ತುಮಕೂರು: ಜಿಲ್ಲೆಯಲ್ಲಿ ಅಮಾನವೀಯ ಘಟನೆ ಬೆಳಕಿಗೆ ಬಂದಿದ್ದು ಬ್ಯಾಂಕ್ನಲ್ಲಿ ಬಾಲಕಿಯ ಹೆಸರಿನಲ್ಲಿದ್ದ ಹಣಕ್ಕಾಗಿ ದೊಡ್ಡಮ್ಮ ಇಸ್ತ್ರಿ ಪೆಟ್ಟಿಗೆಯಿಂದ ಸುಟ್ಟ ಘಟನೆ ಶಿರಾ ತಾಲೂಕಿನ ನಿಡಘಟ್ಟೆ ಗ್ರಾಮದಲ್ಲಿ ನಡೆದಿದೆ
ಹೌದು .. ಹಣಕ್ಕಾಗಿ ದೊಡ್ಡಮ್ಮಳಿಂದ ರಾಕ್ಷಸಿ ಕೃತ್ಯ ನಡೆದಿದ್ದು ಕಣ್ಣೀರು ತರಿಸುತ್ತೆ ತಾಯಿ ಇಲ್ಲದ ಬಾಲಕಿಯ ಗೋಳು ಕೇಳೋಕೆ. ಬ್ಯಾಂಕ್ ನಲ್ಲಿದ್ದ ಹಣಕ್ಕಾಗಿ ಇಸ್ತ್ರಿ ಪೆಟ್ಟಿಗೆಯಿಂದ ಸುಟ್ಟ ದೊಡ್ಡಮ್ಮ ಈ ಘಟನೆ ನಡೆದಿದ್ದು ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ನಿಡಘಟ್ಟೆ ಗ್ರಾಮದಲ್ಲಿ ನಡೆದಿದೆ.
Ayodhya Ram Mandir: ಇನ್ಮುಂದೆ ದೂರದರ್ಶನದಲ್ಲಿ ಬಾಲ ರಾಮನ ಬೆಳಗ್ಗಿನ ಪೂಜೆ ನೋಡಲು ಅವಕಾಶ!
ನಂಜಮ್ಮ ಎಂಬ ದುರುಳೆ ದೊಡ್ಡಮ್ಮಳಿಂದ ಹಣಕ್ಕಾಗಿ ಕಿರುಕುಳ ಕೊಟ್ಟಿದ್ದು ತಾಯಿ ಇಲ್ಲದ ಲಕ್ಷ್ಮೀ ಎಂಬ ಬಾಲಕಿಗೆ ತೊಡೆಗೆ ಇಸ್ತ್ರಿ ಪೆಟ್ಟಿಗೆಯಿಂದ ಸುಟ್ಟು ಕಿರುಕುಳ ನೀಡಿದ್ದು ಹಾಗೆ ಬ್ಯಾಂಕ್ ನ ಖಾತೆಯಲ್ಲಿದ್ದ ನಾಲ್ಕು ಲಕ್ಷ ಹಣ ಬಿಡಿಸಿಕೊಳ್ಳಲು ಪ್ಲಾನ್ ಕೂಡ ಮಾಡಿದ್ದ ಪಾಪಿ ದೊಡ್ಡಮ್ಮ
ಲಕ್ಷ್ಮೀ ತಾಯಿ ನರಸಮ್ಮ ಕಳೆದ ನಾಲ್ಕು ವರ್ಷಗಳ ಹಿಂದೆ ಸಾವನ್ನಪ್ಪಿದ್ದರು ಮೃತ ತಾಯಿ ನರಸಮ್ಮ ಹಾಗೂ ಬಾಲಕಿ ಲಕ್ಷ್ಮೀ ಹೆಸರಿನಲ್ಲಿ ಜಂಟಿ ಖಾತೆ ಇತ್ತು ಹಾಗಾಗಿ ಮೃತ ತಾಯಿ ತನ್ನ ಮಗಳಿಗಾಗಿ ನಾಲ್ಕು ಲಕ್ಷ ಫಿಕ್ಸ್ ಡೆಪಾಸಿಟ್ ಮಾಡಿದ್ದರು..ಬ್ಯಾಂಕ್ ನಲ್ಲಿದ್ದ ಹಣಕ್ಕಾಗಿ ಬಾಲಕಿ ದೊಡ್ಡಮ್ಮ ನಂಜಮ್ಮಳಿಂದ ಅಮಾನವೀಯ ವರ್ತನೆ ತೋರಿಸಿದ್ದಾಳೆ.
ಕಳೆದ ಶನಿವಾರ ರಾತ್ರಿ ತಮ್ಮ ಊರಿಗೆ ಕರೆಸಿ ಇಸ್ತ್ರಿ ಪೆಟ್ಟಿಗೆ ಯಿಂದ ಬಾಲಕಿಗೆ ತೊಡೆಗೆ ಇಟ್ಟ ರಾಕ್ಷಸಿ ನಂಜಮ್ಮ ಇಸ್ತ್ರಿ ಪೆಟ್ಟಿಗೆಯಿಂದ ಸುಟ್ಟರೇ ,ನಂಜಮ್ಮ ಮಗ ಬಸವರಾಜ್ ರಿಂದ ಬಾಲಕಿ ಬಾಯಿ ಮುಚ್ಚಿ ಸಾಥ್ ಕೊಟ್ಟಿದ್ದಾನೆ.
ಮಧುಗಿರಿ ತಾಲೂಕಿನ ಪೂಜಾರಹಳ್ಳಿ ಗ್ರಾಮದ ನಿವಾಸಿಯಾಗಿರುವ ಲಕ್ಷ್ಮೀ ಶಿವರಾತ್ರಿ ಹಬ್ಬಕ್ಕೆಂದು ಊರಿಗೆ ಬಂದು ಕರೆದುಕೊಂಡು ಹೋಗಿದ್ದ ದೊಡ್ಡಮ್ಮ ನಂಜಮ್ಮ ತಾಯಿ ಇಲ್ಲದ ಬಾಲಕಿ ಮೇಲೆ ಕಿರುಕುಳ ನೀಡಿದ್ದಾಳೆ.
ಐದನೇ ತರಗತಿ ಓದುತ್ತಿರುವ ಬಾಲಕಿ ಸದ್ಯ ಪರಿಕ್ಷೇಗಳು ನಡೆಯುತ್ತಿದ್ದು,ಪರೀಕ್ಷೆಗೆ ಹಾಜರಾಗದೇ ಇದ್ದ ಹಿನ್ನೆಲೆಯಲ್ಲಿ ಘಟನೆ ಬೆಳಕಿಗೆ ಇಸ್ತ್ರಿ ಪೆಟ್ಟಿಗೆಯಿಂದ ಸುಟ್ಟು ಟೀ ಚೆಲ್ಲಿಕೊಂಡಿದ್ದಾಳೆ ಎಂದು ಕಥೆ ಕಟ್ಟಿರುವ ರಾಕ್ಷಸಿ ಗ್ರಾಮದ ಶಿಕ್ಷಕರು ಸಂಬಂದಿಕರು ಊರಿಗೆ ಕರೆಸಿ ಬಾಲಕಿ ಜೊತೆ ಮಾತಾಡಿದಾಗ ಸತ್ಯ ಬೆಳಕಿಗೆ ಬಡವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ..