ಚಿತ್ರದುರ್ಗ: ಒಳಮೀಸಲಾತಿ ಕೂಡಲೇ ಜಾರಿ ಮಾಡುವಂತೆ ಮಾಜಿ ಸಚಿವ ಹೆಚ್. ಆಂಜನೇಯ ಆಗ್ರಹಿಸಿದ್ದಾರೆ. ಒಳಮೀಸಲಾತಿ ಜಾರಿ ಮಾಡಿ ಇಲ್ಲವೇ ಬೀದಿಗಿಳಿದು ಹೋರಾಟ ಮಾಡುವುದು ಎಚ್ಚರಿಕೆ ನೀಡಿದ್ದಾರೆ.
ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಳಂಬ ಮಾಡಿದರೆ ಸಹಿಸಲ್ಲ. ಬೀದಿಗಳಿದು ಹೋರಾಟ ಮಾಡುತ್ತೇವೆ. ಈಗಿರುವ ಎಂಪರಿಕಲ್ ಡಾಟಾ ನೋಡಿಒಳ ಮೀಸಲಾತಿ ಜಾರಿಗೊಳಿಸಿ. ನಂತರ ಮತ್ತೊಮ್ಮೆ ಸಮಾಜಿಕ ಶೈಕ್ಷಣಿಕ ಜಾತ ಗಣತಿ ಮಾಡಿರಿ. ಅನಾವಶ್ಯಕ ವಿಳಂಬ ಸಲ್ಲದು. ಕೆಲವರು ಒಳಮೀಸಲಾತಿ ವಿರುದ್ಧ ಮಾತಾಡುತ್ತಿದ್ದಾರೆ, ಅವರ ಮಾತನ್ನು ಸಿಎಂ ಕೇಳಬಾರದು. ಏ.10ರೊಳಗೆ ಒಳಮೀಸಲಾತಿ ಜಾರಿ ಮಾಡಿ ಇಲ್ಲವೇ ಬೀದಿಗಿಳಿದು ಹೋರಾಟ ಮಾಡುವುದು ಖಚಿತ ಎಂದು ಸರ್ಕಾರ ಹಾಗೂ ಸಿಎಂಗೆ ಮನವಿ ಮೂಲಕ ಎಚ್ಚರಿಕೆ ನೀಡಿದರು.