ಯುವಕರನ್ನು ಉದ್ಯೋಗಶೀಲರನ್ನಾಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಯೋಗಿಕವಾಗಿ ಪ್ರಧಾನಮಂತ್ರಿ ಇಂಟರ್ನ್ಶಿಪ್ ಯೋಜನೆಯನ್ನು ಆರಂಭಿಸಿದೆ. ಯೋಜನೆಯಡಿ ಇಂಟರ್ನ್ಶಿಪ್ಗೆ ಆಯ್ಕೆಯಾದ ಯುವಕರು ಮಾಸಿಕ 5,000 ರೂಪಾಯಿಗಳ ಆರ್ಥಿಕ ಸಹಾಯವನ್ನು ಪಡೆಯಲಿದ್ದಾರೆ. ಈ ಯೋಜನೆಯ ಅಡಿಯಲ್ಲಿ ಇಂಟರ್ನ್ಶಿಪ್ ಮಾಡಲು ಬಯಸುವ ಯಾವುದೇ ಅಭ್ಯರ್ಥಿಯು ಅರ್ಜಿ ಸಲ್ಲಿಸಲು ಅಧಿಕೃತ ಸೈಟ್ಗೆ ಭೇಟಿ ನೀಡಬೇಕು. ಯಾರು ಅರ್ಜಿ ಸಲ್ಲಿಸಲು ಆರ್ಹರು, ವಯೋಮಿತಿ ಏನು? ವಿವರಣೆ ಇಲ್ಲಿ ತಿಳಿಸಲಾಗಿದೆ.
ಅರ್ಜಿ ಸಲ್ಲಿಸಲು ವಯೋಮಿತಿ:
ಈ ಯೋಜನೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು 21 ರಿಂದ 24 ವರ್ಷಗಳ ನಡುವೆ ಇರಬೇಕು. ಅಲ್ಲದೆ, ಅಭ್ಯರ್ಥಿಯು ಪೂರ್ಣ ಸಮಯದ ಉದ್ಯೋಗದಲ್ಲಿ ಇರಬಾರದು, ಒಬ್ಬರು ಪೂರ್ಣ ಸಮಯದ ಶಿಕ್ಷಣ, ವ್ಯಾಸಂಗದಲ್ಲಿರಬಾರದು. ಅದ್ಯಾಗೂ ಆನ್ಲೈನ್ ಅಥವಾ ದೂರಶಿಕ್ಷಣದ ಮೂಲಕ ಅಧ್ಯಯನ ಮಾಡುವ ಅಭ್ಯರ್ಥಿಗಳು ಸಹ ಅರ್ಜಿ ಸಲ್ಲಿಸಬಹುದಾಗಿದೆ.
ಯಾರು ಅರ್ಜಿ ಸಲ್ಲಿಸಬಹುದು?
ಹೈಸ್ಕೂಲ್ ಮತ್ತು ಹೈಯರ್ ಸೆಕೆಂಡರಿ ಪಾಸಾದ ವಿದ್ಯಾರ್ಥಿಗಳು ಪಿಎಂ ಇಂಟರ್ನ್ಶಿಪ್ ಸ್ಕೀಮ್ 2024 ಗೆ ಅರ್ಜಿ ಸಲ್ಲಿಸಬಹುದು. ಇದಲ್ಲದೆ, ಐಟಿಐ ತೇರ್ಗಡೆ, ಪಾಲಿಟೆಕ್ನಿಕ್ ಡಿಪ್ಲೊಮಾ ಹೊಂದಿರುವವರು ಮತ್ತು ಬಿಎ, ಬಿಎಸ್ಸಿ, ಬಿಕಾಂ, ಬಿಸಿಎ, ಬಿಬಿಎ ಮತ್ತು ಬಿಫಾರ್ಮಾ ಉತ್ತೀರ್ಣರಾದ ಅಭ್ಯರ್ಥಿಗಳು ಸಹ ಇದಕ್ಕೆ ಅರ್ಹರು. ಆದಾಗ್ಯೂ, ಸ್ನಾತಕೋತ್ತರ, ಐಐಟಿ, ಎನ್ಐಟಿ, ಐಐಎಂ, ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಪದವೀಧರರು, ಎಂಬಿಎ, ಸಿಎಸ್, ಸಿಎ, ಎಂಬಿಬಿಎಸ್ ಮತ್ತು ಬಿಡಿಎಸ್ ಪದವಿಗಳನ್ನು ಹೊಂದಿರುವ ಅಭ್ಯರ್ಥಿಗಳು ಈ ಯೋಜನೆಗೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ.
ಇಂಟರ್ನ್ಶಿಪ್ ಅವಧಿ ಮತ್ತು ಪ್ರಯೋಜನಗಳು
ಈ ಯೋಜನೆಯಡಿ ಇಂಟರ್ನ್ಶಿಪ್ ಅವಧಿಯು 12 ತಿಂಗಳು ಇರುತ್ತದೆ. ಕೇಂದ್ರ ಸರ್ಕಾರವು 2024-25ನೇ ಹಣಕಾಸು ವರ್ಷದಲ್ಲಿ ಟಾಪ್ 500 ಕಂಪನಿಗಳಲ್ಲಿ 1.25 ಲಕ್ಷ ಇಂಟರ್ನ್ಶಿಪ್ ಅವಕಾಶಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ. ಐದು ವರ್ಷಗಳಲ್ಲಿ ಒಂದು ಕೋಟಿ ಅಭ್ಯರ್ಥಿಗಳು ಈ ಯೋಜನೆಯಡಿ ಇಂಟರ್ನ್ಶಿಪ್ ಅವಕಾಶವನ್ನು ಪಡೆಯುತ್ತಾರೆ. ಇಂಟರ್ನ್ಶಿಪ್ ಸಮಯದಲ್ಲಿ, ಅಭ್ಯರ್ಥಿಗಳಿಗೆ ತಿಂಗಳಿಗೆ ರೂ 5,000 ಸ್ಟೈಫಂಡ್ ನೀಡಲಾಗುವುದು, ಇದು ಅಭ್ಯರ್ಥಿಗಳಿಗೆ ಆರ್ಥಿಕ ಸಹಾಯವನ್ನು ನೀಡುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ?
ಪಿಎಂ ಟರ್ನ್ಶಿಪ್ ಸ್ಕೀಮ್ ಅರ್ಜಿ ಸಲ್ಲಿಸಲು pminternship.mca.gov.in ನ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ. ನಂತರ ‘ರಿಜಿಸ್ಟರ್’ ಲಿಂಕ್ ಅನ್ನು ಕ್ಲಿಕ್ ಮಾಡಿ, ಅದು ಹೊಸ ಪುಟವನ್ನು ತೆರೆಯುತ್ತದೆ. ಗತ್ಯವಿರುವ ಎಲ್ಲಾ ನೋಂದಣಿ ವಿವರಗಳನ್ನು ಇಲ್ಲಿ ಭರ್ತಿ ಮಾಡಿ ನಂತರ ‘ಸಲ್ಲಿಸು’ ಕ್ಲಿಕ್ ಮಾಡಿ.
ನೀವು ಒದಗಿಸಿದ ಮಾಹಿತಿಯ ಆಧಾರದ ಮೇಲೆ ಪೋರ್ಟಲ್ ನಿಮ್ಮ ಬಯೋಡೇಟಾವನ್ನು ಸಿದ್ಧಪಡಿಸುತ್ತದೆ. ಈಗ ಒಬ್ಬರು ಸ್ಥಳ, ವಲಯ, ಕ್ರಿಯಾತ್ಮಕ ಪಾತ್ರ ಮತ್ತು ಅರ್ಹತೆಯ ಆಧಾರದ ಮೇಲೆ ಗರಿಷ್ಠ ಐದು ಇಂಟರ್ನ್ಶಿಪ್ ಅವಕಾಶಗಳಿಗೆ ಅರ್ಜಿ ಸಲ್ಲಿಸಬೇಕು. ಬಳಿಕ ಅಂತಿಮವಾಗಿ ‘ಸಲ್ಲಿಸು’ ಕ್ಲಿಕ್ ಮಾಡಿ ಮತ್ತು ದೃಢೀಕರಣ ಪುಟವನ್ನು ಡೌನ್ಲೋಡ್ ಮಾಡಿ. ಭವಿಷ್ಯಕ್ಕಾಗಿ ಅದರ ಪ್ರಿಂಟ್ ಔಟ್ ಅನ್ನು ನಿಮ್ಮ ಬಳಿ ಇಟ್ಟುಕೊಳ್ಳಿ.