ಟೀಂ ಇಂಡಿಯಾದ (Team India) ವಿಕೆಟ್ ಕೀಪರ್ ರಿಷಬ್ ಪಂತ್ಗೆ (Rishabh Pant) 2024ರ ಐಪಿಎಲ್ಗೂ ಮುನ್ನವೇ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (National Cricket Academy) ಫಿಟ್ನೆಸ್ ಕ್ಲಿಯರೆನ್ಸ್ ಸರ್ಟಿಫಿಕೆಟ್ ನೀಡಿದೆ. ಈ ಮೂಲಕ ಐಪಿಎಲ್ 2024ರಲ್ಲಿ (IPL 2024) ಆಡಲು ಅವರು ಅರ್ಹರಾಗಿದ್ದಾರೆ.
Bigg News: ಚುನಾವಣಾ ಆಯುಕ್ತ ಅರುಣ್ ಗೋಯೆಲ್ ದಿಢೀರ್ ರಾಜೀನಾಮೆ: ಕಾರಣ ಏನು?
ಕಳೆದ ವರ್ಷ ಜ.1ರ ನಸುಕಿನ ವೇಳೆಯಲ್ಲಿ ಭೀಕರ ಕಾರು ಅಪಘಾತದಲ್ಲಿ ಪಂತ್ ಗಂಭೀರವಾಗಿ ಗಾಯಗೊಂಡಿದ್ದರು. ಇದೀಗ ಅವರು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಫಿಟ್ನೆಸ್ ಕ್ಲಿಯರೆನ್ಸ್ ಸರ್ಟಿಫಿಕೆಟ್ ಪಡೆದುಕೊಂಡಿದ್ದಾರೆ.
ಪಂತ್ 2023 ರಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್ನಿಂದ ವಂಚಿತರಾದರು. ಅವರ ಕಠಿಣ ಪರಿಶ್ರಮದಿಂದ ಕ್ರಿಕೆಟ್ಗೆ ಮರಳಲು ಇದೀಗ ಸಮರ್ಥರಾಗಿದ್ದಾರೆ