ಬೆಂಗಳೂರು:- ಮುಂಬೈ ಕ್ರೈಂ ಬ್ರಾಂಚ್ ಪೊಲೀಸರ ಸೋಗಿನಲ್ಲಿ ವಂಚಿಸ್ತಿದ್ದ ಆರೋಪಿಗಳನ್ನು ಬೆಂಗಳೂರಿನಲ್ಲಿ ಅರೆಸ್ಟ್ ಮಾಡಲಾಗಿದೆ.
ವಸೀಂ, ಹಬೀಬುಲ್ಲ, ನಿಝಾಮುದ್ದೀನ್, ಮುಶ್ರಫ್ ಖಾನ್, ನೂರುಲ್ಲ ಖಾನ್, ಮೊಹಮದ್ ಉಮರ್, ಸೈಯದ್ ಅಹ್ಮದ್, ಸೈಯದ್ ಹುಸೇನ್ ಬಂಧಿತ ಆರೋಪಿಗಳು.
ಫೆಡೆಕ್ಸ್ ಕೊರಿಯರ್ ಪಾರ್ಸಲ್ ಹೆಸರಿನಲ್ಲಿ ಸೈಬರ್ ವಂಚನೆ ಮಾಡುತ್ತಿದ್ದರು. ಫೆಡೆಕ್ಸ್ ಕೊರಿಯರ್ ನಲ್ಲಿ ಕಾನೂನು ಬಾಹಿರ ಪಾರ್ಸಲ್ ಬಂದಿದೆ ಎಂದು ಬೆದರಿಕೆ ಹಾಕುತ್ತಿದ್ದರು. ನಿಮ್ಮ ಅಕೌಂಟ್ ನಲ್ಲಿ ಮನಿಲ್ಯಾಂಡ್ರಿಂಗ್ ಆಗುತ್ತಿರುವ ಮಾಹಿತಿ ಸಿಕ್ಕಿದೆ ಎಂದು ತಲೆಗೆ ಹುಳ ಬಿಡುತ್ತಿದ್ದರು.
ಆರ್ ಬಿ ಐ ನವರು ನಿಮ್ಮ ಅಕೌಂಟ್ ಫ್ರೀಝ್ ಮಾಡುವ ಸಾಧ್ಯತೆ ಇದೆ. ನಿಮ್ಮ ಬ್ಯಾಂಕ್ ಸ್ಟೇಟ್ಮೆಂಟ್ ನ್ನು ತನಿಖೆಗೆ ಒಳಪಡಿಸಬೇಕಿದೆ. ತನಿಖೆ ನಂತರ ನಿಮ್ಮ ಹಣ ವಾಪಾಸ್ ಕೊಡ್ತಿವಿ ಎಂದು ಬೆದರಿಕೆ ಹಾಕುತ್ತಿದ್ದರು.
ಹೆಚ್ ಡಿ ಎಫ್ ಸಿ ಅಕೌಂಟ್ ನಿಂದ 66 ಲಕ್ಷ, ಸ್ಮಾಲ್ ಫೈನಾನ್ಸ್ ಬ್ಯಾಂಕ್ ನಿಂದ 42 ಲಕ್ಷ ಹಣ ಹಾಕಿಸಿಕೊಂಡಿದ್ದ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ ಪೊಲೀಸರು. ಈ ಹಣವನ್ನು ದಾವಣಗೆರೆಯ ಆರ್ ಬಿ ಎಲ್ ಬ್ಯಾಂಕ್ ನಿಂದ ವಿತ್ಡ್ರಾ ಮಾಡಿರುವುದು ತನಿಖೆ ವೇಳೆ ತಿಳಿದುಬಂದಿದೆ. ಈ ಪ್ರಕರಣ ಸಂಬಂಧ ಎಂಟು ಜನ ಆರೋಪಿಗಳನ್ನ ಸೆನ್ ಪೊಲೀಸರು ಬಂಧಿಸಿದ್ದಾರೆ.
ಬಂಧಿತರಿಂದ 13 ಲಕ್ಷ ಹಣ, 11 ಮೊಬೈಲ್ ಫೋನ್, ಬ್ಯಾಂಕ್ ಪಾಸ್ ಬುಕ್, ಎಟಿಎಂ ಕಾರ್ಡ್ ಗಳನ್ನು ವಶಕ್ಕೆ ಪಡೆಯಲಾಗಿದೆ. ವಿವಿಧ ಬ್ಯಾಂಕ್ ಗಳ 148 ಖಾತೆಗಳು ಫ್ರೀಝ್ ಮಾಡಲಾಗಿದೆ.