆ ಅಧ್ಯಕ್ಷಕರನ್ನಾಗಿ ಕಿರಣ್ ಗೌಡ ಅವಿರೋಧವಾಗಿ ಆಯ್ಕೆ ಯಾದರು. ಉಪಾಧ್ಯಕ್ಷ ಸ್ಥಾನಕ್ಕೆ ಹೀನಾ ಕೌಸರ್ ಸ್ಪರ್ಧಿಸಿ 14 ಮತ ಪಡೆದು ಗೆಲುವಿನ ನಗೆ ಬೀರಿದರು