ಇಂಗ್ಲೆಂಡ್ ವಿರುದ್ಧದ 5 ಟೆಸ್ಟ್ ಪಂದ್ಯಗಳ ಸರಣಿ ಆರಂಭಕ್ಕೂ ಮುನ್ನ ವಿರಾಟ್ ಟೀಂ ಇಂಡಿಯಾದಿಂದ ರಜೆ ತೆಗೆದುಕೊಂಡಿದ್ದರು. ಆರಂಭದಲ್ಲಿ ಮೊದಲೆರಡು ಟೆಸ್ಟ್ಗಳಿಂದ ಕೊಹ್ಲಿ ಹೊರಗುಳಿಯುತ್ತಾರೆ ಎಂಬ ಸುದ್ದಿ ಕೇಳಿ ಬಂದಿತ್ತು. ಆದರೆ ವಿರಾಟ್ ಕೊಹ್ಲಿ ಭಾರತಕ್ಕೆ ಮರಳಿದ್ದು, ಈ ಬಾರಿಯ ಐಪಿಎಲ್ನಲ್ಲಿ ಕಣಕ್ಕಿಳಿಯುವುದನ್ನು ಖಚಿತಪಡಿಸಿದ್ದಾರೆ.
THE GOAT HAS REACHED INDIA. 🐐 [Viral Bhayani]
– The wait is over for all cricket fans….!!!!pic.twitter.com/Vs2SPrG984
— Johns. (@CricCrazyJohns) March 17, 2024
ಈ ಹಿಂದೆ ಕೊಹ್ಲಿ ಐಪಿಎಲ್ ಆಡುವುದು ಅನುಮಾನ ಎಂದು ವರದಿಯಾಗಿತ್ತು. ಆದರೀಗ ಭಾರತಕ್ಕೆ ಬಂದಿರುವ ವಿರಾಟ್ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಶಿಬಿರವನ್ನು ಸೇರುವ ಮೂಲಕ ಅಭ್ಯಾಸ ಆರಂಭಿಸಲಿದ್ದಾರೆ. ಕಳೆದ 2 ತಿಂಗಳಿಂದ ಕ್ರಿಕೆಟ್ನಿಂದ ದೂರ ಉಳಿದಿರುವ ವಿರಾಟ್ ಕೊಹ್ಲಿ ತಮ್ಮ ಕೊನೆಯ ಪಂದ್ಯವನ್ನು 17 ಜನವರಿ 2024 ರಂದು ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಯಲ್ಲಿ ಆಡಿದ್ದರು.
ಪಿಯುಸಿ ಪಾಸಾದವರಿಗೆ ಭರ್ಜರಿ ಉದ್ಯೋಗವಕಾಶ.! ತಿಂಗಳಿಗೆ ₹63,000 ಸಂಬಳ! ಈಗಲೇ ಅರ್ಜಿ ಸಲ್ಲಿಸಿ
ಇಂಗ್ಲೆಂಡ್ ವಿರುದ್ಧದ 5 ಟೆಸ್ಟ್ ಪಂದ್ಯಗಳ ಸರಣಿ ಆರಂಭಕ್ಕೂ ಮುನ್ನ ವಿರಾಟ್ ಟೀಂ ಇಂಡಿಯಾದಿಂದ ರಜೆ ತೆಗೆದುಕೊಂಡಿದ್ದರು. ಆರಂಭದಲ್ಲಿ ಮೊದಲೆರಡು ಟೆಸ್ಟ್ಗಳಿಂದ ಕೊಹ್ಲಿ ಹೊರಗುಳಿಯುತ್ತಾರೆ ಎಂಬ ಸುದ್ದಿ ಕೇಳಿ ಬಂದಿತ್ತು. ಆದರೆ ಆ ನಂತರ ಇಡೀ ಸರಣಿಯಲ್ಲಿ ವಿರಾಟ್ ಆಡುವುದಿಲ್ಲ ಎಂಬುದು ಖಚಿತವಾಯಿತು.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿದ್ದ ಬಿಸಿಸಿಐ, ವೈಯಕ್ತಿಕ ಕಾರಣಗಳಿಂದ ವಿರಾಟ್ ತಂಡ ತೊರೆದಿದ್ದಾರೆ ಎಂದಿತ್ತು. ಆನಂತರ ಎರಡನೇ ಮಗು ಅಕಾಯ್ ಜನನದ ಮಾಹಿತಿಯನ್ನು ವಿರಾಟ್ ಮತ್ತು ಅನುಷ್ಕಾ ದಂಪತಿಗಳು ಜಂಟಿಯಾಗಿ ಸೋಶೀಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.