ರಾಯಚೂರು: ಮೇಕೆ ದಾಟು ಪಾದಯಾತ್ರೆ ಕಾಂಗ್ರೇಸ್ ಪಕ್ಷದವರು ಆಡುತ್ತಿರುವ ಹೊಸ ನಾಟಕ ಎಂದು ಸಚಿವ ಹಾಲಪ್ಪ ಆಚಾರ್ ಅವರು ರಾಯಚೂರಿನಲ್ಲಿ ಮಾಧ್ಯಮದ ಮುಂದೆ ಹೇಳಿಕೆ ನೀಡಿದ್ದಾರೆ.
ಉತ್ತರ ಕರ್ನಾಟಕದ ಜನರಿಗೆ ಕಾಂಗ್ರೇಸ್ ಪಕ್ಷದವರು ಕಳೆದ ಬಾರಿ ಕೃಷ್ಣ ನಡಿಗೆ ಮಾಡಿ ಹಲವಾರು ಆಶ್ವಾಸನೆ ನೀಡಿದ್ದರು. ಆವರ ಸರ್ಕಾರ ಅಧಿಕಾರದಲ್ಲಿದಾಗ ಈಡೇರಿಸಲು ಆಗಿಲ್ಲ.

ಈಗ ಮತ್ತೆ ಹೆಸರಿನಲ್ಲಿ ಉತ್ತರ ಕರ್ನಾಟಕದ ಜನರನ್ನು ಮೋಸ ಮಾಡಲು ಮೇಕೆ ದಾಟು ಪಾದಯಾದ್ರೆ ಹಿಡಿದಿದ್ದಾರೆ ಎಂದು ವ್ಯಂಗ್ಯ ಮಾಡಿದ್ದಾರೆ.