ಹಾಸನ: ಪಾದಯಾತ್ರೆಗೆ ಹಾಸನದಿಂದ ಏಳುವರೆ ಸಾವಿರ ಜನರು ಹೊರಟಿದ್ದೇವೆ ಅಂತ ಮಾಜಿ ವಿಧಾನ ಪರಿಷತ್ ಸದಸ್ಯ ಗೋಪಾಲಸ್ವಾಮಿ ತಿಳಿಸಿದ್ದಾರೆ. ಸಿದ್ದರಾಮಯ್ಯ, ಡಿಕೆಶಿ ನಾಯತ್ವದ ಪಾದಯಾತ್ರೆಗೆ ಸಂಪೂರ್ಣ ಬೆಂಬಲ ಕೊಟ್ಟು ಪಾದಯಾತ್ರೆಯಲ್ಲಿ ಭಾಗಿಯಾಗುತ್ತಿದ್ದೇವೆ. ಈ ಯೋಜನೆಯಿಂದ ಕೋಟ್ಯಾಂತರ ಜನರಿಗೆ ಅನುಕೂಲ ಇದೆ. ಬಿಜೆಪಿ ಸರ್ಕಾರದ ಗೊಡ್ಡು ಬೆದರಿಕೆಗೆ ಹೆದರೋದಿಲ್ಲ.
ಇಷ್ಡು ದಿನ ಇಲ್ಲದ ಕೊರೊನಾವನ್ನು ಈಗ ಇದೆ ಎಂದು ಹೆದರಿಸುತ್ತಿದ್ದಾರೆ. ಕೊರೊನಾ ನಿಯಮ ಪಾಲಿಸಿ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದೇವೆ. ನಾವು ರಾಮನನಗರದ ಚಿಕ್ಕನಹಳ್ಳಿ ಗೆ ನಾವು ಹೋಗಿ ಸೇರಿ 13 ಕಿಲೋಮೀಟರ್ ಪಾದಯಾತ್ರೆ ಮಾಡುತ್ತೇವೆ. 125. ಬಸ್, 100 ಮಿನಿಬಸ್ ಸಾವಿರಾರು ಕಾರುಗಳಲ್ಲಿ ಕಾರ್ಯಕರ್ತರು ನಾಯಕರು ಹೊರಡುತ್ತೇವೆ ಅಂತ ಹೇಳಿದರು.
