ಹುಬ್ಬಳ್ಳಿ- ಸಿ- ವೈಪ್ಸ್ ಗೋವಾ ಪ್ಯಾರಡೈಸ್ ಹೊಟೇಲ್ ನಲ್ಲಿ ಆಯೋಜನೆ ಮಾಡಿದ್ದ ಫ್ಯಾಶನ್ ಶೋದಲ್ಲಿ ರನ್ನರ್ ಅಪ್ ಸ್ಥಾನವನ್ನು ಗೀತಾ ಚಿಕ್ಕಮಠ ಪಡೆದಿದ್ದು ಇನ್ನಷ್ಟು ಧಾರವಾಡ ಜಿಲ್ಲೆಯ ಕೀರ್ತಿ ಪತಾಕೆ ಹಾರಿಸಿದ್ದಾರೆ. ಮಹಿಳೆಯರ ಸ್ವಾವಲಂಬಿ ಬದುಕಿಗೆ ಸದಾ ಶ್ರಮಿಸುತ್ತಿರುವ ಗೀತಾ ಚಿಕ್ಕಮಠ ಸ್ವತಃ ತಾವೇ ಬ್ಯೂಟಿಪಾರ್ಲ್ ರ ವೊಂದನ್ನು ನಡೆದುಕೊಂಡು ಬರುತ್ತಿದ್ದಾರೆ. ಹುಬ್ಬಳ್ಳಿ, ಗದಗ ಸೇರಿದಂತೆ ರಾಜ್ಯದ ವಿವಿಧ ಕಡೆ ಹಾಗೂ ದೇಶದ ವಿವಿಧ ಕಡೆಗಳಲ್ಲಿಯೂ ಸಹ ತಮ್ಮ ಫ್ಯಾಷನ್ ಶೋ ನೀಡಿ ಹಲವಾರು ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಸಾಮಾಜಿಕ ಕಾರ್ಯಕರ್ತರು ಹಾಗೂ ಹೋರಾಟಗಾರರಾದ ರಮೇಶ್ ಪಾಟೀಲ್ , ಶೃತಿ ದವಂಡೆ ನೇತೃತ್ವದಲ್ಲಿ ಇತ್ತೀಚಿಗೆ ಗೋವಾ ದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಂತರರಾಜ್ಯ ಮಟ್ಟದಲ್ಲಿನ ಫ್ಯಾಷನ್ ಶೋ ದಲ್ಲಿ ಹಲವಾರು ಸುಂದರಯರನ್ನ ಹಿಂದಕ್ಕಿ ರನ್ನರ್ ಅಪ್ ಪ್ರಶಸ್ತಿ ಮುಡಿಗೆರಿಸಿಕೊಂಡು ಬಂದಿದ್ದಾರೆ. ಈ ಸ್ಪರ್ಧೆಯಲ್ಲಿ ಫಿಟ್ ನೆಸ್ ರೌಂಡ್, ಟ್ಯಾಲೆಂಟ್ ರೌಂಡ್, ಇಕೋ ಡ್ರೆಸ್ ರೌಂಡ್ ಸೇರಿ ಅನೇಕ ಸುತ್ತುಗಳಿವೆ. ಜೊತೆಗೆ ನಮ್ಮ ರಾಜ್ಯದ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಡ್ರೆಸ್ ಧರಿಸಿ ಕೂಡ ಸ್ಪರ್ಧೆಯಲ್ಲಿ ಭಾಗವಹಿಸಬೇಕು. ಇದೆಲ್ಲಕ್ಕಿಂತ ಮುಖ್ಯವಾಗಿದ್ದು ಪ್ರತಿಯೊಬ್ಬ ಸ್ಪರ್ಧಿಯೂ ಪರಿಸರ,

ಸಾಮಾಜಿಕ ಕಾಳಜಿ, ಅದರ ಹೊಣೆಗಾರಿಕೆ, ನಿರ್ವಹಣೆಗೆ ಕೂಡಾ ಸಂಬಂಧಿಸಿದ ಒಂದೊಂದು ವಿಷಯ ವಸ್ತುವನ್ನು ಹೊಂದಿರಬೇಕು. ಈ ವಿಚಾರವಾಗಿ ಖುಷಿ ಸುಸ್ಥಿರ ಪರಿಸರ ಎನ್ನುವ ಪರಿಕಲ್ಪನೆಯನ್ನು ಇಟ್ಟುಕೊಂಡಿದ್ದಾರೆ. ಮಧ್ಯಮ ವರ್ಗದ ಮನೆತನದ ಹೆಣ್ಣುಮಗಳಾದ ಕಷ್ಟ ಪಟ್ಟು, ರಾಜ್ಯ ಮಟ್ಟದಲ್ಲಿ ಹೆಸರು ಪಡೆದು, ಇದೀಗ ಅಂತರಾಜ್ಯಮಟ್ಟದ ಸ್ಪರ್ಧೆಯಲ್ಲಿ ಮೆಚ್ಚುಗೆ ಪಾತ್ರವಾಗಿದ್ದು ಸಾಧನೆಯೇ ಸರಿ ಎನ್ನುತ್ತಾರೆ ಹೋರಾಟಗಾರ ಶೇಖರ ಕವಳಿ.
ಫ್ಯಾಶನ್ ಶೋ ಕೇವಲ ಒಂದು ವರ್ಗಕ್ಕೆ ಮೀಸಲು ಅಷ್ಟೇ ಅಲ್ಲಾ ಅದೊಂದು ಉದ್ಯಮಿಯಾಗಿದೆ ಬೆಳದಿದೆ. ಈಗ ನಾವು ಅದರ ಜೊತೆಗೆ ನಮ್ಮ ನಾಡಿನ ಸಾಂಸ್ಕೃತಿಕ ಅನಾವರಣ ಮಾಡಬೇಕು. ದೇಶಕ್ಕೆ ಒಂದು ಒಳ್ಳೆಯ ಸಂದೇಶ ರವಾನೆ ಮಾಡಬೇಕಾಗಿದೆ ಎನ್ನುವ ಗೀತಾ ಚಿಕ್ಕಮಠ ಹುಬ್ಬಳ್ಳಿಯಲ್ಲಿ ಇಂದು ಫ್ಯಾಷನ್ ಶೋ ದೊಡ್ಡ ಉದ್ಯಮಿತಾಗಿ ಬೆಳೆಯ ಬೇಕಾಗಿದೆ. ಫ್ಯಾಷನ್ ಶೋ ಮೂಲಕ ನಾಡಿನ ಸಾಂಸ್ಕೃತಿಕ ಅನಾವರಣಕ್ಕೆ ಪ್ರಯತ್ನ ನಾನು ಸಹ ಮಾಡುತ್ತೇನೆ ಎನ್ನುತ್ತಾರೆ.
ವರದಿ: ಕಲ್ಮೇಶ್