ಬೆಂಗಳೂರು:- ಸಾಧಾರಣವಾಗಿ ತಯಾರಿಸುವ ಉಪ್ಪಿಟ್ಟಿನಿಂದ ಹಿಡಿದು ಅನೇಕ ಬಗೆಯ ಆಹಾರಗಳಿಗೆ ಬಟಾಣಿ ಸೇರಿಸಿ ಅಡುಗೆ ಮಾಡಲಾಗುತ್ತದೆ. ಬಟಾಣಿ ಕಾಳು ಹಸಿ ಬಟಾಣಿ ಕಾಳುಗಳು ತಿನ್ನಲು ತುಂಬಾ ರುಚಿಕರ. ಹಾಗಾಗಿ ಆಹಾರದ ರುಚಿ ಹೆಚ್ಚಿಸಲು ಅನೇಕ ಮಂದಿ ಬಟಾಣಿ ಹಾಕಿ ಅಡುಗೆ ಮಾಡುತ್ತಾರೆ. ಆದರೆ ಕೆಲವರು ಸೇವಿಸಲು ಅಷ್ಟು ಇಷ್ಟಪಡೋದಿಲ್ಲ. ತರಕಾರಿಗಳಿಂದ ಬಟಾಣಿ ಕಾಳು ತೆಗೆದು ಊಟ ಮಾಡುವವರೂ ಇದ್ದಾರೆ.
ಗೋಲ್ಡ್ ಸ್ಮಗ್ಲಿಂಗ್ ಕೇಸ್ ನಲ್ಲಿ ಪ್ರಭಾವಿ ಸಚಿವರು: ನಟಿ ರನ್ಯಾ ಬೆನ್ನಿಗೆ ಇದ್ದವರು ಯಾರು?
ಇದು ಕುಡುಕರಿಗೆ, ಸುಮ್ಮನೆ ಟೈಮ್ ಪಾಸ್ ತಿನ್ನೋದಕ್ಕೆ ಈ ಹಸಿರು ಬಟಾಣಿ ಬೆಸ್ಟ್. ಬೋರ್ ಆದ್ರೆ ಬಾಯಾಡಿಸೋಕೆ ಬಟಾಣಿ ಬೇಕೇ ಬೇಕು. ಕಟುಮ್ ಕುಟುಮ್ ಅಂತಾ ಕರಿದ ಬಟಾಣಿ ತಿಂತಿದ್ರೆ ಇನ್ನೂ ಬೇಕು ಅನ್ನಿಸುತ್ತೆ.. ಆದ್ರೆ, ಇದೀಗ ಇದೇ ಬಟಾಣಿ ಜೀವಕ್ಕೂ ಕುತ್ತು ತರಲಿದೆ. ಕೃತಕ ಕಲರ್ ಮಿಕ್ಸ್ ಮಾಡಿ ಬಟಾಣಿ ಬ್ಯಾನ್ಗೆ ಆಹಾರ ಇಲಾಖೆಯು ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಬಟಾಣಿಯಲ್ಲಿ ಕೃತಕ ಕಲಬೆರಕೆ ಅಂಶ ಪತ್ತೆಯಾಗಿದೆ. ಪ್ರಾಥಮಿಕ ಲ್ಯಾಬ್ ವರದಿಯಲ್ಲಿ ಸ್ಫೋಟಕ ಅಂಶ ಬಯಲಾಗಿದ್ದು, ಬ್ರಿಲಿಯಂಟ್ ಬ್ಲೂ, ಟೆಟಾರ್ಜಿನ್ ಅಂದ್ರೆ ಹಳದಿ ಬಣ್ಣವಿರುವ ರಾಸಾಯನಿಕ ಇರುವುದು ಪತ್ತೆಯಾಗಿದೆ. ಬಟಾಣಿಯಲ್ಲೂ ಕ್ಯಾನ್ಸರ್ ತರುವ ಅಂಶ ಬೆಳಕಿಗೆ ಬಂದಿದೆ. ಈಗಾಗಲೇ ಆಹಾರ ಇಲಾಖೆ ಆಯುಕ್ತ ಶ್ರೀನಿವಾಸ್ ಕಲರ್ ಬಳಕೆ ನಿಷೇಧದ ಬಗ್ಗೆ ಶಿಫಾರಸು ಮಾಡಿದ್ದಾರೆ.
ಮತ್ತೊಂದು ಸುತ್ತಿನ ಪರೀಕ್ಷೆ ಬಳಿಕ ಬಟಾಣಿಗೆ ಬಣ್ಣ ಬಳಕೆ ಬ್ಯಾನ್ಗೆ ಸಿದ್ಧತೆ ನಡೆಸಿದ್ದಾರೆ. ಮತ್ತೊಂದೆಡೆ ಕರಿದ ಬಟಾಣಿಯಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆಯಾದ್ರೂ, ಬೆಂಗಳೂರಲ್ಲಿ ಮಾತ್ರ ಕಲರ್ಫುಲ್ ಬಟಾಣಿ ಮಾರಾಟ ಮಾತ್ರ ನಿಂತಿಲ್ಲ. ಮೆಜೆಸ್ಟಿಕ್ನ ಅನೇಕ ಅಂಗಡಿಗಳಲ್ಲಿ ಬಟಾಣಿ ಮಾರಾಟ ಮಾಡುತ್ತಿರುವುದು ರಿಯಾಲಿಟಿ ಚೆಕ್ನಲ್ಲಿ ಬಯಲಾಗಿದೆ.