ಬೆಂಗಳೂರು ;– ಕಳೆದ ಕೆಲವು ದಿನಗಳಿಂದ ಚಿನ್ನದ ದರ ಸತತವಾಗಿ ಇಳಿಕೆ ಕಾಣುತ್ತಿದ್ದು, ಶುಭ ಶುಕ್ರವಾರವಾದ ಇಂದು ಕೂಡ ಚಿನ್ನದ ದರ ಇಳಿಕೆ ಕಂಡಿದೆ.
ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಇಂದು 22 ಕ್ಯಾರೆಟ್ ಚಿನ್ನದ ದರ ಕಡಿಮೆಯಾಗಿದೆ. ಇಂದು ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 5,450 ರೂ. ಇದೆ. ನಿನ್ನೆಯ 43,760 ರೂ. ಗೆ ಹೋಲಿಸಿದರೆ 20 ರೂಪಾಯಿ ಇಳಿಕೆಯಾಗಿದೆ. ಎಲ್ಲಾದರೂ ನೀವು 8 ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 43,600 ರೂಪಾಯಿ ನೀಡಬೇಕು. ನಿನ್ನೆಯ 43,760 ರೂ.ಗೆ ಹೋಲಿಸಿದರೆ ದರ 160 ರೂ.ನಷ್ಟು ಇಳಿಕೆಯಾಗಿದೆ. ಹತ್ತು ಗ್ರಾಂ ಚಿನ್ನದ ದರ ಇಂದು 54,500 ರೂ. ಇದೆ. ನಿನ್ನೆಯ 54,700 ರೂ.ಗೆ ಹೋಲಿಸಿದರೆ ಇಂದು 200 ರೂ. ಇಳಿಕೆ ಕಂಡಿದೆ. ನೂರು ಗ್ರಾಂ ಚಿನ್ನದ ದರ ಇಂದು 5,45,000 ರೂ.ಗೆ ತಲುಪಿದ್ದು, ನಿನ್ನೆಯ 5,47,000 ರೂ.ಗೆ ಹೋಲಿಸಿದರೆ ಇಂದು2,000 ರೂ. ಇಳಿಕೆ ಕಂಡಿದೆ.

ಇಂದು ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 5,945 ರೂ. ಇದೆ. ನಿನ್ನೆಯ 5,967 ರೂ.ಗೆ ಹೋಲಿಸಿದರೆ ಇಂದು 22 ರೂ. ಇಳಿಕೆ ಕಂಡಿದೆ. ಎಲ್ಲಾದರೂ ನೀವು 8 ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 47,560 ರೂ. ನೀಡಬೇಕು. ನಿನ್ನೆಯ 47,736 ರೂ.ಗೆ ಹೋಲಿಸಿದರೆ ಇಂದು 176 ರೂ. ಇಳಿಕೆ ಕಂಡಿದೆ. ಹತ್ತು ಗ್ರಾಂ ಚಿನ್ನದ ದರ ಇಂದು 59,450 ರೂ. ಇದೆ. ನಿನ್ನೆಯ 59,670 ರೂ.ಗೆ ಹೋಲಿಸಿದರೆ ಇಂದು 100 ರೂ. ಇಳಿಕೆ ಕಂಡಿದೆ. ನೂರು ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 5,94,500. ನೀಡಬೇಕು. ನಿನ್ನೆಯ 6,00,000 ರೂ.ಗೆ ಹೋಲಿಸಿದರೆ ಇಂದು 5,96,700 ರೂ. ಕಡಿಮೆಯಾಗಿದೆ
