ಬೆಂಗಳೂರು: ವಿದೇಶದಿಂದ ಬೆಂಗಳೂರಿಗೆ ಬಂದ ನಾಲ್ವರಿಗೆ ಕೊರೊನಾ ಸೋಂಕು ಪತ್ತೆಯಾಗಿದೆ. ಲಂಡನ್ ಮತ್ತು ಕುವೈತ್ ನಿಂದ ಬೆಂಗಳೂರಿನ ಅಂತರಾಷ್ಟೀಯ ವಿಮಾನ ನಿಲ್ದಾಣಕ್ಕೆ ಬಂದ ನಾಲ್ವರಿಗೆ ಸೋಂಕು ಪತ್ತೆಯಾಗಿದೆ. ಇಬ್ಬರು ಮಹಿಳೆಯರು ಇಬ್ಬರು ಪುರುಷರು ಸೇರಿದಂತೆ ನಾಲ್ವರಿಗೆ ಪಾಸಿಟಿವ್ ಕಾಣಿಸಿಕೊಂಡಿದ್ದು,
ಸಿಲಿಕಾನ್ ಸಿಟಿ ಜನರು ಓಮಿಕ್ರಾನ್ ಸೋಂಕಿನ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಸೋಂಕಿತರೆಲ್ಲರನ್ನ ಬೋರಿಂಗ್ ಆಸ್ವತ್ರೆಯಲ್ಲಿ ಐಸುಲೇಷನ್ ಗೆ ರವಾನೆ ಮಾಡಲಾಗಿದೆ. ಸದ್ಯ ಹೆಚ್ಚಿನ ಟೆಸ್ಟ್ಗೆ ಶ್ಯಾಂಪಲ್ ಪಡೆದು ಜಿನೋಟಿಕ್ ಸೀಕ್ವೆನ್ಸ್ ಗೆ ಕಳಿಸಿರುವ ಅಧಿಕಾರಿಗಳು ಸೋಂಕಿತರ ಜೊತೆಯಲ್ಲಿ ಬಂದವರ ವಿಳಾಸ ಪೋನ್ ನಂಬರ್ ಪಡೆದು ಹೋಂ ಕ್ವಾರಂಟೈನ್ ಗೆ ಸೂಚನೆ ನೀಡಿದ್ದಾರೆ.
