ಸ್ಪೇನ್: ಸಲಿಂಗಿ ದಂಪತಿ ಮಗುವಿಗೆ ಜನ್ಮ ನೀಡಿದ ಘಟನೆ ಸ್ಪೇನ್ನಲ್ಲಿ ನಡೆದಿದೆ. 30ರ ಹರೆಯದ ಎಸ್ಟಫಾನಿಯಾ ಹಾಗೂ 27ರ ಹರೆಯದ ಅಜಹರಾ ಇದೀಗ ಗಂಡು ಮಗುವಿನ ಪೋಷಕರಾಗಿದ್ದಾರೆ. ಇದೀಗ ಸಲಿಂಗಿ ದಂಪತಿಗಳ ಸಂಭ್ರಮ ಮನೆ ಮಾಡಿದೆ. ಅಕ್ಟೋಬರ್ 30 ರಂದು ಅಜಹರಾ ಗಂಡು ಮಗುವಿಗೆ ಜನ್ಮ ನೀಡಿದ್ದರು. ಮಗುವಿಗೆ ಇದೀಗ ಡೆರೆಕ್ ಎಲೋಯ್ ಎಂದು ಹೆಸರಿಡ ಲಾಗಿದೆ. ಸಲಿಂಗಿಗಳಾದ 30 ವರ್ಷದ ಎಸ್ಟೆಫಾನಿಯಾ ಹಾಗೂ 27 ವರ್ಷದ ಅಜಹರಾ ಮಗುವಿಗೆ ಜನ್ಮ ನೀಡಿದ ವಿಶ್ವದ 2ನೇ ಪ್ರಕರಣ ಇದಾಗಿದೆ. ಯೂರೋಪ್ನ ಮೊದಲ ಘಟನೆ ಇದಾಗಿದೆ.
ಅಜಹರಾ ಒಂಭತ್ತು ತಿಂಗಳ ಕಾಲ ಮಗುವನ್ನು ಗರ್ಭಾಶಯದಲ್ಲಿ ಹೊತ್ತು ಜನ್ಮ ನೀಡಿದ್ದಾರೆ. ಇನೋಸೆಲ್ ಎಂಬ ಸಂಸ್ಥೆಯ ನೆರವಿನಿಂದ ಸಲಿಂಗಿ ದಂಪತಿ ಗರ್ಭ ಧರಿಸಿದ್ದಾರೆ. ಆರಂಭದಲ್ಲಿ ಗರ್ಭ ಫಲವತ್ತತೆಯ ಚಿಕಿತ್ಸೆಯನ್ನು ಎಸ್ಟೆಫಾನಿಯಾಗೆ ನೀಡಲಾಯಿತು. ಫಲವತ್ತ ಮೊಟ್ಟೆ ಹಾಗೂ ವೀರ್ಯದ ಕ್ಯಾಪ್ಸುಲ್ನನ್ನು ಎಸ್ಟೆಫಾನಿಯಾ ಯೋನಿಯೊಳಗೆ ಸೇರಿಸಲಾಯಿತು.
ನಮ್ಮ ಮೆಟ್ರೋದಲ್ಲಿ ಯುವತಿಗೆ ಲೈಂಗಿಕ ಕಿರುಕುಳ – ನೆರವಿಗೆ ಬಾರದ ಸಹ ಪ್ರಯಾಣಿಕರು
ಐದು ದಿನಗಳ ಬಳಿಕ ನೈಸರ್ಗಿಕ ಫಲೀಕರಣ ಮಾಡಲಾಗಿತ್ತು. ಭ್ರೂಣ ರೂಪುಗೊಂಡ ಬಳಿಕ ಪರಿಶೀಲನೆ ನಡೆಸಲಾಗಿದೆ. ಬಳಿಕ ಭ್ರೂಣಗಳನ್ನು ಅಜಹರಾ ಗರ್ಭಾಶಯಕ್ಕೆ ವರ್ಗಾಯಿಸಲಾಯಿತು. ಅಜಹರಾ ಗರ್ಭಾಶಯದಲ್ಲಿ ಮಗು ಬೆಳೆದಿತ್ತು. ಒಂಭತ್ತು ತಿಂಗಳ ಕಾಲ ಗರ್ಭಾಶಯದಲ್ಲಿ ಮಗುವಿನ ಆರೈಕೆ ಮಾಡಲಾಗಿತ್ತು. ಈ ಚಿಕಿತ್ಸೆಗೆ ಸಲಿಂಗಿ ದಂಪತಿ 4.5 ಲಕ್ಷ ರೂಪಾಯಿ ವೆಚ್ಚ ಮಾಡಿದ್ದರು. 2018ರಲ್ಲಿ ಟೆಕ್ಸಾಸ್ನಲ್ಲಿ ಇಬ್ಬರು ಮಹಿಳೆಯರು ಮಗುವಿಗೆ ಜನ್ಮ ನೀಡಿದ್ದರು. ಇದು ವಿಶ್ವದ ಮೊದಲನೇ ಪ್ರಕರಣವಾಗಿತ್ತು.