ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನಗರಸಭೆ ಅಧ್ಯಕ್ಷರಾಗಿ ಕಾಂಗ್ರೆಸ್ ನ ಗೀತಾ ರಾಜ್ ಕುಮಾರ್ ಅವಿರೋಧ ಆಯ್ಕೆಯಾಗಿದ್ದಾರೆ. ಇಂದು ನಡೆದ ಚುನಾವಣೆಯಲ್ಲಿ ಗೀತಾರಾಜ್ ಕುಮಾರ್ ಹೊರತುಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಹಿನ್ನೆಲೆ ಗೀತಾ ರಾಜ್ ಕುಮಾರ್ ಅವಿರೋಧ ಆಯ್ಕೆಯಾದರು.
ನಗರಸಭೆಯಲ್ಲಿ 35 ಜನ ಸದಸ್ಯರಿದ್ದು, 19 ಕಾಂಗ್ರೆಸ್, 3 ಬಿಜೆಪಿ ಸದಸ್ಯರು ಹಾಗೂ 5 ಜನ ಜೆಡಿಎಸ್ ಮತ್ತು ಎಂಎಲ್ ಸಿ ಸದಸ್ಯರು ಸೇರಿ 27 ಜನ ಸದಸ್ಯರ ಸಮ್ಮುಖದಲ್ಲಿ ಗೀತಾ ರಾಜ್ ಕುಮಾರ್ ಆಯ್ಕೆಯಾದರು.