ಹಾವೇರಿ: ವಿಕೇಂಡ್ ಕರ್ಪ್ಯೂ ಇರೋದನ್ನೆ ಬಂಡವಾಳ ಮಾಡಿಕೊಂಡ ದುಷ್ಕರ್ಮಿಗಳು ಲೋನ್ ಕೊಡಲಿಲ್ಲಾ ಎಂಬ ಸಿಟ್ಟಿಗೆ ಬ್ಯಾಂಕ್ ಗೆ ಪೆಟ್ರೋಲ್ ಸುರಿದು ಗೆ ಬೆಂಕಿ ಹಚ್ಚಿರುವಂತಹ ಘಟನೆ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಹೆಡಿಗೊಂಡ ಗ್ರಾಮದಲ್ಲಿ ನಡೆದಿದೆ.
33 ವರ್ಷದ ವಾಸಿಂ ಮುಲ್ಲಾ ಎನ್ನುವ ವ್ಯಕ್ತಿ ಬ್ಯಾಂಕಿಗೆ ಕಿಟಕಿ ಗ್ಲಾಸ್ ಒಡೆದು ಒಳಗೆ ಪೆಟ್ರೋಲ್ ಎಸೆದು ಬೆಂಕಿ ಹಚ್ಚಿದ್ದಾನೆ. ಬೆಂಕಿಯ ಕೆನ್ನಾಲಿಗೆಗೆ ಐದು ಕಂಪ್ಯೂಟರ್, ಪಾಸಬುಕ್ ಮತ್ತು ಕ್ಯಾಸ್ ಮಷಿನ್,ಕ್ಯಾಸ್ ಕೌಂಟರ್,ಪರ್ನಿಚರ್,ಬ್ಯಾಂಕ್ ನ ವೈಯರಿಂಗ್ ಹಾಗೂ ಇತರೆ ವಸ್ತುಗಳು ಸುಟ್ಟ ಭಸ್ಮವಾಗಿವೆ. ಈ ಘಟನೆಯಿಂದಾಗಿ ಒಟ್ಟು 13-15 ಲಕ್ಷ ಮೌಲ್ಯದ ಬ್ಯಾಂಕ್ ನ ಬೆಲೆಬಾಳುವ ವಸ್ತುಗಳು ಹಾಳಾಗಿವೆ.

ಇನ್ನು ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬಂಧಿ ಹಾಗೂ ಪೋಲೀಸರು ಬೆಂಕಿಯನ್ನು ನಂದಿಸಿದ್ದು. ಕಾಗಿನೆಲೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.