ಬೆಂಗಳೂರು: ಕಾನೂನು ಅಡಿಯಲ್ಲೇ ಕಾನೂನು ವಿರೋಧಿ ಕೆಲಸ ಕೆಲ ಅಧಿಕಾರಿಗಳು ಮಾಡ್ತಿದ್ದಾರೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಹೇಳಿದ್ದಾರೆ. ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಮಾತನಾಡಿದ ಅವರು, ಕೆಲವು ಅಧಿಕಾರಿಗಳಿಂದಲೇ ಒತ್ತುವರಿ ತೆರವು ಆಗ್ತಿಲ್ಲ. ಅಧಿಕಾರಿಗಳು ಉದ್ದೇಶಪೂರ್ವಕವಾಗಿಯೇ ವ್ಯವಸ್ಥಿತವಾಗಿ ಇಂತಹ ಪ್ರಕರಣಗಳನ್ನ ನಡೆಸುತ್ತಿದ್ದಾರೆ.
ಒಂದು ಚಿಟಿಕೆ ಅರಿಶಿನದಿಂದ ಲೆಕ್ಕವಿಲ್ಲದಷ್ಟು ಪ್ರಯೋಜನಗಳಿವೆ: ಹೀಗೆ ಮಾಡಿದ್ರೆ ಸುಲಭವಾಗಿ ತೂಕ ಇಳಿಸಿಕೊಳ್ಳಬಹುದು.!
ಕಾನೂನು ಅಡಿಯಲ್ಲೇ ಕಾನೂನು ವಿರೋಧಿ ಕೆಲಸ ಕೆಲ ಅಧಿಕಾರಿಗಳು ಮಾಡ್ತಿದ್ದಾರೆ. ನನ್ನ ಕ್ಷೇತ್ರದಲ್ಲಿ ಇಂತಹ ಅಕ್ರಮ ನಡೆದಿದೆ. ಗೋಮಾಳ ಒತ್ತುವರಿ ಮಾಡಿಕೊಂಡಿದ್ದಾರೆ. ಪಂಚಾಯತಿಯವರೇ ಖಾತೆ ಮಾಡಿಕೊಟ್ಡಿದ್ದಾರೆ. ವ್ಯವಸ್ಥಿತವಾಗಿ ಅಕ್ರಮವಾಗಿ ಅಧಿಕಾರಿಗಳ ಬೆಂಬಲದಿಂದ ಒತ್ತುವರಿ ಮಾಡಿಕೊಂಡಿದ್ದಾರೆ.
ಇಂತಹ ಕೇಸ್ ಬಗ್ಗೆ ನಾವು ಟ್ರ್ಯಾಕ್ ಮಾಡ್ತಿದ್ದೇವೆ. ಸರ್ಕಾರದ ಜಾಗ, ಗೋಮಾಳದ ಜಾಗಕ್ಕೆ ಫೈಟ್ ಮಾಡ್ತಿದ್ದೇವೆ. ಕಾನೂನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ನಾವು ಅಂತಹ ಕೇಸ್ ಟ್ಯಾಕಲ್ ಮಾಡಲು ಕ್ರಮ ತೆಗೆದುಕೊಳ್ಳುತ್ತಿದ್ದೇವೆ ಅಂತ ತಿಳಿಸಿದರು.