ಬಳ್ಳಾರಿ: ಕೊಲೆ ಆರೋಪಿ ದರ್ಶನ್ ಬಿಡುಗಡೆಗಾಗಿ ಅವರ ಅಭಿಮಾನಿಗಳು ಫೋಟೋ ಹಿಡಿದು ದೈವದ ಮೊರೆ ಹೋಗಿರುವ ಸನ್ನಿವೇಶ ಬಳ್ಳಾರಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಬಳ್ಳಾರಿಯ ಬಲಕಲ್ ಅನ್ನೋ ಗ್ರಾಮದ ಬೀರಲಿಂಗೇಶ್ವರ ದೈವದ ಬಳಿ ದರ್ಶನ್ ಬಿಡುಗಡೆ ಅಭಿಮಾನಿಗಳು ದಿನಾಂಕ ಕೇಳಿದ್ದಾರೆ.
ಡಯಟ್, ವ್ಯಾಯಾಮ ಯಾವುದೂ ಇಲ್ಲದೇ ಹೊಟ್ಟೆಯ ಬೊಜ್ಜನ್ನು ಕರಗಿಸುವುದು ಹೇಗೆ? ಇಲ್ಲಿವೆ ಸಿಂಪಲ್ ಟಿಪ್ಸ್
ಈ ವೇಳೆ ಮೂರು ತಿಂಗಳ ಬಳಿಕ ದರ್ಶನ್ ಹೊರ ಬರ್ತಾರೆ ಅಂತಾ ಬೀರಲಿಂಗೇಶ್ವರ ದೈವ ಭವಿಷ್ಯ ನುಡಿದಿದೆ. ದರ್ಶನ್ ಭಾವಚಿತ್ರದ ಮೇಲೆ ತಲೆಯಿಟ್ಟು ದೈವ ನುಡಿದ ಮಾತಿನ ವೀಡಿಯೋ ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದೆ. ಇನ್ನೂ ದರ್ಶನ್ ಬಿಡುಗಡೆ ಬಗ್ಗೆ ದೈವ ಹೇಳಿದ ಮಾತಿನ ವಿಡಿಯೋ ಮಾಡಿ ಅಭಿಮಾನಿಗಳು ತಮ್ಮ ಇನ್ಸ್ಟಾ ಖಾತೆಯಲ್ಲೂ ಹಂಚಿಕೊಂಡಿದ್ದಾರೆ..