ಬೆಂಗಳೂರು: ಇಷ್ಟು ದಿನ ಚಿನ್ನ, ಬೆಳ್ಳಿ, ವಜ್ರ ವೈಡೂರ್ಯ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನ ಕಳ್ಳತನ ಮಾಡೋ ಗ್ಯಾಂಗ್ ಗಳನ್ನ ನೋಡಿದ್ರಿ. ಅದ್ರೆ ಸಿಲಿಕಾನ್ ಸಿಟಿಯಲ್ಲಿ ತುಪ್ಪ ಕದಿಯೋ ಗ್ಯಾಂಗ್ ವೊಂದು ಹುಟ್ಕೊಂಡಿದ್ದು, ಸಿಕ್ಕ ಸಿಕ್ಕ ಕಡೆ ಕೈಚಳಕ ತೋರಿಸಿದ್ದಾರೆ. ಈ ಕುರಿತ ಕಂಪ್ಲೀಟ್ ಸ್ಟೋರಿ ಇಲ್ಲಿದೆ. ಹೌದು…. ಇಷ್ಟು ದಿನ ಕೆಜಿ ಕೆಜಿ ಚಿನ್ನ ಬೆಳ್ಳಿ, ಬೆಲೆಬಾಳುವ ವಸ್ತುಗಳನ್ನ ಕದಿಯೋ ನಟೋರಿಯಸ್ ಗ್ಯಾಂಗ್ ಗಳನ್ನ ನೋಡಿದ್ರಿ. ಅದ್ರೆ ಇತ್ತೀಚಿಗೆ ಸಿಲಿಕಾನ್ ಸಿಟಿಯಲ್ಲಿ ಹೊಸದೊಂದು ಗ್ಯಾಂಗ್ ಹುಟ್ಕೊಂಡಿದೆ. ಅವರು ಹಣ ಆಭರಣ ಏನು ಮುಟ್ಟೊಲ್ಲ.
ಅದ್ರೆ ತುಪ್ಪ ಕಂಡ್ರೆ ಜಪ್ಪಯ್ಯ ಅಂದ್ರು ಬಿಡಲ್ಲ. ಹೀಗೆ ನಗರದಲ್ಲಿ ಕೇವಲ ತುಪ್ಪವನ್ನೆ ಟಾರ್ಗೆಟ್ ಮಾಡಿ ಕಳ್ಳತನ ಮಾಡುವ ಗ್ಯಾಂಗ್ ವೊಂದು ಹುಟ್ಕೊಂಡಿದೆ. ನಾಗರಭಾವಿಯ ಫೇರ್ ಪ್ರೈಸ್ ಎಂಬ ಸೂಪರ್ ಮಾರ್ಕೆಟ್ ನಲ್ಲಿ ಕೈಚಳಕ ತೋರಿಸಿದ ಈ ತುಪ್ಪ ಕದಿಯೋ ಗ್ಯಾಂಗ್ ಸುಮಾರು 10 ಕೆಜಿಗೂ ಅಧಿಕ ತುಪ್ಪ ಕದ್ದು ಪರಾರಿಯಾಗಿದ್ದಾರೆ. ಮೊದಲಿಗೆ ಗ್ರಾಹಕರಂತೆ ಬೈಕ್ ನಲ್ಲಿ ಸೂಪರ್ ಮಾರ್ಕೆಟ್ ಗೆ ಬಂದಿದ್ದ ಇಬ್ಬರು ಆಸಾಮಿಗಳು, ಓರ್ವ ಬೈಕ್ ನಲ್ಲಿ ಹೊರಗಡೆ ನಿಂತ್ರೆ ಇನ್ನೊಬ್ಬ ಶಾಪಿಂಗ್ ಮಾಡ್ತಿದ್ದನಂತೆ. ನಂತರ ಮನೆಯಲ್ಲಿ ಕಾರ್ಯಕ್ರಮವಿದೆ, ಹತ್ತಿಪ್ಪತ್ತು ಕೆಜಿ ತುಪ್ಪ ಬೇಕು ಅಂತಿದ್ರಂತೆ.
ನಂತರ ಒಂದೊಂದು ಕೆಜಿ ತೂಕದ ಪಾಕೆಟ್ ಗಳನ್ನ ಬ್ಯಾಗ್ ಗೆ ಹಾಕಿಸಿಕೊಂಡು ಬಿಲ್ ಮಾಡಿಸುತ್ತಿದ್ರಂತೆ. ಬಿಲ್ ಮಾಡುವಾಗ ದಿಢೀರನೆ ಅಂಗಡಿಯಿಂದ ಕಾಲ್ಕಿತ್ತು ಎಸ್ಕೇಪ್ ಆಗಿದ್ದಾರೆ. ನಾಗರಭಾವಿಯ ಸೂಪರ್ ಮಾರ್ಕೆಟ್ ನಲ್ಲಿ ತುಪ್ಪ ಕದ್ದ ಆಸಾಮಿ, ಬೈಕ್ ನಲ್ಲಿ ಎಸ್ಕೇಪ್ ಆಗಿದ್ದಾನೆ. ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇನ್ನೂ ಈ ಸೂಪರ್ ಮಾರ್ಕೆಟ್ ಒಂದೂವರೆ ತಿಂಗಳ ಹಿಂದೆ ಓಪನ್ ಆಗಿದ್ದು, ಇಷ್ಟರಲ್ಲಿ ಎರಡು ಬಾರಿ ತುಪ್ಪ ಖರೀದಿಗೆ ಬಂದು ಕಳ್ಳತನ ಮಾಡಿದ್ರಂತೆ. ಇದಲ್ಲದೆ ನಗರದ ಹಲವೆಡೆ ಈ ಗ್ಯಾಂಗ್ ಕೈಚಳಕ ತೋರಿಸಿ, ಕೆಜಿಗಟ್ಟಲೆ ತುಪ್ಪ ಕದ್ದಿದ್ರಂತೆ.
ಕೆಲ ದಿನಗಳ ಹಿಂದೆ ಕೊಮ್ಮಘಟ್ಟ ನಂದಿನಿ ಫಾರ್ಲರ್ ನಲ್ಲೂ ಕೂಡ ತುಪ್ಪ ಎಗರಿಸಿ ಎಸ್ಕೇಪ್ ಆಗಿದ್ದಾರೆ. ಸದ್ಯ ಈ ಬಗ್ಗೆ ಅನ್ನಪೂರ್ಣೆಶ್ವರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನ್ನೂ ಈ ತುಪ್ಪ ಕದಿಯೋ ಗ್ಯಾಂಗ್ ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈ ಬಗ್ಗೆ ಪ್ರಕರಣ ಕೂಡ ದಾಖಲಾಗಿದ್ದು, ತುಪ್ಪ ಕಳ್ಳರಿಗೆ ಬಲೆ ಬೀಸಿದ್ದಾರೆ. ಅದೇನೆ ಇರಲಿ ತುಪ್ಪದ ಬೆಲೆ ಜಾಸ್ತಿ ಇದೆ ಅಂತಾ, ಅಂಗಡಿಗಳ ಮೇಲೆ ಈ ಗ್ಯಾಂಗ್ ಕಣ್ಣಾಕಿದ್ದು, ಮಾಲೀಕರ ನಿದ್ದೆ ಕೆಡಿಸಿದೆ.