ಗದಗ;- ನಾಳೆ ಗಣೇಶ ಚತುರ್ಥಿ ಆಚರಣೆ ಹಿನ್ನೆಲೆ ಇಂದು ಪೊಲೀಸ್ ಇಲಾಖೆಯಿಂದ ರೂಟ್ ಮಾರ್ಚ ನಡೆಸಲಾಗಿದೆ. ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ ಎಸ್ ನೇಮಗೌಡ ನೇತೃತ್ವದಲ್ಲಿ ರೂಟ್ ಮಾರ್ಚ ನಡೆದಿದೆ. ಗದಗ ನಗರದ ವಿವಿಧ ವೃತ್ತಗಳ ಮೂಲಕ ಖಾಕಿ ಪಡೆ ರೂಟ್ ಮಾರ್ಚ ಮಾಡಿದೆ.
ಗದಗ ನಗರದ ಶಹರ ಪೊಲೀಸ್ ಠಾಣೆಯಿಂದ ಆರಂಭವಾಗಿ ಟಾಂಗಾ ಕೂಟ, ಡಿ ಸಿ ಮಿಲ್, ಗಂಗಾಪೂರಪೇಟೆ, ಜುಮ್ಮಾ ಮಸೀದಿ, ಸೇರಿ ಪ್ರಮುಖ ಬೀದಿಗಳಲ್ಲಿ ಸಂಚಾರ ನಡೆಸಿದೆ. ಗಣೇಶ ಪ್ರತಿಷ್ಠಾಪನೆಯಿಂದ ಹಿಡಿದು ವಿಸರ್ಜನೆ ವರೆಗೂ ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ.

ಗದಗ ಶಹರ, ಗದಗ ಗ್ರಾಮೀಣ, ಡಿಎಆರ್, ಹೋಮ್ ಗಾರ್ಡ ಸೇರಿದಂತೆ ಎಲ್ಲ ಠಾಣೆ ಪೊಲೀಸರಿಂದ ರೂಟ್ ಮಾರ್ಚ ನಡೆದಿದ್ದು, ಡಿಎಸ್ ಪಿ ಮಡಿವಾಳಪ್ಪ ಸಂಕದ, ಡಿಎ ಆರ್ ಡಿಎಸ್ಪಿ ವಿದ್ಯಾನಂದ ನಾಯಕ್ ಸೇರಿದಂತೆ ಸಿಪಿಐಗಳು, ಪಿಎಸ್ ಐ ಗಳು ಪಥಸಂಚಲನದಲ್ಲಿ ಭಾಗಿಯಾಗಿದರು.
