ಕೊಪ್ಪಳ:- ತಾಲ್ಲೂಕಿನ ಮುನಿರಾಬಾದ್ನಲ್ಲಿರುವ ತುಂಗಭದ್ರಾ ಜಲಾಶಯದ ನೀರು ಮತ್ತೆ ಹಸಿರು ಬಣ್ಣಕ್ಕೆ ತಿರುಗಿದೆ. ಜಲಾಶಯದ ನೀರು ಈ ರೀತಿ ಪದೇಪದೇ ಹಸಿರು ಬಣ್ಣಕ್ಕೆ ತಿರುಗುತ್ತಿದ್ದರೂ ರಾಜ್ಯ ಸರ್ಕಾರ ಮಾತ್ರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.
ಸರ್ ದರ್ಶನ್ ಭೇಟಿಗೆ ಬಂದ್ರೆ ಏನ್ ಮಾಡ್ತೀರಾ!? ರೇಣುಕಾಸ್ವಾಮಿ ತಂದೆ ಹೇಳಿದ್ದೇನು!?
ತುಂಗಭದ್ರಾ ನದಿ ಹಸಿರು ವರ್ಣಕ್ಕೆ ತಿರುಗಲು ಆ ಸಕ್ಕರೆ ಕಾರ್ಖಾನೆ ಕಾರಣ ಅಂತ ಜನರು ಕಿಡಿಕಾರಿದ್ದಾರೆ. ತುಂಗೆ ನೀರು ಕುಡಿದ ಜನರು ಹೊಟ್ಟೆ ನೋವಿನಿಂದ ಬಳಲುತ್ತಿದ್ದಾರೆ.
ಮುಂಡರಗಿ ತಾಲೂಕು ಕೊರ್ಲಳ್ಳಿ ಬಳಿ ನದಿಯ ನೀರು ಸಂಪೂರ್ಣ ಹಸಿರಾಗಿದೆ. ಹಾಗಾಗಿ ಗದಗ ಜಿಲ್ಲೆಯಲ್ಲಿ ಆತಂಕ ಮನೆ ಮಾಡಿದೆ. ವಿಪರ್ಯಾಸ ಅಂದರೆ, ಕಳೆದ ಒಂದು ವಾರದಿಂದ ನದಿ ನೀರು ಈ ರೀತಿಯ ಬಣ್ಣಕ್ಕೆ ತಿರುಗಿದ್ದು, ಮೊದ ಮೊದಲು, ನದಿ ನೀರು ಪಾಚಿಗಟ್ಟಿರಬಹುದು ಎಂದು ಸುಮ್ಮನಾಗಿದ್ದರು. ಆದರೆ ದಿನಗಳೆದರೂ, ನೀರು ತನ್ನ ಮೊದಲಿನ ಬಣ್ಣಕ್ಕೆ ಹಿಂದಿರುಗಿಲ್ಲ. ನೀರು ಕುಡಿದ ಜನರಿಗೆ ಹೊಟ್ಟೆ ನೋವು ಶುರುವಾಗಿದೆಯಂತೆ. ಇದರಿಂದ ಆತಂಕಗೊಂಡ ನದಿ ಪಾತ್ರದಲ್ಲಿನ ರೈತರು ತಮ್ಮ ದನ, ಕರುಗಳನ್ನ ನದಿಯಲ್ಲಿ ನೀರು ಕುಡಿಸಲು ಹಿಂದೇಟು ಹಾಕಿದ್ದು, ನದಿ ನೀರನ್ನ ಜಾನುವಾರು ಸೇರಿದಂತೆ ತಾವುಗಳು ಕುಡಿಯಲು ಹೆದರುತ್ತಿದ್ದಾರೆ. ಮೂರು ಜಿಲ್ಲೆಯ ಜನರು ದಾಹ ನೀಗಿಸಬೇಕಿದ್ದ ತುಂಗಭದ್ರಾ ನದಿ ನೀರು ಕುಡಿಯಲು ಭಯ ಪಡ್ತಾಯಿದ್ದಾರೆ.
ಗದಗ, ಕೊಪ್ಪಳ, ವಿಜಯನಗರ ಜಿಲ್ಲೆಯ ಸುಮಾರು 40ಕ್ಕೂ ಅಧಿಕಾರಿ ಗ್ರಾಮಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದೆ. ಈ ನೀರು ಕುಡಿದು ಜನರು ಅನಾರೋಗ್ಯದಿಂದ ಬಳಲುತ್ತಿದ್ದಾರೆ ಅಂತ ಗ್ರಾಮಸ್ಥರು ಕೆಂಡಕಾರಿದ್ದಾರೆ. ಮುಂಡರಗಿ ತಾಲೂಕಿನ ಗಂಗಾಪೂರ ಬಳಿಯ ವಿಜಯನಗರ ಶುಗರ್ ಫ್ಯಾಕ್ಟರಿ ಕೆಮಿಕಲ್ ನೀರು ನದಿಗೆ ಹರಿಬಿಟ್ಟಿದ್ರಿಂದ ನದಿ ಕಲುಷಿತವಾಗಿದೆ ಅಂತ ರೈತರು, ಗ್ರಾಮಸ್ಥರು ಆರೋಪಿಸಿದ್ದಾರೆ.