ಕಳದ ವರ್ಷ ಸ್ಯಾಮ್ಸಂಗ್ ಗ್ಯಾಲಕ್ಸಿ S23 ಫೋನ್ ಬಿಡುಗಡೆಯಾಗಿದೆ. ಇದರ ಬೆಲೆ 74,999 ರೂಪಾಯಿ. 8ಜಿಬಿ ರ್ಯಾಮ್ ಹಾಗೂ 128 ಜಿಬಿ ಸ್ಟೋರೇಜ್ ಫೋನ್ ಇದೀಗ ಕೇವಲ 37,000 ರೂಪಾಯಿಗೆ ಲಭ್ಯವಿದ. ಇಷ್ಟೇ ಅಲ್ಲ ಇದರ ಜೊತೆಗೆ ಮತ್ತಷ್ಟು ಉಳಿತಾಯ ಮಾಡಲು ಕೆಲ ಆಯ್ಕೆಗಳಿವೆ. ಆ್ಯಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿ ಮಾಡಿದರೆ ಶೇಕಡಾ 5ರಷ್ಟು ಕ್ಯಾಶ್ಬ್ಯಾಕ್ ಸಿಗಲಿದೆ. ಇದರ ಜೊತೆಗೆ ಹಳೇ ಫೋನ್ ಎಕ್ಸ್ಚೇಂಜ್ ಮಾಡಿದರೆ ಮತ್ತಷ್ಟು ಬೆಲೆ ಕಡಿತಗೊಳ್ಳಲಿದೆ.
ಎಕ್ಸ್ಚೇಂಜ್ ಆಫರ್ ಫೋನ್ ಮೇಲೆ ಅವಲಂಬಿತವಾಗಿದೆ. ಉತ್ತಮ ಕಂಡಿಷನ್ನಲ್ಲಿರುವು ಫೋನ್ಗಳಿಗೆ ಗರಿಷ್ಠ ಎಕ್ಸ್ಚೇಂಜ್ ಬೋನಸ್ ಸಿಗಲಿದೆ. ಈ ಮೂಲಕ ಹೊಸ ಫೋನ್ ಖರೀದಿಸುವಾಗ ಭಾರಿ ರಿಯಾಯಿತಿ ಪಡೆಯಲು ಸಾಧ್ಯವಿದೆ. ಆದರೆ ಫೋನ್ ಕಂಡಿಷನ್ ಸೇರಿದಂತೆ ಇತರ ಕೆಲ ವಿಚಾರಗಳು ಎಕ್ಸ್ಜೇಂಚ್ ಬೋನಸ್ ಪಡೆಯುವಲ್ಲಿ ಪ್ರಮುಖ ಪಾತ್ರ ನಿರ್ವಹಸುತ್ತದೆ. ಹೀಗಾಗಿ ಎಕ್ಸ್ಚೇಂಜ್ ಬೆಲೆ ಸ್ಪಷ್ಟವಾಗಿ ಉಲ್ಲೇಖಿಸಲು ಸಾಧ್ಯವಿಲ್ಲ.
ರೈತ ಸಮುದಾಯಕ್ಕೆ ಮತ್ತೊಂದು ಗುಡ್ ನ್ಯೂಸ್! 2027 ರೊಳಗೆ ದೇಶದ 11 ಕೋಟಿ ರೈತರಿಗೆ ‘ಡಿಜಿಟಲ್ ಐಡಿ’ ಕಾರ್ಡ್
ಸ್ನಾಪ್ಡ್ರಾಗನ್ 8 ಜನರೇಶನ್ 2 ಚಿಪ್ಸೆಟ್ ಹೊಂದಿರುವ ಈ ಫೋನ್, ದೈನಂದಿನ ಬಳಕೆ ಜೊತೆಗೆ ಗೇಮಿಂಗ್ಗೆ ಉತ್ತಮ ಆಯ್ಕೆಯಾಗಿದೆ. ಸತತವಾಗಿ ಗೇಮಿಂಗ್ನಲ್ಲಿ ತೊಡಗಿಸಿಕೊಂಡರೂ ಫೋನ್ ಹೀಟ್ ಆಗುವ ಹಾಗೂ ಹ್ಯಾಂಗ್ ಆಗುವ ಸಮಸ್ಯೆ ಎದುರಾಗುವುದಿಲ್ಲ. ಎಲ್ಲಾ ರೀತಿಯಲ್ಲೂ ಈ ಫೋನ್ ಬಳಕೆದಾರರ ಸ್ನೇಹಿಯಾಗಿ ಕಾರ್ಯನಿರ್ವಹಿಸಲಿದೆ.
6.1 AMOLED ಡಿಸ್ಪ್ಲೆ, ವಿಕ್ಟಸ್ 2 ಗೊರಿಲ್ಲಾ ಗ್ಲಾಸ್, 3900mAh ಬ್ಯಾಟರಿ ಪ್ಯಾಕ್ ಹೊಂದಿದೆ. ಮುಖ್ಯ ಕ್ಯಾಮೆರಾ 50MP ಹೊಂದಿದೆ. ಈ ಕ್ಯಾಮೆರಾ ಮೂಲಕ 3x ಆಪ್ಟಿಕಲ್ ಝೂಮ್ ಮೂಲಕ 10ಎಂಪಿ ಟೆಲಿಫೋಟೋ ಕ್ಲಿಕ್ಕಿಸಲು ಸಾಧ್ಯವಿದೆ. ಸೆಲ್ಫಿ ಹಾಗೂ ವಿಡಿಯೋ ಕಾಲ್ಗಾಗಿ 12ಎಂಪಿ ಫ್ರಂಟ್ ಕ್ಯಾಮೆರಾ ಲಭ್ಯವಿದೆ. ಸ್ಟೋರೇಜ್ ಸೇರಿದಂತೆ, ಸ್ಪೀಡ್, ಎಐ ಫೀಚರ್ಸ್ ಲಭ್ಯವಿದೆ.