ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಎರ್ಲಪಾಡಿ ಕರ್ವಾಲು ವಿಷ್ಣು ಮೂರ್ತಿ ದೇವಾಲಯಕ್ಕೆ ಖ್ಯಾತ ಕ್ರಿಕೆಟಿಗ ರವಿಶಾಸ್ತ್ರಿ ಭೇಟಿ ನೀಡಿದರು. ಮೂಲ ನಾಗದೇವರಿಗೆ ಪಂಚಾಮೃತ ಅಭಿಷೇಕ, ಎಳನೀರಿನ ಅಭಿಷೇಕ , ಕಲ್ಪೋಕ್ತ ಪೂಜೆ, ನಾಗತಂಬಿಲ ಸೇವೆ ಅರ್ಪಣೆ ಮಾಡಿದರು.
ಆಲೂಗಡ್ಡೆ ಒಳ್ಳೆಯದು, ಆದ್ರೆ… ಈ ಎರಡು ಸಮಸ್ಯೆ ಇರುವವರು ಯಾವುದೇ ಕಾರಣಕ್ಕೂ ತಿನ್ನಬಾರದು.!
ಭಾರತ ತಂಡದ ಮಾಜಿ ಕ್ಯಾಪ್ಟನ್ ರವಿಶಾಸ್ತ್ರಿ ಹಿರಿಯರು ಕರ್ವಾಲು ಮೂಲದವರು. 50 ವರ್ಷಗಳ ಹಿಂದೆ ರವಿ ಶಾಸ್ತ್ರಿ ಹಿರಿಯರು ಎರ್ಲಪಾಡಿ ತೊರೆದಿದ್ದರು.
ಸಂತಾನ ಇಲ್ಲದೆ ಕೊರಗಿದ್ದ ರವಿಶಾಸ್ತ್ರಿ ದಂಪತಿಗಳು ದಶಕಗಳ ಹಿಂದೆ ಎರ್ಲಪಾಡಿಗೆ ಭೇಟಿ ನೀಡಿದ್ದರು. ಆಗ ನಾಗನ ಸೇವೆ ಮಾಡಿದ ನಂತರ ರವಿ ಶಾಸ್ತ್ರಿ ಹೆಣ್ಣು ಮಗುವಿನ ತಂದೆಯಾದರು. ಆ ಬಳಿಕ ನಿರಂತರವಾಗಿ ಎರ್ಲಪಾಡಿಗೆ ಭೇಟಿ ನೀಡುತ್ತಿದ್ದಾರೆ.