Gmail ಫುಲ್ ಆಗೋದು ಈಗಂತೂ ಪ್ರತಿಯೊಬ್ಬರಿಗೂ ಇರುವ ಸಮಸ್ಯೆ. Gmail ತುಂಬಿದಾಗ ಒಂದೊಂದಾಗಿ ಅದನ್ನು ಡಿಲೀಟ್ ಮಾಡುತ್ತಾ ಹೋಗುವುದು ತಲೆ ನೋವಿನ ಕೆಲಸ. ಅನಗತ್ಯ ಮೇಲ್ಗಳು ಮತ್ತು ಫೈಲ್ಗಳನ್ನು ಅಳಿಸಲು ಕಿರಿ ಆಗೋದು ಸಹಜ.
Sunita Williams: 9 ತಿಂಗಳ ಬಳಿಕ ಕೊನೆಗೂ ಭೂಮಿಗೆ ಬಂದಿಳಿದ ಸುನೀತಾ ವಿಲಿಯಮ್ಸ್!
ಆದರೆ ಈ ಎಲ್ಲಾ ಸಮಸ್ಯೆಗೆ ಇಲ್ಲಿದೆ ನೋಡಿ ಪರಿಹಾರ. Google ಪ್ರತಿ ಬಳಕೆದಾರರಿಗೆ 15GB ವರೆಗೆ ಸಂಗ್ರಹಣೆಗೆ ಅವಕಾಶವಿರುತ್ತದೆ. ಅಂದರೆ ನೀವು Google ಖಾತೆಯನ್ನು ರಚಿಸಿದರೆ 15GB ಸ್ಟೋರೇಜ್ ಪಡೆಯುತ್ತೀರಿ.
ಈ ದಿನಗಳಲ್ಲಿ ಯಾವುದಾದರೂ ಸಬ್ಸ್ಕ್ರಿಪ್ಷನ್ ತಗೊಂಡ್ರೂ, ಬಿಲ್ ಪೇ ಮಾಡಿದ್ರೂ, ಜಾಬ್ಸ್ಗೆ ಅಪ್ಲೈ ಮಾಡಿದ್ರೂ ಇ-ಮೇಲ್ ಅಡ್ರೆಸ್ ಕೊಡಬೇಕಾಗುತ್ತೆ. ಇದು ಸಾಕಾಗಲ್ಲ ಅಂದ್ರೂ ಕನಿಷ್ಠ ಫೋನ್ ನಂಬರ್ ಕೊಡಬೇಕು. ಫೋನ್ ನಂಬರ್, ಆಧಾರ್ ತರಹದ ಡೀಟೇಲ್ಸ್ ಕೊಟ್ಟರೆ ಅದಕ್ಕೆ ಲಿಂಕ್ ಆಗಿರುವ ಇ-ಮೇಲ್, ಪ್ಯಾನ್, ಫೋನ್ ನಂಬರ್ಗಳು, ಅಕೌಂಟ್ ಡೀಟೇಲ್ಸ್ ಹೀಗೆ ಯಾವುದನ್ನಾದರೂ ಸಂಪಾದಿಸಬಹುದು. ಆ ರೀತಿ ನಮ್ಮ ಅನುಮತಿ ಇಲ್ಲದೇ ಕೆಲವು ಕಂಪನಿಗಳು, ಅಡ್ವರ್ಟೈಸಿಂಗ್ ಏಜೆನ್ಸಿಗಳು ನಮಗೆ ಇ-ಮೇಲ್ಸ್ ಕಳಿಸ್ತಾ ಇರ್ತಾರೆ.
ಇವುಗಳೆಲ್ಲಾ ಜಿಮೇಲ್ ಇನ್ಬಾಕ್ಸ್ ತುಂಬಿಸುತ್ತವೆ. ಆಡ್ ಇಮೇಲ್ಸ್, ನ್ಯೂಸ್ ಲೆಟರ್ಸ್, ರಸೀದಿಗಳು ಹೀಗೆ ತುಂಬಾ ಇಮೇಲ್ಸ್ ಶೇಖರಣೆ ಆಗುತ್ತವೆ. ಪ್ರತಿ ಮೇಲ್ಗೆ ಗೂಗಲ್ 15 ಜಿಬಿ ಫ್ರೀ ಸ್ಟೋರೇಜ್ ಕೊಡುತ್ತೆ. ಆದರೆ ಅದು ಯಾವತ್ತೂ ಸಾಲಲ್ಲ. ಅನಗತ್ಯ ಮೇಲ್ಸ್ ಬರ್ತಾನೇ ಇರುತ್ತವೆ. ಅದಕ್ಕೆ ಇನ್ಬಾಕ್ಸ್ ಕ್ಲೀನ್ ಆಗಿರಬೇಕು. ಆದರೆ ಒಂದೊಂದಾಗಿ ಡಿಲೀಟ್ ಮಾಡಿದ್ರೆ ಗಂಟೆಗಟ್ಟಲೆ ಬೇಕಾಗುತ್ತೆ. ಅದಕ್ಕೆ ಇಮೇಲ್ಸ್ನ್ನು ಒಂದೇ ಸಲ ಡಿಲೀಟ್ ಮಾಡುವ ಆಪ್ಷನ್ ನಿಮಗೆ ತುಂಬಾ ಉಪಯೋಗವಾಗುತ್ತೆ.
ಜಿಮೇಲ್ ಟಿಪ್ಸ್
ಜಿಮೇಲ್ ಸ್ಟೋರೇಜ್ ತುಂಬಿಹೋದ್ರೆ ಮೇಲ್ಸ್ ಡಿಲೀಟ್ ಮಾಡೋಕೆ ಎರಡು ವಿಧಾನಗಳಿವೆ. ಅದರಲ್ಲಿ ಒಂದು.
1. ಲಾಗಿನ್ ಆಗಿ Gmail ಓಪನ್ ಮಾಡಿ.
2. inboxಗೆ ಹೋಗಿ.
ಪ್ರೈಮರಿ/ಸೋಶಿಯಲ್/ಪ್ರಮೋಷನ್ಸ್ ಟ್ಯಾಬ್ಗೆ ಹೋಗಿ.
ಪೇಜ್ ಮೇಲ್ಭಾಗದಲ್ಲಿ “Select All” (✓) ಬಾಕ್ಸ್ ಮೇಲೆ ಕ್ಲಿಕ್ ಮಾಡಿ.
“Select all conversations in this folder” ಅನ್ನೋ ಆಪ್ಷನ್ ಕಾಣಿಸಿದ್ರೆ ಅದನ್ನು ಕ್ಲಿಕ್ ಮಾಡಿ.
3. ಮೇಲ್ಭಾಗದಲ್ಲಿ Trash/Delete ಐಕಾನ್ ಮೇಲೆ ಕ್ಲಿಕ್ ಮಾಡಿ.
4. Trash ಫೋಲ್ಡರ್ಗೆ ಹೋಗಿ Empty Trash Now ಕ್ಲಿಕ್ ಮಾಡಿ.
ಒಂದೇ ಸಲ ಇಮೇಲ್ಸ್ ಡಿಲೀಟ್
ಜಿಮೇಲ್ನಲ್ಲಿ ಅನಗತ್ಯ ಮೇಲ್ಸ್ ಡಿಲೀಟ್ ಮಾಡೋಕೆ ಎರಡನೇ ವಿಧಾನ ಏನಂದ್ರೆ..
ಬ್ರೌಸರ್ನಲ್ಲಿ ಜಿಮೇಲ್ ಓಪನ್ ಮಾಡಿ.
ಇನ್ಬಾಕ್ಸ್ ಮೇಲೆ ಕ್ಲಿಕ್ ಮಾಡಿ.
ಮೇಲೆ ಕಾಣಿಸ್ತಿರೋ ಸರ್ಚ್ ಬಾಕ್ಸ್ನಲ್ಲಿ ‘Unsubscribe’ ಅಂತ ಟೈಪ್ ಮಾಡಿ ಎಂಟರ್ ಕೊಡಿ.
ಎಲ್ಲಾ ಪ್ರಮೋಷನಲ್ ಇಮೇಲ್ಸ್ ಕಾಣಿಸುತ್ತವೆ.
ಈ ಪ್ರಮೋಷನ್ ಇಮೇಲ್ಸ್ನ್ನು ಒಂದೇ ಸಲ ಡಿಲೀಟ್ ಮಾಡೋಕೆ, ಮೇಲೆ ಎಡ ಮೂಲೆಯಲ್ಲಿರುವ ಚಿಕ್ಕ ಚೆಕ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ. ‘Select all’ ಕ್ಲಿಕ್ ಮಾಡಿದ್ರೆ ಎಲ್ಲವೂ ಸೆಲೆಕ್ಟ್ ಆಗುತ್ತೆ.
ಎಲ್ಲಾ ಇ-ಮೇಲ್ಸ್ ಸೆಲೆಕ್ಟ್ ಆದ್ಮೇಲೆ, ಸ್ಕ್ರೀನ್ ಮೇಲೆ ಇರೋ ಟ್ರಾಷ್ ಐಕಾನ್ ಮೇಲೆ ಕ್ಲಿಕ್ ಮಾಡಿ. ಪ್ರಮೋಷನ್, ಸೋಶಿಯಲ್ ಟ್ಯಾಬ್ಗಳಲ್ಲೂ ಇದೇ ರೀತಿ ಫಾಲೋ ಮಾಡಿ. ದೆಬ್ಬೆಗೆ ನಿಮ್ಮ ಇನ್ ಬಾಕ್ಸ್ ಪೂರ್ತಿ ಒಂದೇ ಸಲ ಫ್ರೀ ಆಗಿ ಹೋಗುತ್ತೆ. ಜಾಸ್ತಿ ಸ್ಟೋರೇಜ್ ಸಿಗುತ್ತೆ.