Facebook Twitter Instagram YouTube
    ಕನ್ನಡ English తెలుగు
    Wednesday, September 20
    Facebook Twitter Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    ಕನ್ನಡ English తెలుగు
    Facebook Twitter Instagram YouTube
    Ain Live News

    Grulakshmi Scheme: ಲಕ್ಷ್ಮೀಯರ ಖಾತೆಗೆ ಸದ್ಯದಲ್ಲೇ ಗೃಹಲಕ್ಷ್ಮೀ ಎಂಟ್ರಿ: ಮಂಗಳವಾರದಿಂದ ಯೋಜನೆಗೆ ಅರ್ಜಿ ಸಲ್ಲಿಕೆ!

    Author AINBy Author AINJune 26, 2023
    Share
    Facebook Twitter LinkedIn Pinterest Email

    ಬೆಂಗಳೂರು: ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿಗಳ ಪೈಕಿ ಮತ್ತೊಂದು ಮಹತ್ವದ ಯೋಜನೆ ಜಾರಿಗಾಗಿ ಮುಹೂರ್ತ ಫಿಕ್ಸ್ ಆಗಿದೆ. ಇಷ್ಟುದಿನ ರಾಜ್ಯದ ಮಹಿಳೆಯರು ಕಾಯುತ್ತಿದ್ದ ಸಮಯ ಈಗ ಬಂದೇ ಬಿಟ್ಟಿದೆ. ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಆರಂಭಿಸಲು ರಾಜ್ಯ ಸರ್ಕಾರ ಡೇಟ್ ಫಿಕ್ಸ್ ಮಾಡಿದೆ. ಜೂನ್ 27ರಿಂದ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಆರಂಭವಾಗಲಿದ್ದು, ಅಂದುಕೊಂಡಂತೆ ಆದ್ರೆ ಸ್ವಾತಂತ್ರೋತ್ಸವ ದಿನಕ್ಕೆ ಲಕ್ಷ್ಮೀಯರ ಖಾತೆಗೆ ಲಕ್ಷ್ಮೀಯ ಆಗಮನವಾಗಲಿದೆ. ಹಾಗಾದ್ರೆ ಗೃಹಲಕ್ಷ್ಮೀ ಯೋಜನೆ ಜಾರಿಗೆ ಹೇಗೆಲ್ಲಾ ಸರ್ಕಾರ ಸಿದ್ದವಾಗ್ತಿದೆ ಅನ್ನೋ ರಿಪೋರ್ಟ್ ಇಲ್ಲಿದೆ

    ಮಹಿಳಾ ಮಣಿಗಳಿಗೆ ಶಕ್ತಿಯ ಮೂಲಕ ಭರ್ಜರಿ ಗಿಫ್ಟ್ ಕೊಟ್ಟಿದ್ದ ರಾಜ್ಯ ಸರ್ಕಾರ ಈಗ ಮತ್ತೊಂದು ದೊಡ್ಡ ಗಿಫ್ಟ್ ಕೊಡೋಕೆ ಮುಂದಾಗಿದೆ. ಎಲ್ಲೆಂದರಲ್ಲಿ ಫ್ರೀ ಬರ್ಡ್ನಂತೆ ಓಡಾಡಿ ಅಂತ ನಾರಿಯರಿಗೆ ಫ್ರೀ ಬಸ್ ಪ್ರಯಾಣ ಕಲ್ಪಿಸಿದ್ದ ಸರ್ಕಾರ ಈಗ ಖರ್ಚಿಗೆ ರಾಜ್ಯದ ಎಲ್ಲಾ ಗೃಹಗಳ ಲಕ್ಷ್ಮೀಯರ ಖಾತೆಗೆ ಹಣ ಹಾಕಲು ಮುಂದಾಗಿದೆ.ಜೂನ್ 27 ರಿಂದ ಗೃಹಲಕ್ಷ್ಮೀ ಯೋಜನೆ ನೋಂದಾಣಿ ಪ್ರಕ್ರಿಯೆ ಆರಂಭವಾಗಲಿದ್ದು,ಇದಕ್ಕೆ ಅಂತ ಸರ್ಕಾರ ಸಿದ್ದತೆಗಳನ್ನ ಆರಂಭಿಸಿದೆ.ಆಗಸ್ಟ್ 16 ಅಥವಾ 17ರ ನಂತರ ಮನೆ ಯಜಮಾನಿ ಖಾತೆಗೆ ಹಣ ತಲುಪಿಸಲು ಸರ್ಕಾರ ನಿರ್ಧಾರ ಮಾಡಿದೆ.

    Demo

    ಗೃಹ ಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಕೆಗೆ ಪ್ರತ್ಯೇಕ ಆ್ಯಪ್ ರೆಡಿ ಮಾಡಲಾಗಿದೆ..ಆ್ಯಪ್ ಮೂಲಕ ಅರ್ಜಿ ಸಲ್ಲಿಸಲು ಎಲ್ಲಾ ತಯಾರಿ ನಡೆಸಲಾಗಿದೆ.ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಇರಲ್ಲ, ಅರ್ಜಿ ಸಲ್ಲಿಕೆಗೆ ಯಾವ ಶುಲ್ಕವೂ ಇರುವುದಿಲ್ಲ.ಅರ್ಜಿ ಸಲ್ಲಿಕೆಗೆ  ರೇಷನ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್, ಆಧಾರ್ ಕಾರ್ಡ್ ಜೊತೆ ವೋಟರ್ ಐಡಿ ಇರಬೇಕು. ಗೃಹಲಕ್ಷ್ಮೀ ಯೋಜನೆಗೆ ಸರ್ಕಾರದ ಸೇವಾಸಿಂಧು ಪೋರ್ಟಲ್‌ನ ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಬಹುದು. ಇಲ್ಲ ಎಂದರೆ ಗ್ರಾಮ ಒನ್ & ಕರ್ನಾಟಕ ಒನ್, ಬೆಂಗಳೂರು ಒನ್ ಕೇಂದ್ರಗಳಲ್ಲೂ ಭೌತಿಕವಾಗಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಿದೆ. ಗೃಹಲಕ್ಷ್ಮಿ ಯೋಜನೆಯಡಿ 2,000 ರೂಪಾಯಿ ಪಡೆಯಲು ಎಪಿಎಲ್ ಅಥವಾ ಬಿಪಿಎಲ್ ಇಲ್ಲ ಅಂತ್ಯೋದಯ ಕಾರ್ಡ್ ಸೇರಿ ಯಾವುದಾದರೂ ಒಂದು ದಾಖಲೆ ಕಡ್ಡಾಯ.ಯೋಜನೆ ಲಾಭ ಪಡೆಯಲು ತಪ್ಪು ಮಾಹಿತಿ ನೀಡಿದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಸರ್ಕಾರ ಈಗಾಗಲೇ ಎಚ್ಚರಿಕೆ ನೀಡಿದೆ. ಈ ಮೂಲಕ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರವು ತನ್ನ ಮತ್ತೊಂದು ಮಹತ್ವದ ಗ್ಯಾರಂಟಿ ಯೋಜನೆ ಜಾರಿಗೆ ಮುಂದಾಗಿದೆ. ಹಾಗೇ ಇದಕ್ಕೆ ಬೇಕಿರುವ ಪೂರ್ವ ಸಿದ್ಧತೆಗಳು ಈಗಾಗಲೇ ಬಹುತೇಕ ಪೂರ್ಣಗೊಂಡಿವೆ.ಹೀಗಾಗಿ ಜೂನ್ 27 ರಿಂದ ನೋಂದಾಣಿಗೆ ಅವಕಾಶ ಮಾಡಿಕೊಡಲು ಸಿದ್ದತೆ ನಡೆಸಿದೆ.

    ಗೃಹಲಕ್ಷ್ಮೀ ಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಹೇಗಿರುತ್ತೆ ಗೊತ್ತಾ..?

    –        ಜೂನ್ 27  ರಿಂದ ನೋಂದಾಣಿಗೆ ಅವಕಾಶ

    –        ಜುಲೈ ಅಂತ್ಯದಲ್ಲಿ ಫಲಾನುಭವಿಗಳನ್ನ ಆಯ್ಕೆ ಮಾಡಲಾಗುವುದು

    –        ಆಯ್ಕೆಗೊಂಡ ಫಲಾನುವಿಗಳಿಗೆ ಆಗಸ್ಟ್ 16 ಅಥವಾ 17 ರಂದು ಯಜಮಾನಿ ಖಾತೆಗೆ ಹಣ ಜಮೆ…

    –        ಫಲಾನುಭವಿಗಳು ಸೇವಾ ಸಿಂಧು ಅಥವಾ ಭೌತಿಕವಾಗಿ ಅರ್ಜಿ ಸಲ್ಲಿಕೆಗೆ ಅವಕಾಶ

    –        ಆದಾಯ ತೆರಿಗೆ ಪಾವತಿಸಿರುವ ಕುಟುಂಬಕ್ಕೆ ಇಲ್ಲ ಗೃಹಲಕ್ಷ್ಮೀ ಭಾಗ್ಯ

    –        ಒಂದು ಕುಟುಂಬದಲ್ಲಿ ಒಂದು ಮಹಿಳೆಗೆ ಮಾತ್ರ 2 ಸಾವಿರ ರೂಪಾಯಿ

    ಒಟ್ಟಾರೆ ಈಗಾಗಲೇ  ಜ್ಯೋತಿಗಾಗಿ ಅರ್ಜಿ ಸಲ್ಲಿಸಲು ಜನರು ಸರತಿ ಸಾಲಿನಲ್ಲಿ ಕಚೇರಿಗಳ ಮುಂದೆ ಕಾಯುತ್ತಿದ್ದಾರೆ. ಹಲವು ದಿನಗಳಾದ್ರೂ ಸರ್ವರ್ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಈ ನಡುವೆ ಸರ್ಕಾರ ಗೃಹಲಕ್ಷ್ಮೀ ಯೋಜನೆಗೂ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭಿಸುತ್ತಿದೆ. ಇದಕ್ಕಾದ್ರೂ ಸರ್ಕಾರ ಎಲ್ಲಾ ರೀತಿಯಲ್ಲಿ ಸನ್ನದ್ದವಾಗಿದೆಯಾ? ಅಥವಾ ಈ ಹೊಸ ಆಪ್ ಕೂಡ ಅದೇ ಸಮಸ್ಯೆ ತಂದೊಡ್ಡುತ್ತಾ ಕಾದು ನೋಡ್ಬೇಕು.

    Demo
    Share. Facebook Twitter LinkedIn Email WhatsApp

    Related Posts

    ಮೂವರು ಡಿಸಿಎಂ ಆಗಬೇಕೆಂಬ ಚರ್ಚೆ ದೊಡ್ಡ ವಿಚಾರವಲ್ಲ – ದಿನೇಶ್ ಗುಂಡೂರಾವ್

    September 20, 2023

    Kumaraswamy; ಜನರಿಗೆ ಆಮೀಷವೊಡ್ಡಿ ಅಧಿಕಾರಕ್ಕೆ ಬಂದ ಸರ್ಕಾರ ವಜಾ ಮಾಡಿ – ಹೆಚ್ ಡಿ ಕುಮಾರಸ್ವಾಮಿ

    September 20, 2023

    ಚೈತ್ರಾ ಕುಂದಾಪುರ ವಂಚನೆ ಕೇಸ್, ನಮ್ಮ ಕುಟುಂಬದ ವಿರುದ್ಧ ವ್ಯವಸ್ಥಿತ ಷಡ್ಯಂತ್ರ – ಸಾಲುಮರದ ತಿಮ್ಮಕ್ಕ ಆಕ್ರೋಶ

    September 20, 2023

    Siddaramaiah; ಮಹಿಳಾ ಮೀಸಲಾತಿ ಮಸೂದೆ ಸ್ವಾಗತಾರ್ಹ – ಸಿದ್ದರಾಮಯ್ಯ

    September 20, 2023

    D Boss; ಕಾವೇರಿ ಹೋರಾಟಕ್ಕೆ ಸ್ಯಾಂಡಲ್ ವುಡ್ ಮೌನ, ಮೌನ ಮುರಿದ ಚಾಲೆಂಜಿಂಗ್ ಸ್ಟಾರ್

    September 20, 2023

    HD Kumaraswamy: ರಾಜ್ಯ ಕಾಂಗ್ರೆಸ್ ಸರಕಾರವನ್ನು ವಜಾ ಮಾಡಲು ಹೆಚ್.ಡಿ.ಕುಮಾರಸ್ವಾಮಿ ಆಗ್ರಹ

    September 20, 2023

    K‌ichacha Sudeep Tweet: ʼನಮ್ಮ ಕಾವೇರಿ ನಮ್ಮ ಹಕ್ಕುʼ: ಬೆಂಬಲ ಸೂಚಿಸಿ ಕಿಚ್ಚ ಸುದೀಪ್‌ ಟ್ವೀಟ್ !

    September 20, 2023

    Cauvery Dispute: ಕುಡಿಯುವ ನೀರಿಗಾಗಿ ಜೈಲಿಗೆ ಹೋಗೋಣ, ನಿಮ್ಮೊಂದಿಗೆ ನಾವಿದ್ದೇವೆ: ರಾಜ್ಯ ಸರ್ಕಾರಕ್ಕೆ ಮು.ಚಂದ್ರು ಕರೆ

    September 20, 2023

    ಹಾಲಾಶ್ರೀ ಸ್ವಾಮೀಜಿ ಹುಡುಕಲು ಪೊಲೀಸರು ತೊಟ್ಟ ವೇಷ ಎಂತದ್ದು ಗೊತ್ತಾ: ಇಲ್ಲಿದೆ ರೋಚಕ ಕಹಾನಿ?

    September 20, 2023

    Cauvery Dispute: ಸಂಕಷ್ಟ ಸೂತ್ರವೇ ಇಲ್ಲದಿರುವಾಗ ತಮಿಳುನಾಡಿಗೆ ನೀರು ಬಿಟ್ಟಿದ್ದು ತಪ್ಪು: HDK ಕಿಡಿ!

    September 20, 2023

    ‌Froud Case: ಚೈತ್ರಾ ಕುಂದಾಪುರ ಬಗ್ಗೆ ಹಾಲಾಶ್ರೀ ಸ್ವಾಮೀಜಿ ಹೇಳಿದ್ದೇನು ಗೊತ್ತಾ: ಸಿಸಿಬಿ ಅಧಿಕಾರಿಗಳೇ ಶಾಕ್?

    September 20, 2023

    Froud Case: ನನ್ನ ಹಣಕ್ಕೆ ಮಾತ್ರ ನಾನು ಜವಾಬ್ದಾರಿ, ಬೇರೆಯವರ ಹಣ ಗೊತ್ತಿಲ್ಲ: ಸಿಸಿಬಿ ಮುಂದೆ ಹಾಲಶ್ರೀ ಹೈಡ್ರಾಮಾ

    September 20, 2023
    © 2022 Copyright � All rights reserved AIN Developed by Notch IT Solutions..
    • Home
    • About Us
    • Contact Us
    • Privacy & Cookies Notice
    • Advertise with Us
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಚಲನಚಿತ್ರ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ಜ್ಯೋತಿಷ್ಯ
    • ತಂತ್ರಜ್ಞಾನ
    • ಕೃಷಿ
    • ವಿಡಿಯೋ
    • ಅರೋಗ್ಯ
    • ಗ್ಯಾಲರಿ
    • ಸಂಸ್ಕೃತಿ

    Type above and press Enter to search. Press Esc to cancel.