ಬೆಂಗಳೂರು: ವಿಷ್ಯ ನಿಧಿ ಪಿಂಚಣಿ ಯೋಜನೆ 1995ರ ಅಡಿಯಲ್ಲಿ ಬರುವ ಪಿಂಚಣಿದಾರರು ಪ್ರತಿ ವರ್ಷದಂತೆ ನವೆಂಬರ್ ತಿಂಗಳನಲ್ಲಿ ತಮ್ಮ ಜೀವಂತ ಪ್ರಮಾಣ ಪತ್ರವನ್ನು ಸಲ್ಲಿಸಬೇಕಾಗಿರುತ್ತದೆ. ಆದ್ದರಿಂದ ನಿವೃತ್ತ ಸರ್ಕಾರಿ ನೌಕರರಿಗೆ ಭಾರತೀಯ ಅಂಚೆ ಇಲಾಖೆ ಗುಡ್ ನ್ಯೂಸ್ ನೀಡಿದೆ. ಸಾಮಾನ್ಯವಾಗಿ ಜೀವನ ಪ್ರಮಾಣ ಪತ್ರ ಸಲ್ಲಿಕೆಗೆ ನವೆಂಬರ್ ತಿಂಗಳು ಅಂತಿಮ ಗಡುವಾಗಿದೆ. ಪಿಂಚಣಿದಾರರು ಪ್ರತಿವರ್ಷ ಜೀವನ ಪ್ರಮಾಣ ಪತ್ರ ಸಲ್ಲಿಕೆ ಮಾಡೋದು ಅಗತ್ಯ. ಇಲ್ಲವಾದರೆ ಪಿಂಚಣಿ ಬರೋದು ಸ್ಥಗಿತಗೊಳ್ಳುತ್ತದೆ.
ಇನ್ನೂ ಮನೆಯಿಂದಲೇ ಪಿಂಚಣಿದಾರರು ಡಿಜಿಟಲ್ ಜೀವನ ಪ್ರಮಾಣ ಪತ್ರ ಪಡೆಯಲು ಅನುಕೂಲವನ್ನು ಕಲ್ಪಿಸಲಾಗಿದೆ. ಭಾರತೀಯ ಅಂಚೆ ಇಲಾಖೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ಗಳ ಮೂಲಕ ಮನೆ ಬಾಗಿಲಿನಲ್ಲೇ ಪಿಂಚಣಿದಾರರು ಸುಲಭವಾಗಿ ಡಿಜಿಟಲ್ ಜೀವನ ಪ್ರಮಾಣ ಪತ್ರವನ್ನು ಸಲ್ಲಿಸಲು ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಅಂಚೆ ಇಲಾಖೆ ಹೇಳಿದೆ. ಈ ಸೇವೆಯ ಉಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದೆ.
ಪಿಂಚಣಿದಾರರು ಅಥವಾ ಕುಟುಂಬದ ಪಿಂಚಣಿದಾರರು ತಮ್ಮ ಹತ್ತಿರದ ಅಂಚೆ ಕಚೇರಿಯಲ್ಲಿ ಅಥವಾ ಪೋಸ್ಟ್ ಮ್ಯಾನ್ ಮೂಲಕ ರೂ. 70 ಶುಲ್ಕ ನೀಡುವುದರೊಂದಿಗೆ ಕೆಲವೇ ನಿಮಿಷಗಳಲ್ಲಿ ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ, ಪಿಪಿಒ ಸಂಖ್ಯೆ ಮತ್ತು ಪಿಂಚಣಿದಾರರ ಬ್ಯಾಂಕ್ ಖಾತೆಯ ವಿವರಗಳೊಂದಿಗೆ ತಮ್ಮ ಬೆರಳಚ್ಚು ಪರಿಶೀಲಿಸಿ ಡಿಜಿಟಲ್ ಜೀವನ ಪ್ರಮಾಣ ಪತ್ರವನ್ನು ಪಡೆಯಬಹುದಾಗಿದೆ.
ಯಾವುದೇ ಕಛೇರಿಗೆ ಭೇಟಿ ನೀಡದೆ ಪಿಂಚಣಿ ಪಡೆಯುವವರು ತಮ್ಮ ಮನೆಯ ಬಾಗಿಲಿನಲ್ಲಿಯೇ ನವೆಂಬರ್ 30ರೊಳಗಾಗಿ ಪಡೆಯಬಹುದು. ಡಿಜಿಟಲ್ ಜೀವನ ಪ್ರಮಾಣ ಪತ್ರವನ್ನು ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ www.ippbonline.com ವೆಬ್ಸೈಟ್ ಮತ್ತು [email protected] ಇ-ಮೇಲ್ ಐಡಿಗೆ ಸಂಪರ್ಕಿಸಲು ಸಹ ಕೋರಲಾಗಿದೆ.
ಇಂಡಿಯನ್ ಪೋಸ್ಟಲ್ ಪೇಮೆಂಟ್ ಬ್ಯಾಂಕ್ ಮೂಲಕವೂ 785 ಜಿಲ್ಲೆಗಳಲ್ಲಿ 1.8 ಲಕ್ಷ ಪೋಸ್ಟ್ ಮಾನ್, ಗ್ರಾಮೀಣ ಅಂಚೆ ಸಿಬ್ಬಂದಿಗಳ ಮೂಲಕವೂ ಇದನ್ನು ನಡೆಸಲಾಗುತ್ತಿದೆ. 2022ರಲ್ಲಿಯೇ ಪಿಂಚಣಿದಾರರಿಗೆ ಬೆರಳಚ್ಚು ಆಧರಿತ ಡಿಜಿಟಲ್ ಜೀವನ ಪ್ರಮಾಣ ಪತ್ರವನ್ನು ಮನೆ ಬಾಗಿಲಿನಲ್ಲಿ ಒದಗಿಸಲು ಒಪ್ಪಂದವನ್ನು ಮಾಡಿಕೊಳ್ಳಲಾಗಿತ್ತು. ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ನೊಂದಿಗೆ ದಿನಾಂಕ 29/11/2022ರಲ್ಲಿ ಈ ಕುರಿತ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು.
ಪಿಂಚಣಿದಾರರು ವಾರ್ಷಿಕ ಜೀವಿತ ಪ್ರಮಾಣ ಪತ್ರವನ್ನು ಸಲ್ಲಿಸಲು ಸಾಧ್ಯವಾಗುವಂತೆ, ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ನವರು, ಬೆರಳಚ್ಚು ಆಧಾರಿತ ಡಿಜಿಟಲ್ ಜೀವನ ಪ್ರಮಾಣ ಪತ್ರದ ಸೌಲಭ್ಯವನ್ನು ರೂ. 70ರ ಶುಲ್ಕದೊಂದಿಗೆ, ಪಿಂಚಣಿದಾರರ ಹತ್ತಿರದ ಅಂಚೆ ಕಚೇರಿಯಲ್ಲಿ ಅಥವಾ ಮನೆ ಬಾಗಿಲಲ್ಲಿ ನೀಡುತ್ತಿದ್ದಾರೆ. ಈ ಕುರಿತು ಖಜಾನೆ ಇಲಾಖೆ ಹಾಗೂ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ನಡುವೆ ಒಪ್ಪಂದ ಮಾಡಿಕೊಳ್ಳಲಾಗಿದೆ.
80 ವರ್ಷ ಮೇಲ್ಪಟ್ಟ ಪಿಂಚಣಿದಾರರು ಪಿಂಚಣಿ ಪಡೆಯಲು ಪ್ರತಿ ವರ್ಷ ಜೀವನ ಪ್ರಮಾಣ ಪತ್ರ ಸಲ್ಲಿಕೆ ಮಾಡಬೇಕು. ಈ ವರ್ಷ ಈ ಪ್ರಮಾಣ ಪತ್ರವನ್ನು ನವೆಂಬರ್ 30ರೊಳಗೆ ಸಲ್ಲಿಕೆ ಮಾಡಬೇಕು. ಸೂಪರ್ ಸೀನಿಯರ್ ಪಿಂಚಣಿದಾರರು ಜೀವನ ಪ್ರಮಾಣಪತ್ರವನ್ನು ಅಕ್ಟೋಬರ್ 1ರಿಂದ ನವೆಂಬರ್ 30ರೊಳಗೆ ಸಲ್ಲಿಕೆ ಮಾಡಬೇಕು. ಇನ್ನು 60 ವರ್ಷ ಹಾಗೂ 80 ವರ್ಷ ನಡುವಿನ ಹಿರಿಯ ನಾಗರಿಕರಿಗೆ ಜೀವನ ಪ್ರಮಾಣ ಪತ್ರ ಸಲ್ಲಿಕೆ ಮಾಡಲು ನವೆಂಬರ್ 1ರಿಂದ ನವೆಂಬರ್ 30ರ ತನಕ ಕಾಲಾವಕಾಶ ನೀಡಲಾಗಿದೆ.