ಬೆಂಗಳೂರು: ವಾರ್ತಾ ಇಲಾಖೆಯಿಂದ ಮಾನ್ಯತೆ ಕಾರ್ಡ್ ಪಡೆದಂತ ಪತ್ರಕರ್ತರಿಗೆ ಕೆ ಎಸ್ ಆರ್ ಟಿ ಸಿಯ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಲು ನೀಡಿರುವಂತ ಬಸ್ ಪಾಸ್ ಅವಧಿಯನ್ನು ವಿಸ್ತರಿಸಲಾಗಿದೆ. ಈ ಕುರಿತಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮುಖ್ಯ ಸಂಚಾರ ವ್ಯವಸ್ಥಾಪಕರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ದಿನಾಂಕ 31-12-2021ರವರೆಗೆ ವಾರ್ತಾ ಇಲಾಖೆ ಯಿಂದ ಮಾನ್ಯತೆ ,
ಕಾರ್ಡ್ ಪಡೆದ ಪತ್ರಕರ್ತರಿಗೆ ಕೆ ಎಸ್ ಆರ್ ಟಿ ಸಿ ಬಸ್ ಗಳಲ್ಲಿ ಪ್ರಯಾಣಿಸಲು ಸ್ಮಾರ್ಟ್ ಕಾರ್ಡ್ ಗಳ ಬಸ್ ಪಾಸ್ ವಿತರಿಸಲಾಗಿದೆ. ಈ ಕಾರ್ಡ್ ಗಳ ಅವಧಿ ನವೀಕರಣಕ್ಕಾಗಿ ಮುದ್ರಣ ಕಾರ್ಯದಲ್ಲಿ ವಿಳಂಬವಾಗುತ್ತಿರುವ ಹಿನ್ನಲೆಯಲ್ಲಿ, ಮಾನ್ಯತೆ ಅವಧಿ ವಿಸ್ತರಿಸುವಂತೆ ವಾರ್ತಾ ಇಲಾಖೆ ಕೋರಿದೆ. ಈ ಹಿನ್ನಲೆಯಲ್ಲಿ ಈ ಹಿಂದೆ ವಿತರಿಸಿರುವಂತ ಬಸ್ ಪಾಸ್ ಸ್ಮಾರ್ಟ್ ಕಾರ್ಡ್ ಗಳನ್ನು ದಿನಾಂಕ 28-02-2022ರವರೆಗೆ ವಿಸ್ತರಿಸಿರೋದಾಗಿ ತಿಳಿಸಿದ್ದಾರೆ.
