ಬೆಂಗಳೂರು:- ಬೆಂಗಳೂರು ಗಿರಿನಗರ ಬಾಬು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಟಿಯೊಂದಿಗೆ ಅಕ್ರಮ ಸಂಬಂಧ ಬೆಳೆಸಿ ಬೀದಿ ಹೆಣವಾಗಿರುವುದು ತಿಳಿದು ಬಂದಿದೆ.
ತಾವಾಯ್ತು, ತಮ್ಮ ಕುಟುಂಬವಾಯ್ತು ಎಂದು ನೆಮ್ಮದಿಯಿಂದ ಜೀವನ ಮಾಡಿಕೊಂಡಿದ್ದ ಸಿದ್ದರಾಜುವಿನ ಸುಂದರ ಪತ್ನಿಯ ಮೇಲೆ ಕಣ್ಣು ಹಾಕಿದ ಕಾಮುಕ ವೆಂಕಟೇಶ್ ಬಾಬುನನ್ನು ಅಟ್ಟಾಡಿಸಿ ಹೊಡೆದು ಕೊಲೆಗೈದು ಜೈಲು ಸೇರಿದ್ದಾನೆ.
ನೆಮ್ಮದಿಯಾಗಿದ್ದ ಕುಟುಂಬದಲ್ಲಿ ಗಿರಿನಗರದ ವೆಂಕಟೇಶಬಾಬು ಎಂಟ್ರಿ ಕೊಟ್ಟು ಇಡೀ ಸಂಸಾರವನ್ನೇ ಛಿದ್ರ ಮಾಡಿದನಲ್ಲ ಎಂಬ ರೋಷ ಸಿದ್ದರಾಜುಗೆ ಉಕ್ಕುತ್ತಿತ್ತು. ಆದರೂ, ತನ್ನ ಹೆಂಡತಿಯೇ ಸರಿಯಾಗಿಲ್ಲ ಎಂದು ಕೈ ಕೈ ಹಿಸುಕಿಕೊಂಡು ಸುಮ್ಮನಾಗಿದ್ದನು. ಇನ್ನು ತನ್ನ ಗಂಡ ಬಿಟ್ಟು ಹೋಗಿರುವುದೇ ತನಗೆ ಲಾಭವಾಗಿದೆ ಎಂದು ವೆಂಕಟೇಶ್ ಬಾಬು ಜೊತೆಗೆ ಸಿದ್ದರಾಜು ಪತ್ನಿ ಮಾತನಾಡುತ್ತಾ ಸಲುಗೆಯಿಂದ ಇದ್ದಳು. ಆಗ ಅಲ್ಲಿಗೆ ಬಂದ ಸಿದ್ದರಾಜು ತನ್ನ ಪತ್ನಿ ವೆಂಕಟೇಶನ ಜೊತೆಗೆ ಮಾತನಾಡೊದನ್ನ ನೋಡಿ ಕೋಪಗೊಂಡಿದ್ದಾನೆ. ಈ ವೇಳೆ ರಸ್ತೆಯಲ್ಲಿಯೇ ವೆಂಕಟೇಶನೊಂದಿಗೆ ಜಗಳ ಮಾಡಿ ಆರಂಭಿಸಿದ್ದಾನೆ. ನಂತರ, ವೆಂಕಟೇಶನನ್ನು ಅಟ್ಟಾಡಿಸಿ ಹೊಡೆದು ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಕೂಡಲೇ ವೆಂಕಟೇಶ್ ಬಾಬು ಅವರನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ
ಗಿರಿನಗರ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ವೆಂಕಟೇಶ್ ಬಾಬು ಕೊಲೆಯಾದ ವ್ಯಕ್ತಿಯಾಗಿದ್ದಾನೆ. ಸಿದ್ದರಾಜು ಕೊಲೆಮಾಡಿದ ಆರೋಪಿ ಆಗಿದ್ದಾನೆ. ಕೊಲೆ ಘಟನೆಯ ನಂತರ ಸ್ಥಳ ಪರಿಶೀಲನೆ ಮಾಡಿದ ಅಧಿಕಾರಿಗಳು ಇದೀಗ ಆರೋಪಿ ಸಿದ್ದರಾಜುನನ್ನು ಬಂಧಿಸಿದ್ದಾರೆ