ಬೆಂಗಳೂರು: ಮಾಜಿ ಸಂಸದ ಡಿ ಕೆ ಸುರೇಶ್ ತಂಗಿ ಎಂದು ಹೇಳಿಕೊಂಡು ಕೋಟ್ಯಾಂತರ ರೂಪಾಯಿ ವಂಚನೆ ಮಾಡಿರುವ ಪ್ರಕರಣ ರಾಜ್ಯದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐಶ್ವರ್ಯಗೌಡಗೆ ಮತ್ತೊಂದು ಸಂಕಷ್ಟ ಎದುರಾಗಿದೆ.
ಆರೋಪಿ ಐಶ್ವರ್ಯಗೌಡ ಮನೆಯಲ್ಲಿ ಅಪಾರ ಪ್ರಮಾಣದ ಚಿನ್ನ, ಬೆಳ್ಳಿ, ಐಷಾರಾಮಿ ಕಾರುಗಳು ಪತ್ತೆಯಾಗಿದ್ದು, ಕೋಟ್ಯಾಂತರ ಹಣ ವಹಿವಾಟು ಪತ್ತೆಯಾಗಿವೆ. ಈ ಹಲವು ದಾಖಲೆಗಳು ಸಿಕ್ಕಿರುವುದರಿಂದ ಪ್ರಕರಣದ ತನಿಖಾಧಿಕಾರಿ ಭರತ್ ರೆಡ್ಡಿ ಅವರು ಐಶ್ವರ್ಯಳ ಹಣ ವರ್ಗಾವಣೆ ಪರಿಶೀಲಿಸುವಂತೆ ಇಡಿ ಗೆ ಪತ್ರ ಬರೆದಿದ್ದಾರೆ.
ಸಂಪತ್ತು ನಿಮ್ಮನ್ನು ಹುಡುಕಿಕೊಂಡು ಬರಬೇಕಾ.? ಹಾಗಿದ್ರೆ ಈ ದಿನಗಳಲ್ಲಿ ಪೊರಕೆ ಖರೀದಿಸಬಾರದು.!
ಈ ಹಿಂದೆ ಭರತ್ ರೆಡ್ಡಿ ಅವರು ಐಟಿ ಅಧಿಕಾರಿಗಳಿಗೂ ಪತ್ರ ಬರೆದಿದ್ದರು. ಇದೀಗ ಇಡಿಗೆ ಪತ್ರ ಬರೆದಿದ್ದಾರೆ. ಹೀಗಾಗಿ ಐಶ್ವರ್ಯಗೆ ಡಬಲ್ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.