ಬೆಂಗಳೂರು: ರೈತರಿಗೆ ತಮ್ಮ ಜಮೀನಿಗೆ ಹೋಗಲು ದಾರಿಯಿಲ್ಲದೆ ಸಾಕಷ್ಟು ಕಷ್ಟ ಪಡುತ್ತಿರುತ್ತಾರೆ. ಜಮೀನು ಹತ್ತಿರವೇ ಇರುತ್ತದೆ. ಆದರೆ ಎತ್ತಿನ ಬಂಡಿ ಹೋಗುವ ದಾರಿಯಿಲ್ಲದೆ ಬಹಳಷ್ಟು ತೊಂದರೆ ಅನುಭವಿಸುತ್ತಿರುತ್ತಾರೆ. ರೈತರ ಜಮೀನಿಗೆ ಕಾಲುದಾರಿ ಅಥವಾ ಎತ್ತಿನಬಂಡಿ ಹೋಗುವ ದಾರಿಯಿದ್ದರೂ ಸಹ ರೈತರಿಗೆ ಗೊತ್ತಿರುವುದಿಲ್ಲ. ಇದೆಲ್ಲಾ ಯಾಕೆ ಈಗ ಹೇಳ್ತಾ ಇದ್ದೀವಿ ಅಂತೀರಾ.? ಈ ಸ್ಟೋರಿ ನೋಡಿ ನಿಮಗೆ ಗೊತ್ತಾಗುತ್ತದೆ. ರೈತರಿಗೆ ಅನುಕೂಲವಾಗುವಂತಹ ಸುತ್ತೋಲೆ ಒಂದನ್ನು ರಾಜ್ಯ ಸರ್ಕಾರ ಹೊರಡಿಸಿದ್ದು ಇನ್ನು ಮುಂದೆ ಯಾವುದೇ ಜಮೀನಿಗೆ ಹೋಗಲು ದಾರಿ ಇಲ್ಲದೆ ಇರುವ ಸಂದರ್ಭದಲ್ಲಿ ದಾರಿ ಮಾಡಿ ಕೊಡಲು ಸರ್ಕಾರವು ಕಟ್ಟು ನಿಟ್ಟಿನ ಆದೇಶವನ್ನು ಹೊರಡಿಸಿದೆ.
Eye Twitching: ಎಡಗಣ್ಣು ಪಟಪಟ ಅಂತ ಹೊಡೆದುಕೊಳ್ತಿದ್ರೆ ಹೀಗೆಲ್ಲಾ ಆಗ್ಬೋದಂತೆ!
ಹೌದು ಬಹುತೇಕ ರೈತರಿಗೆ ತಮ್ಮ ಜಮೀನಿಗೆ ರಸ್ತೆಗಳು ಇಲ್ಲವೆಂದೇ ಭಾವಿಸಿ ಹಲವಾರು ರೀತಿಯಲ್ಲಿ ತೊಂದರೆ ಪಡುತ್ತಿರುತ್ತಾರೆ. ಅಂತಹ ರೈತರು ಸರ್ಕಾರದ ಮ್ಯಾಪ್ ಪ್ರಕಾರ ತಮ್ಮ ಜಮೀನಿಗೆ ರಸ್ತೆಗಳಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಬಹುದು. ರೈತರು ತಮ್ಮ ಜಮೀನಿಗೆ ಹೋಗಲು ಕಾಲುದಾರಿಯಾಗಲಿ, ಬಂಡಿದಾರಿಯಾಗಲಿ ಇದೆಯೋ ಇಲ್ಲವೋ ತಮ್ಮ ಜಮೀನಿನ ಸುತ್ತಮುತ್ತಲಿರುವ ಹಳ್ಳಕೊಳ್ಳಗಳು, ನದಿಗಳು, ಗುಡ್ಡಬೆಟ್ಟಗಳು ಎಲ್ಲೆಲ್ಲಿ ಬರುತ್ತವೆ ಎಂಬುದನ್ನು ಚೆಕ್ ಮಾಡಬಹುದು. ಮೊಬೈಲ್ ನಲ್ಲೇ ಚೆಕ್ ಮಾಡಲು ಈ https://landrecords.karnataka.gov.in/service3/ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.
ಆಗ ಕಂದಾಯ ಇಲಾಖೆಯ ರೆವನ್ಯೂ ಮ್ಯಾಪ್ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ರೈತರು ತಮ್ಮ ಜಿಲ್ಲೆಯನ್ನು ಆಯ್ಕೆಮಾಡಿಕೊಳ್ಳಬೇಕು. ಇದಾದಮೇಲೆ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ಹಾಗೂ ಹೋಬಳಿಯನ್ನು ಆಯ್ಕೆ ಮಾಡಿಕೊಳ್ಳಬೇಕು. Map Types ನಲ್ಲಿ Cadastral Maps ಆಯ್ಕೆ ಮಾಡಿಕೊಳ್ಳಬೇಕು. ಆಗ ರೈತರಿಗೆ ತಾವು ಆಯ್ಕೆ ಮಾಡಿಕೊಂಡ ಹೋಬಳಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ಪಟ್ಟಿ ಕಾಣುತ್ತದೆ. ಅಂದರೆ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ ಕಾಣಿಸುತ್ತದೆ. ಗ್ರಾಮದ ಮುಂದೆ ಪಿಡಿಎಫ್ ಫೈಲ್ ಐಕಾನ್ ಕಾಣುತ್ತದೆ.ರೈತರು ಯಾವ ಗ್ರಾಮಕ್ಕೆ ಸಂಬಂಧಿಸಿದ್ದಾರೋ ಆ ಗ್ರಾಮದ ಮುಂದುಗಡೆ ಕಾಣುವ ಪಿಡಿಪಿ ಫೈಲ್ ಐಕಾನ್ ಬಾಕ್ಸ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ನಿಮ್ಮೂರಿನ ಮ್ಯಾಪ್ ಕಾಣಿಸುತ್ತದೆ.
ಗ್ರಾಮ ನಕ್ಷೆಯಲ್ಲಿ ಏನೇನು ಮಾಹಿತಿ ಕಾಣಿಸುತ್ತದೆ ?
ರೈತರಿಗೆ ಕಂದಾಯ ಇಲಾಖೆಯ ಮ್ಯಾಪ್ ನಲ್ಲಿ ತಾವು ಆಯ್ಕೆ ಮಾಡಿಕೊಂಡ ಗ್ರಾಮ ಹಾಗೂ ಸುತ್ತುಮತ್ತಲು ಯಾವ ಯಾವ ಗ್ರಾಮಗಳಿಗೆ ಹಾಗೂ ಗ್ರಾಮಕ್ಕೆ ಹೋಗುವ ರಸ್ತೆಗಳು ಅಂದರೆ ಹೇಗೆ ರಸ್ತೆ ಹೇಗೆ ಹಾದುಹೋಗುತ್ತದೆ ಎಂಬುದುಕಾಣುತ್ತದೆ. ಇದೇ ರೀತಿಯಾಗಿ ಆ ಗ್ರಾಮದ ಸುತ್ತಮುತ್ತಲಿರುವ ಜಮೀನಿನ ಸರ್ವೆ ನಂಬರ್ ಗಳ ಬಾರ್ಡರ್ ಕಾಣಿಸುತ್ತದೆ.
ಸರ್ವೆ ನಂಬರಗಳನ್ನು ಕನ್ನಡ ಅಂಕಿಯಲ್ಲಿ ಬರೆಯಲಾಗಿರುತ್ತದೆ. ಅದೇ ರೀತಿ ಕಾಲುದಾರಿ, ಬಂಡಿದಾರಿ, ಡಾಂಬಾರು ರಸ್ತೆ, ಹಳ್ಳ ಕಾಲುವುಗೆ, ಬೆಟ್ಟಗುಡ್ಡಗಳನ್ನು ಗುರುತಿಸಲು ಮ್ಯಾಪ್ ಎಡಗಡೆ ತೋರಿಸಲಾಗಿರುತ್ತದೆ. ಆ ಗುರುತುಗಳ ಆಧಾರದ ಮೇಲೆ ನೀವು ನಿಮ್ಮ ಜಮೀನಿಗೆ ಹೋಗಲು ಕಾಲುದಾರಿಯಿದೆಯೋ, ಬಂಡಿದಾರಿಯಿದೆಯೋ ಅಥವಾ ಡಾಂಬಾರು ರಸ್ತೆಗಳಿದೆಯೋ ಎಂಬುದನ್ನು ಚೆಕ್ ಮಾಡಬಹುದು.
ಮ್ಯಾಪ್ ನಲ್ಲಿ ಜಮೀನಿಗೆ ಹೋಗಲು ರಸ್ತೆಯಿದ್ದರೆ, ಈಗ ನಿಮ್ಮ ಜಮೀನಿಗೆಹೋಗಲು ರಸ್ತೆಯಿಲ್ಲದಿದ್ದರೆ ಆ ರಸ್ತೆ ಅತಿಕ್ರಮಣವಾಗಿದೆ ಎಂದರ್ಥ. ನೀವು ನಿಮ್ಮ ಜಮೀನಿಗೆ ಹೋಗಲು ರಸ್ತೆಯಿಲ್ಲವೆಂದು ಅದು ಅತಿಕ್ರಮಣವಾಗಿದೆಯೆ ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಬಹುದು.