ಬೆಂಗಳೂರು: ಸರ್ಕಾರದಿಂದ ಅರ್ಚಕರ ಕುಟುಂಬಗಳಿಗೆ ಸಿಹಿಸುದ್ದಿಯನ್ನು ನೀಡಿದೆ. ಮುಜರಾಯಿ ಇಲಾಖೆಯ ‘ಸಿ’ ಗ್ರೇಡ್ ದೇವಾಲಯಗಳಲ್ಲಿ ಪೂಜೆ ಸಲ್ಲಿಸುವ ಅರ್ಚಕರು ಅನಾರೋಗ್ಯಪೀಡಿತರಾಗಿ ಸೇವೆ ಸಲ್ಲಿಸಲಾಗದಿದ್ದರೆ ಅವರ ಮಕ್ಕಳನ್ನೇ ಈ ಹುದ್ದೆಗೆ ನೇಮಕಾತಿ ಮಾಡಲು ಸರಕಾರ ಆದೇಶ ಹೊರಡಿಸಿದೆ.
Bengaluru: ನಿವಾಸಿಗಳೇ, ಬೆಂಗಳೂರಿನಲ್ಲಿ ಆಸ್ತಿ ಹೊಂದಿದ್ದೀರಾ!? – ಇಲ್ಲಿದೆ ಗುಡ್ ನ್ಯೂಸ್
ರಾಜ್ಯದಲ್ಲಿ 34 ಸಾವಿರಕ್ಕೂ ಅಧಿಕ ‘ಸಿ’ ಗ್ರೇಡ್ ದೇವಾಲಯಗಳಿವೆ. ಇಲ್ಲಿಈವರೆಗೆ ಪೂಜಾ ಕೈಂಕರ್ಯದಲ್ಲಿ ತೊಡಗಿದ್ದ ಅರ್ಚಕರು ನಿಧನರಾದರೆ ಮಾತ್ರ ಅಂಥವರ ಮಕ್ಕಳನ್ನು ಅನುಕಂಪದ ಆಧಾರದ ಮೇಲೆ ಅರ್ಚಕರ ಹುದ್ದೆಗೆ ನೇಮಕ ಮಾಡಲಾಗುತ್ತಿತ್ತು.
ಆದರೆ, ಇನ್ನು ಮುಂದೆ ನಿಧನರಾಗದಿದ್ದರೂ, ಅನಾರೋಗ್ಯಕ್ಕೆ ತುತ್ತಾದರೆ, ಇಲ್ಲವೇ ವಯೋಸಹಜ ಸಮಸ್ಯೆಗಳಿಂದ ಅರ್ಚಕ ವೃತ್ತಿ ಮಾಡಲಾಗದಿದ್ದರೆ ಅಂತಹವರ ಮಕ್ಕಳನ್ನು ದೇವಾಲಯಗಳಲ್ಲಿಅರ್ಚಕರ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಸರಕಾರ ಆದೇಶ ಹೊರಡಿಸಿದೆ.