ನವದೆಹಲಿ : ಕ್ಯಾನ್ಸರ್ ರೋಗಿಗಳಿಗೆ ಝೈಡಸ್ ಕಂಪನಿ ಭರ್ಜರಿ ಗುಡ್ ನ್ಯೂಸ್ ನೀಡಿದೆ. ಹೌದು 72 ಲಕ್ಷ ರು.ತಗಲುತ್ತಿದ್ದ ಔಷಧಿ ಇನ್ನು ಕೇವಲ 3 ಲಕ್ಷ ರು.ಗಳಿಗೆ ಲಭ್ಯವಾಗಲಿದೆ ಎಂದು ಝೈಡಸ್ ಲೈಫ್ಸೈನ್ಸಸ್ ಔಷಧ ಕಂಪನಿ ಮಾಹಿತಿ ನೀಡಿದೆ. ಔಷಧ ತಯಾರಿಸಿದ್ದ ಮೂಲ ಕಂಪನಿಯ ಪೇಟೆಂಟ್ ಅವಧಿ ಮುಗಿದಿರುವ ಹಿನ್ನೆಲೆಯಲ್ಲಿ ಮೂಲ ಔಷದಧ ಜೆನೆರಿಕ್ ಮಾದರಿ ಬಿಡುಗಡೆ ಮಾಡಲಾಗಿದೆ ಎಂದು ಝೈಡಸ್ ಕಂಪನಿ ನೀಡಿದೆ.
ಭಾರತದಲ್ಲಿ ಪ್ರತಿ ವರ್ಷ 14 ಲಕ್ಷ ಜನರಲ್ಲಿ ಕ್ಯಾನ್ಸರ್ ಪತ್ತೆಯಾಗುತ್ತದೆ. ಈ ಪೈಕಿ 2.75 ಲಕ್ಷ ಜನರು ಸ್ತನ, ಗರ್ಭಕೋಶ, ಮೇಜೋಜೀರಕ ಗ್ರಂಥಿಯ ಕ್ಯಾನ್ಸರ್ಗೆ ತುತ್ತಾಗುತ್ತಾರೆ. ಇದನ್ನು ಗುಣಪಡಿಸಲು ಓಲಾಪರಿಬ್ ಅನ್ನು ಬಳಸಲಾಗುತ್ತದೆ. ಒಂದು ವರ್ಷದ ಚಿಕಿತ್ಸೆಗೆ ಇದುವರೆಗೂ 75 ಲಕ್ಷ ರು.ಗಳನ್ನು ಔಷಧಕ್ಕಾಗಿ ವ್ಯಯಿಸಬೇಕಿತ್ತು. ಆದರೆ ಅದೇ ಔಷಧಿ ಇನ್ನು ಕೇವಲ 3 ಲಕ್ಷ ರು.ಗೆ ಸಿಗಲಿದೆ ಎಂದು ಕಂಪನಿ ಮಾಹಿತಿ ನೀಡಿದೆ.
ನಿಮಗೆ ಈರುಳ್ಳಿ ಕತ್ತರಿಸಿ ಫ್ರಿಡ್ಜ್ʼನಲ್ಲಿ ಇಡೋ ಅಭ್ಯಾಸವಿದೆಯಾ?! ಇದೆಷ್ಟು ಡೇಂಜರ್ ಗೊತ್ತಾ ?
ಟಾಟಾ ಇನ್ಸ್ಟಿಟ್ಯೂಟ್ನಿಂದ 100 ರೂಪಾಯಿಯ ಮಾತ್ರೆ: ಒಮ್ಮೆ ಕ್ಯಾನ್ಸರ್ಗೆ ತುತ್ತಾದವರು 2ನೇ ಬಾರಿ ಕ್ಯಾನ್ಸರ್ಗೆ ತುತ್ತಾಗುವುದನ್ನು ತಡೆಯಲು ಟಾಟಾ ಇನ್ಸ್ಟಿಟ್ಯೂಟ್ ಮಾತ್ರೆಯೊಂದನ್ನು ಅಭಿವೃದ್ಧಿಪಡಿಸಿದೆ. ಈ ಮಾತ್ರೆಯ ಬೆಲೆ ಕೇವಲ 100 ರುಪಾಯಿ. ಎಂದು ಸಂಸ್ಥೆ ತಿಳಿಸಿದೆ. ಕ್ಯಾನ್ಸರ್ಗೆ ತುತ್ತಾದವರು ರೇಡಿಯೇಶನ್ ಚಿಕಿತ್ಸೆಗೆ ಒಳಗಾದ ಬಳಿಕ ಕ್ಯಾನ್ಸರ್ ಕೋಶಗಳು ಆರೋಗ್ಯವಂತ ಕೋಶಗಳನ್ನು ಸೇರಿ ಅವುಗಳು ಕ್ಯಾನ್ಸರ್ಗೆ ಕ್ಯಾನ್ಸರ್ಗೆ ತುತ್ತಾಗುವಂತೆ ಮಾಡುತ್ತಿದ್ದವು. ಆದರೆ ಈ ಮಾತ್ರೆ ತೆಗೆದುಕೊಳ್ಳುವುದರಿಂದ ಚಿಕಿತ್ಸೆಯ ಬಳಿಕ ವಿಘಟನೆಗೊಂಡ ಕ್ಯಾನ್ಸರ್ ಕೋಶಗಳು ನಾಶವಾಗಲಿವೆ. ಹೀಗಾಗಿ ರೋಗಿಯು 2ನೇ ಬಾರಿ ಕ್ಯಾನ್ಸರ್ಗೆ ತುತ್ತಾಗುವುದು ತಪ್ಪಲಿದೆ ಎಂದು ಟಾಟಾ ಸಂಸ್ಥೆ ಹೇಳಿದೆ.
ಪ್ರಯೋಗ ನಡೆಸಿದ್ದು ಹೇಗೆ?: ಇದರ ಪ್ರಯೋಗಕ್ಕಾಗಿ ಇಲಿಗಳನ್ನು ಬಳಸಿಕೊಂಡಿದ್ದು, ಮೊದಲಿಗೆ ಕ್ಯಾನ್ಸರ್ ಕೋಶಗಳನ್ನು ಒಳಸೇರಿಸಿ ಕ್ಯಾನ್ಸರ್ಗೆ ತುತ್ತಾಗುವಂತೆ ಮಾಡಲಾಯಿತು. ಬಳಿಕ ರೇಡಿಯೇಶನ್ ಚಿಕಿತ್ಸೆ ನೀಡಿ ಕ್ಯಾನ್ಸರ್ ಗುಣಪಡಿಸಿ, ಕೆಲವು ಇಲಿಗಳಿಗೆ ಈ ಮಾತ್ರೆ ತಿನ್ನಿಸಲಾಗಿದೆ. ಮಾತ್ರೆ ತಿಂದ ಇಲಿಗಳಲ್ಲಿ 2ನೇ ಬಾರಿ ಕ್ಯಾನ್ಸರ್ ಕಾಣಿಸಿಕೊಂಡಿಲ್ಲ.