ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಬೇಗೂರು ಪೊಲೀಸ್ ಠಾಣೆಯ ಮಹಿಳಾ ಪಿಎಸ್‌ಐ ಹಾಗೂ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದ ಆರೋಪಿ ಮೇಕೆದಾಟು ಪಾದಾಯಾತ್ರೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಜೊತೆ ಕಾಣಿಸಿಕೊಂಡಿದ್ದಾನೆ.
ಹೊಣಕನಪುರ ಗ್ರಾಮದ ಸಿದ್ದರಾಜು ಬಿನ್ ಸಿದ್ದೇಗೌಡ ಎಂಬಾತ ಮತ್ತು ಅವನ ಕುಟುಂಬಸ್ಥರು ಮಂಗಳವಾರ ರಾತ್ರಿ ಪ್ರಕರಣವೊಂದರ ಮೇರೆಗೆ ಬಂಧಿಸಲು ತೆರಳಿದ್ದ ಸಮಯದಲ್ಲಿ ಮಹಿಳಾ ಪಿಎಸ್‌ಐ ಮತ್ತು ಪೇದೆಗಳ ಮೇಲೆ ಹಲ್ಲೆ ಮಾಡಿದ್ದಾರೆಂದು ಪೊಲೀಸರು ಈಗಾಗಲೇ ಹತ್ತು ಮಂದಿಯನ್ನು ಬಂಧಿಸಿದ್ದು, ಪ್ರಮುಖ ಆರೋಪಿಯಾದ ಸಿದ್ದರಾಜು ರಾತ್ರಿ ಪರಾರಿಯಾಗಿದ್ದ.

ಆರೋಪಿ ಸಿದ್ದುರಾಜು ಇದೀಗ ಮೇಕೆದಾಟು ಪಾದಯಾತ್ರೆ ಸಮಯದಲ್ಲಿ ಮಾಜಿ ಮುಖ್ಯಮಂತ್ರಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಳಿ ತೆರಳಿ ಚಾಮರಾಜನಗರ ಎಸ್ಪಿಗೆ ಕರೆ ಮಾಡಿಸಿದ್ದು , ಸಿದ್ದರಾಮಯ್ಯ ಎಸ್ಪಿಗೆ ಕರೆ ಮಾಡಿ ಘಟನೆ ವಿವರಣೆ ಕೇಳಿದರು. ನಂತರ ನಿವ್ಯಾಕೆ ಲೇಡಿ ಪಿಎಸ್ಐ ಮೇಲೆ ಹಲ್ಲೆ ಮಾಡಿದ್ದೀರ ಇನ್ಯಾರನ್ನು ಬಂದಿಸಲ್ಲವಂತೆ ಎಂದು ಹೇಳಿರುವ ವೀಡಿಯೋ ವೈರಲ್ ಆಗಿದೆ.
ಆರೋಪಿ ಸಿದ್ದರಾಜು ಮೇಲೆ 2019 ರಲ್ಲಿಯೇ ರೌಡಿ ಶೀಡರ್ ತೆರೆಯಲಾಗಿದ್ದು, ರಾತ್ರಿ ಪೊಲೀಸರ ಮೇಲೆ ಹಲ್ಲೆ ಪ್ರಕರಣದಲ್ಲಿ 323, 354, 143, 341,353,332, 506, 307, 327, 316, ರೇ/ವಿ 149 ಐಪಿಸಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.