ಗೋಲ್ಡ್ ಪ್ರಿಯರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಅತಿ ಕಡಿಮೆ ಬೆಲೆಗೆ ನೀವು ಇಲ್ಲಿ ಖರೀದಿಸಬಹುದು.
ಗೃಹಲಕ್ಷ್ಮೀ ಹಣದಿಂದ ಮಾದರಿ ಕೆಲಸ: ಅತ್ತೆ-ಸೊಸೆ ಬಗ್ಗೆ DCM ಡಿಕೆಶಿ ಹೇಳಿದ್ದೇನು?
ಎಸ್, ಭೂತಾನ್ನಲ್ಲಿ ಕಡಿಮೆ ಬೆಲೆಗೆ ಚಿನ್ನವನ್ನು ಮಾರಾಟ ಮಾಡಲು ಹಲವು ಕಾರಣಗಳಿವೆ, ಆದರೆ ಭೂತಾನ್ನಲ್ಲಿ ಚಿನ್ನವು ತೆರಿಗೆ ಮುಕ್ತವಾಗಿರುವುದೇ ದೊಡ್ಡ ಕಾರಣ. ಇದಲ್ಲದೆ, ಭೂತಾನ್ನಲ್ಲಿ ಚಿನ್ನದ ಮೇಲೆ ಕಡಿಮೆ ಆಮದು ಸುಂಕವಿದೆ. ಭೂತಾನ್ ಮತ್ತು ಭಾರತದ ಕರೆನ್ಸಿಯ ಮೌಲ್ಯವು ಬಹುತೇಕ ಒಂದೇ ಆಗಿರುತ್ತದೆ. ಆದಾಗ್ಯೂ, ನೀವು ಭೂತಾನ್ನಿಂದ ಚಿನ್ನವನ್ನು ಖರೀದಿಸಲು ಯೋಚಿಸುತ್ತಿದ್ದರೆ ಅದಕ್ಕೆ ಕೆಲವು ಷರತ್ತುಗಳಿವೆ. ವಾಸ್ತವವಾಗಿ, ಚಿನ್ನವನ್ನು ಖರೀದಿಸಲು, ಪ್ರವಾಸಿಗರು ಭೂತಾನ್ ಸರ್ಕಾರವು ಪ್ರಮಾಣೀಕರಿಸಿದ ಹೋಟೆಲ್ನಲ್ಲಿ ಕನಿಷ್ಠ ಒಂದು ರಾತ್ರಿ ತಂಗಬೇಕು.
ಪ್ರವಾಸಿಗರು ಚಿನ್ನ ಖರೀದಿಸಲು ಅಮೆರಿಕದ ಡಾಲರ್ ತರಬೇಕು. ಪ್ರವಾಸಿಗರು ಸುಸ್ಥಿರ ಅಭಿವೃದ್ಧಿ ಶುಲ್ಕವನ್ನು ಪಾವತಿಸಬೇಕು. ಭಾರತೀಯರಾದರೆ ಒಬ್ಬ ವ್ಯಕ್ತಿಗೆ ದಿನಕ್ಕೆ 1,200 ರೂನಿಂದ 1,800 ರೂ ಪಾವತಿಸಬೇಕು. ಇನ್ನು, ಚಿನ್ನ ಬೇಕೆನ್ನುವವರು ಭೂತಾನ್ನ ಥಿಂಫು ಮತ್ತು ಫ್ಯೂಂಟ್ಶೋಲಿಂಗ್ ಪಟ್ಟಣಗಳಿಗೆ ಹೋಗಬೇಕು. ಭೂತಾನ್ನಲ್ಲಿ 24 ಕ್ಯಾರೆಟ್ನ 10 ಗ್ರಾಮ್ ಚಿನ್ನವನ್ನು 43,000 ರುಪಾಯಿಗೆ ಖರೀದಿಸಬಹುದು.
ಸುಂಕ ರಹಿತ ಚಿನ್ನವನ್ನು ಭೂತಾನ್ನ ಸುಂಕ ರಹಿತ ಅಂಗಡಿಗಳಿಂದ ಖರೀದಿಸಬಹುದು.