ಹುಬ್ಬಳ್ಳಿ;- ವಾಣಿಜ್ಯ ನಗರಿ ಹುಬ್ಬಳ್ಳಿ ಮಹಾನಗರದಲ್ಲಿ ಕಳೆಗಟ್ಟದ ಹಬ್ಬದ ಆಚರಣೆ, ಮಾರುಕಟ್ಟೆಗೆ ಬಾರದ ಜನ, ಎಲ್ಲಿ ನೋಡಿದರೂ ಬೆಲೆ ಏರಿಕೆ ಬರೆ… ಗಣೇಶೋತ್ಸವ ಎಂದರೆ ಎಲ್ಲರಿಗೂ ಎಲ್ಲಿಲ್ಲದ ಸಂಭ್ರಮ.ಆದರೆ ಕಳೆದವರ್ಷದಿಂದ ಎಲ್ಲ ಹಬ್ಬಗಳಿಗೂ ಗರ ಬಡೆದಿದ್ದು, ಅದರಲ್ಲಿ ಗಣೇಶೋತ್ಸವಕ್ಕೂ ಬರದ ಎಫೆಕ್ಟ್ ತಟ್ಟಿದೆ ಎಂದರೆ ತಪ್ಪಾಗಲಾರದು. ಈ ಕುರಿತು ಒಂದು ವರದಿ..
ಒಂದು ಬರ ಇನ್ನೂಂದು ಕಡೆ ಗಣೇಶ ಚತುರ್ಥಿಗೆ ದುಬಾರಿಯಾದ ಅಗತ್ಯ ವಸ್ತುಗಳ ಬೆಲೆ. ಪ್ರತಿವರ್ಷ ಗಣೇಶೋತ್ಸವ ಆಚರಣೆಯ ಮುನ್ನಾ ದಿನ ಎಲ್ಲ ಮಾರುಕಟ್ಟೆಗಳಲ್ಲಿ ಜನ ಕಾಲಿಡಲು ಜಾಗವಿಲ್ಲದಷ್ಟು ಭರ್ತಿ ಆಗಿರುತ್ತಿತ್ತು. ಆದರೆ ಈ ವರ್ಷ ಅಂತಹ ಯಾವ ಲಕ್ಷಣಗಳು ಕಂಡು ಬರುತ್ತಿಲ್ಲ. ಇದು ವ್ಯಾಪಾರಿಗಳನ್ನು ನಿದ್ದೆಗೆಡುವಂತೆ ಮಾಡಿದೆ. ಲಕ್ಷಾಂತರ ರೂ.ಗಳ ಬಂಡವಾಳ ಹಾಕಿರುವ ವ್ಯಾಪಾರಿಗಳು ಚಿಂತಾಕ್ರಾಂತರಾಗಿದ್ದಾರೆ. ಗಣೇಶ ಹಬ್ಬದ ಮುನ್ನಾ ದಿನವಾದ ಸೋಮವಾರ ನಗರದ ದುರ್ಗದ ಬಯಲು, ಎಂ.ಜಿ. ಮಾರುಕಟ್ಟೆ, ಜನತಾ ಬಜಾರ, ಹಳೇಹುಬ್ಬಳ್ಳಿ ದುರ್ಗದ ಬಯಲು, ಧಾರವಾಡದ ಸೂಪರ್ ಮಾರುಕಟ್ಟೆ, ಸುಭಾಸ ರಸ್ತೆ ಸೇರಿದಂತೆ ನಗರದೆಲ್ಲೆಡೆ ಮಾರುಕಟ್ಟೆಗಳಲ್ಲಿ ಅಷ್ಟಾಗಿ ಜನ ಕಾಣ ಸಿಗಲಿಲ್ಲ.ಇದು ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳ ಪರಿಣಾಮ ಏನೋ ಗೊತ್ತಾಗಲಿಲ್ಲ ರಾಜ್ಯ ಸರ್ಕಾರ ಬೆಲೆ ಏರಿಕೆಗೆ ಕಡಿವಾಣ ಹಾಕಲೇಬೇಕು
ಎನ್ನುತ್ತಾರೆ ಖರೀದಿಗೆ ಬಂದ ಮಹಿಳೆ ಇಂದಿರಾ ಹಳೆಮನಿ.

ಒಂದೆಡೆ ಬರದ ಬರೆ, ಮತ್ತೂಂದೆಡೆ ಬೆಲೆ ಏರಿಕೆ ಬರೆ ಬಿದ್ದಿದ್ದು, ಹೀಗಾಗಿ ಜನರು ಏನು ಮಾಡುವುದೆಂದು ತಿಳಿಯದಾಗಿ ಹಬ್ಬ ಆಚರಿಸುವಂತಾಗಿದೆ. 5 ತರಹದ ಹಣ್ಣುಗಳು (ಎರಡಕ್ಕೆ) 120-300 ರೂ., ಬಾಳೆ ಕಂಬ 80 ರೂ. (ಜೋಡಿ), ಬಾಳೆ ಹಣ್ಣು 50 ರಿಂದ 60 ಡಜನ್, ಒಂದು ಮಾರ ಸೇವಂತಿಗೆ ಹೂ 50ರೂ., ಮಲ್ಲಿಗೆ 50 ರೂ., ಚಂಡ ಹೂ 50 ರೂ. ಇದ್ದು, ಜನ ಖರೀದಿಸಲು ಚಿಂತೆ ಮಾಡುವಂತಾಗಿದೆ. ಎಷ್ಟೇ ಕಷ್ಟ ಆದರೂ ಹಬ್ಬ ಮಾಡಬೇಕು.
ಗಣೇಶ ಹಬ್ಬದ ಸಲುವಾಗಿ ಲಕ್ಷಾಂತರ ರೂ. ಬಂಡವಾಳ ಹಾಕಿ ಹಣ್ಣು ಖರೀದಿಸಿದ್ದಾರೆ ನಾವು ಸಹ ವರ್ಷದಲ್ಲಿ ಬರುವ ಒಂದು ಹಿಂದುಗಳ ದೊಡ್ಡ ಹಬ್ಬ ಸಾಕಷ್ಟು ಸಾಲ ಮಾಡಿ ಪೂಜಾ ಸಾಮಗ್ರಿಗಳನ್ನು ತಂದು ಮಾರಾಟ ಮಾಡುತ್ತಿದ್ದೇವೆ ಏನು ಖರೀದಿ ಆಗತಾ.ಆದರೆ ವ್ಯಾಪಾರ ಮಾಡಲು ಬೆಳಿಗ್ಗೆಯಿಂದ ಮಾರುಕಟ್ಟೆಯಲ್ಲಿ ಜನರೇ ಇಲ್ಲ. ಕೇಳುವವರು ಇಲ್ಲದಂತಾಗಿದೆ. ಕಳೆದ ವರ್ಷ ಬೆಳಿಗ್ಗೆಯಿಂದ ಸಂಜೆವರೆಗೆ ಕುಳಿತು ಜನ ಬರತಾ ಇಲ್ಲವ್ಯಾಪಾರ ಸಹ ಆಗಿಲ್ಲ. ಹೀಗಾದರೆ ಹೇಗೆಂಬುದು ತಿಳಿಯದಾಗಿದೆ ಎಂದು ಪೂಜಾ ಸಾಮಾಗ್ರಿಗಳ ವ್ಯಾಪಾರಿ ಅಂಬಿಕಾ ರತನ್ ಅಳಲು.
ಜನರು ಬರದ ಹಿನ್ನೆಲೆಯಲ್ಲಿ ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದು, ಯಾಕಾದರೂ ಹಬ್ಬಗಳು ಬರುತ್ತವೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಒಂದು ಮಾರು ಹೂ 110 ರಿಂದ 120 ಆದರೆ ಹೇಗೆ ಜನ ಸಾಕಷ್ಟು ತೊಂದರೆಯಲ್ಲಿ ಇದ್ದಾರೆ ಸರ್ಕಾರ ಈ ಕಡೆ ಗಮನ ಹರಿಸಲಿ ಎನ್ನುತ್ತಾರೆ ಗ್ರಾಹಕ ವಿನೋದ ಹಿರೇಮಠ.
ಒಟ್ಟಾರೆ ವಿಘ್ನ ನಿವಾರಕನ ಪೂಜೆ ಮಾಡಿದ ನಂತರ ಆದರೂ ಸ್ವಲ್ಪ ಅಗತ್ಯವಾದ ವಸ್ತುಗಳ ಬೆಲೆ ಕಡಿಮೆ ಆಗಲಿ ಎಂಬುದೇ ನಮ್ಮ ಆಶಯ ಕೂಡಾ.
