ಸಲಾರ್ (Salaar) ಟೀಸರ್ನಲ್ಲಿ ನಮ್ಮ ಡಾರ್ಲಿಂಗ್ ಸರಿಯಾಗಿ ಕಾಣಿಸ್ತಿಲ್ಲ ಅಂತ ಬೇಸರವಾಗಿದ್ದ ಫ್ಯಾನ್ಸ್ಗೆ ಖುಷಿ ವಿಷ್ಯ ಇಲ್ಲಿದೆ. ಟೀಸರ್ ಆಯ್ತು ಟ್ರೈಲರ್ ರಿಲೀಸ್ಗೆ ಮುಹೂರ್ತ ಫಿಕ್ಸ್ ಆಗಿದೆ. ಯಾವಾಗ ಬರುತ್ತಿದೆ ಸಲಾರ್ ಟ್ರೈಲರ್? ಸಿನಿಮಾ ರಿಲೀಸ್ ಬಗ್ಗೆ ಏನು ಟಾಕ್? ಇಲ್ಲಿದೆ ಮಾಹಿತಿ
ಟೀಸರ್ನಲ್ಲಿ ಪ್ರಭಾಸ್ (Prabhas) ಇನ್ನೂ ಸ್ವಲ್ಪ ಜಾಸ್ತಿ ಕಾಣಿಸ್ಬೇಕಿತ್ತು ಅಂತ ಫ್ಯಾನ್ಸ್ ಮರುಗಿದ್ರು. ಅದೇನೋ ಟೀಸರ್ನಲ್ಲಿ ಕಪ್ಪು ಬಣ್ಣ ಜಾಸ್ತಿ ಆಯ್ತು ಅಂತ ಮತ್ತಷ್ಟು ಜನ ಕಾಮೆಂಟ್ ಮಾಡಿದ್ರು. ಟೀಸರ್ ಆಯ್ತು, ಟ್ರೈಲರ್ ಹೇಗಿರುತ್ತೆ ಅಂತ ಅಲ್ಲಿಂದ ಕಾಯೋಕೆ ಶುರು ಮಾಡಿದ್ರು ಪ್ರಭಾಸ್ ಫ್ಯಾನ್ಸ್. ಸದ್ಯಕ್ಕೆ ಡಾರ್ಲಿಂಗ್ ಅಭಿಮಾನಿಗಳಿಗೆ ಆಶಾಕಿರಣದಂತೆ ಕಾಣ್ತಿರೋದು ಒನ್ & ಓನ್ಲಿ ಸಲಾರ್ ಮಾತ್ರ. ಬ್ಯಾಕ್ ಟು ಬ್ಯಾಕ್ ಸೋಲಿನಿಂದ ನಿರಾಸೆಯಲ್ಲಿ ಫ್ಯಾನ್ಸ್ ಪ್ರಶಾಂತ್ ನೀಲ್ ಮೇಲೆ ಬೆಟ್ಟದಷ್ಟು ಆಸೆ ಇಟ್ಟುಕೊಂಡಿದ್ದಾರೆ.
ಅಭಿಮಾನಿಗಳ ಲೆಕ್ಕಾಚಾವನ್ನ ನೀಲ್ ಪರಿಗಣಿಸಿದ್ದಾರೆ. ಹಾಲಿವುಡ್ ಸ್ಟೈಲಿನಲ್ಲಿ ಆ್ಯಕ್ಷನ್ ಸೀನ್ಸ್ ಮಾಡಿಸಿದ್ದಾರೆ. ಸಾಲು ಸಾಲು ಕಾರುಗಳನ್ನ ನಿಲ್ಲಿಸಿ ಅದ್ದೂರಿ ಫೈಟ್ ಸೀನ್ ಕೂಡ ಶೂಟ್ ಮಾಡಿ ಮುಗಿಸಿದ್ದಾರೆ. ಈ ಅದ್ದೂರಿತನಕ್ಕೆ ಹೊಂಬಾಳೆ ಸಂಸ್ಥೆ (Hombale Films) ಕೋಟಿ ಕೋಟಿ ಹಣವನ್ನೂ ಹರಿಸಿದೆ. ಈಗ ಎಲ್ಲರ ಚಿತ್ತ ಟ್ರೈಲರ್ನತ್ತ. ಸಲಾರ್ ಟ್ರೇಲರ್ಗೆ ಕಾಯ್ತಿದ್ದ ಫ್ಯಾನ್ಸ್ಗೆ ವಿಮರ್ಶಕ ರಮೇಶ್ ಬಾಲ ಗುಡ್ ನ್ಯೂಸ್ ಕೊಟ್ಟಿದ್ದಾ ರೆ. ನವೆಂಬರ್ ಅಂತ್ಯ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ಸಲಾರ್ ಟ್ರೈಲರ್ ಬರುತ್ತಿದೆ ಅಂತ ಭವಿಷ್ಯ ನುಡಿದಿದ್ದಾರೆ.